ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಕುಸ್ತಿ ಫೆಡರೇಶನ್ ಆಫ್ ಇಂಡಿಯಾಗೆ ನೂತನ ಅಧ್ಯಕ್ಷ
ರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಖ್ಯಾತ ಕುಸ್ತಿ ಪಟು ವಿನೇಶ್ ಫೋಗಟ್ ತಮ್ಮ ಎರಡು ಪ್ರಶಸ್ತಿಗಳನ್ನು ರಸ್ತೆಯಲ್ಲೇ ಇಟ್ಟು ತೆರಳಿದ್ದಾರೆ.
ಭಾರತೀಯ ಕುಸ್ತಿ ಸಂಸ್ಥೆಗಳ ಒಕ್ಕೂಟಕ್ಕೆ ಅಧ್ಯಕ್ಷರಾಗಿ ಸಂಜಯ್ ಸಿಂಗ್ ಆಯ್ಕೆ ಯಾದ ಹಿನ್ನಲೆಯಲ್ಲಿ ಕುಸ್ತಿಪಟುಗಳು ಈಗಾಗಲೇ ಕೇಂದ್ರ ಸರ್ಕಾರದಿಂದ ತಮಗೆ ಕೊಡಲಾಗಿದ್ದ ಪ್ರಶಸ್ತಿಗಳನ್ನು ಹಿಂದಕ್ಕೆ ನೀಡುತ್ತಿದ್ದಾರೆ.
ಈ ಹಿಂದೆ ಸಂಜಯ್ ಸಿಂಗ್ ಆಯ್ಕೆ ಬೆನ್ನಲ್ಲೇ ಸಾಕ್ಷಿ ಮಲ್ಲಿಕ್ ಕುಸ್ತಿ ಪಂದ್ಯಕ್ಕೆ ವಿದಾಯವನ್ನ ಘೋಷಿಸಿದ್ದರು. ಅತ್ತ ಒಲಿಂಪಿಯನ್ ಬಜರಂಗ್ ಪುನಿಯಾ ಅವರಿಗೆ ದೊರೆತ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀಯನ್ನ ಹಿಂದಿರುಗಿಸಿದ್ದರು.
ಈಗ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಕೂಡ ತಮ್ಮ ಸಾಧನೆಗಾಗಿ ಕೇಂದ್ರ ಸರ್ಕಾರ ನೀಡಿದ್ದ ‘ಖೇಲ್ ರತ್ನ’ ಹಾಗೂ ‘ಅರ್ಜುನ ಪ್ರಶಸ್ತಿ’ಗಳನ್ನು ಪ್ರಧಾನಿ ನಿವಾಸಕ್ಕೆ ಸಾಗುವ ಮಾರ್ಗ ಮಧ್ಯೆದಲ್ಲೇ ಇಟ್ಟು ತೆರಳಿದ್ದಾರೆ. ಪ್ರಾರಂಭದಲ್ಲಿ ಪ್ರಧಾನಿ ಮೋದಿಯವರಿಗೆ ಪ್ರಶಸ್ತಿ ಒಪ್ಪಿಸಬೇಕು ಎಂದು ಮನವಿ ಮಾಡಿಕೊಳ್ಳಲಾಯ್ತು. ಆಗ ಪೊಲೀಸರು ಪ್ರಧಾನಿ ಭೇಟಿಗೆ ಅವಕಾಶ ಕೊಡದ ಹಿನ್ನಲೆಯಲ್ಲಿ ನಡು ರಸ್ತೆಯಲ್ಲೇ ಇಟ್ಟು ನಡೆದ ಘಟನೆ ನಡೆಯಿತು.

ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಸ್ತಿಪಟು ವಿನೇಶ್ ಫೋಗಟ್, ನ್ಯಾಯಕ್ಕಾಗಿ ಕುಸ್ತಿಪಟುಗಳು ಸಂಘರ್ಷ ನಡೆಸುತ್ತಿರುವ ಸಂದರ್ಭದಲ್ಲಿ ಈ ಪ್ರಶಸ್ತಿಗಳು ತಮ್ಮ ಬೆಲೆ ಕಳೆದುಕೊಂಡಿವೆ ಎಂದಿರುವ ಹೇಳಿಕೆ ಸಧ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಈಡಾಗಿದೆ.