ಹುಬ್ಬಳ್ಳಿ: ಇದ್ಯಾವುದೋ ಒಂದು ಕೇಸ್ ಅದನ್ನ ಇಟ್ಕೊಂಡು ಬಿಜೆಪಿ ರಾಜ್ಯದಲ್ಲಿ ಬೆಂಕಿ ಹಚ್ಚೋ ಕೆಲಸ ಮಾಡುತ್ತಿದೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಜನ್ಮಭೂಮಿ ಹೋರಾಟ ಯಾವುದೋ ಒಂದು ಕೇಸ್, ಆದರೆ ಬೇರೆ ಬೇರೆ ಕೇಸ್ ಇದೆಯಲ್ಲಾ ಎಂದು ಅಬ್ಬಯ್ಯ ಕಿಡಿಕಾರಿದರು.
ಬಿಜೆಪಿಯವರಿಗೆ ಇಲೆಕ್ಷನ್ ಬಂದಾಗ ಯಾವುದಾದರೂ ಒಂದು ಇಸ್ಯೂ ಬೇಕು, ಶ್ರೀಕಾಂತ್ ಪೂಜಾರಿ ಬಂಧನ ಅದು ರೂಟಿನ್ ಪ್ರೊಸೆಸ್, ಪೊಲೀಸರ ರೂಟಿನ್ ಕೆಲಸಕ್ಕೆ ಇವರು ಬಣ್ಣ ಹಚ್ಚಿದ್ದಾರೆ, ಬಣ್ಣ ಹಚ್ಚಿ ಮೆಸೆಜ್ ಪಾಸ್ ಮಾಡಿ ಜನರ ಕೋಮು ಭಾವನೆ ಕೆರಳಿಸೋ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆರ್ ಅಶೋಕ ಅವರು ಅಭಿವೃದ್ಧಿ ವಿಷಯ ಇಟ್ಟಕೊಂಡು ಪ್ರತಿಭಟನೆ ಮಾಡಲಿ, ರಾಜ್ಯದ ಜನರು ಅನೇಕ ಸಮಸ್ಯೆ ಎದುರಿಸುತ್ತಾರೆ, ಅದರ ಬಗ್ಗೆ ಪ್ರತಿಭಟನೆ ಮಾಡಲಿ, ಅದು ಬಿಟ್ಟು ಇಲೆಕ್ಷನ್ ಗಿಮಿಕ್ ಮಾಡೋ ಅವಶ್ಯಕತೆ ಇಲ್ಲ, ಹಳೇ ಕೇಸ್ ಓಪನ್ ಮಾಡಿ ಪೊಲೀಸರು ನೋಡತೀದ್ದಾರೆ, ಇದು ರಾಜ್ಯದ ಎಲ್ಲ ಕಡೆ ನಡೀತಿದೆ ಎಂದರು.
ಬರಗಾಲ ಬಂದರೂ ನಾವು ಸ್ಕೀಮ್ ಕೊಟ್ಟಿದ್ದೇವೆ, ಹೀಗಾಗಿ ಅವರಿಗೆ ಯಾವ ವಿಷಯ ಇಲ್ಲ, ಜನ ಸಿದ್ದರಾಮಯ್ಯ ಬಂದ ಮೇಲೆ ನಿಟ್ಟುಸಿರು ಬಿಟ್ಟಿದ್ದಾರೆ, ಇದನ್ನು ಅಳಸಿಹಾಕಲು ಬಿಜೆಪಿ ಬೆಂಕಿ ಹಚ್ಚೋ ಕೆಲಸ ಮಾಡುತ್ತಿದೆ, ಅವರೇನು ರಾಮ ಜನ್ಮಭೂಮಿ ಕೇಸ್ ಎಂದು ನೋಡಿದ್ದಾರೆ ಎಂದು ಪ್ರಶ್ನಿಸಿದರು.
ಪೊಲೀಸರು ಸುಮ್ನೆ ಕೇಸ್ ಒಪನ್ ಮಾಡಿದ್ದಾರೆ, ಆದ್ರೆ ಇದನ್ನು ಬಿಜೆಪಿ ರಾಜಕಾರಣ ಮಾಡುತ್ತಿದೆ, ಈದ್ಗಾ ವಿಷಯದ ಮೇಲೆ ಅವರು ದೇಶದಲ್ಲಿ ನೆಲೆ ಊರಿದ್ದಾರೆ, ಸರ್ಕಾರದ ಬಗ್ಹೆ ಮಾತಾಡೋಕೆ ಅವರಿಗೆ ನೈತಿಕತೆ ಇಲ್ಲ, ಜನರ ಭಾವನೆಗೆ ಧಕ್ಕೆ ತರೋದೆ ಬಿಜೆಪಿ ಅಜೆಂಡಾ ಎಂದು ಕಿಡಿಕಾರಿದರು.