Animal Movie Win is Dangerous: ಅನಿಮಲ್ ಸಿನಿಮಾ ಗೆಲುವು ಅಪಾಯಕಾರಿ: ಜಾವೇದ್ ಅಖ್ತರ್​ ಆತಂಕ

ಬೆಂಗಳೂರು: ಹಸಿ-ಬಿಸಿ ದೃಶ್ಯ, ಸಹಿಸಲಾಗದ ಕ್ರೌರ್ಯ, ಮಹಿಳೆಯರ ಮೇಲೆ ಅತಿಯಾದ ದೌರ್ಜನ್ಯ ಹೊತ್ತು ಬಂದ ಚಿತ್ರ ಅನಿಮಲ್ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ್ದು,
ಎಲ್ಲರಲ್ಲೂ ಅಚ್ಚರಿಗೆ ಎಡೆಮಾಡಿತು. ಚಿತ್ರ ಬಿಡುಗಡೆ ಕಂಡು ಬಾಕ್ಸ್ ಆಫೀಸ್ ನಲ್ಲಿ ಜೋರಾಗಿ ಸದ್ದು ಮಾಡಿದ್ರೂ ವಿಮರ್ಶಕರ ದೃಷ್ಟಿಯಲ್ಲಿ ಸಿನಿಮಾ ಸೋತಿತ್ತು. ಇದೀಗ ಈ ಕುರಿತು ಮಾತನಾಡಿರುವ ಖ್ಯಾತ ಗೀತ ರಚನಕಾರ  ಜಾವೇದ್ ಅಖ್ತರ್​ ಈ ಸಿನಿಮಾದ ಗೆಲುವು ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು ‘ಒಂದು ಸಿನಿಮಾದಲ್ಲಿ ಹೀರೋ ತಮ್ಮ ಬೂಟು ನೆಕ್ಕು ಎಂದು ಮಹಿಳೆಗೆ ಹೇಳುತ್ತಾನೆ ಎಂದಾದರೆ, ಒಂದು ಸಿನಿಮಾದಲ್ಲಿ ಮಹಿಳೆಯರಿಗೆ ಹೊಡೆಯುವುದು ಓಕೆ ಎಂದು ಹೀರೋ ಹೇಳುತ್ತಾನೆ ಎಂದಾದರೆ, ಆ ಸಿನಿಮಾದ ಗೆಲುವು ಅಪಾಯಕಾರಿ’ ಎಂದು ನೇರವಾಗಿ ಖಂಡಿಸಿದ್ದಾರೆ.

ಅನಿಮಲ್ ಸಿನಿಮಾದ ಹೆಸರೇಳದೇ ಚಿತ್ರದ ಬಗ್ಗೆ ಕುಟುಕಿದ ಜಾವೇದ್​ ಅಖ್ತರ್​ ಅವರು, ಈಗ ಸಿನಿಮಾದವರಿಗಿಂತಲೂ ಪ್ರೇಕ್ಷಕರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಯಾವ ಸಿನಿಮಾವನ್ನು ಇಷ್ಟಪಡಬೇಕು ಎಂಬುದನ್ನು ಪ್ರೇಕ್ಷಕರು ನಿರ್ಧರಿಸಬೇಕು. ಒಳ್ಳೆಯ ಸಿನಿಮಾ ಮಾಡುವವರೂ ಇದ್ದಾರೆ. ಆದರೆ ಅಂಥವರ ಸಂಖ್ಯೆ ಕಡಿಮೆ. ಅವರಿಗೆ ನೀವು ಎಲ್ಲಿಯವರೆಗೆ ಬೆಂಬಲ ನೀಡುತ್ತೀರಿ ಎಂಬುದರ ಮೇಲೆ ಅಂಥ ಸಿನಿಮಾಗಳ ಭವಿಷ್ಯ ನಿರ್ಧಾರ ಆಗಿರುತ್ತದೆ. ಆದ್ರೆ ಇಂಥ ಸಿನಿಮಾಗಳನ್ನು ಇಷ್ಟಪಡಬಾರದು ಎಂದು ಪ್ರೇಕ್ಷಕರಿಗೆ ಕಿವಿಮಾತು ಹೇಳಿದ್ದಾರೆ.

More News

You cannot copy content of this page