ಬಾಬ್ರಿ ಮಸೀದಿ ಧ್ವಂಸದ ನಂತರ ನಡೆದ ಘಟನೆಗಳು ಪುನರಾವರ್ತನೆಯಾಗುವುದನ್ನು ನಾವು ಬಯಸುವುದಿಲ್ಲ.
ಅಯೋಧ್ಯೆ ಉದ್ಘಾಟನೆ ವೇಳೆ ಮುಸ್ಲಿಂಮರೆಲ್ಲರೂ ಮನೆಯಲ್ಲಿಯೇ ಇರಿ ಎಂದು ಮುಸ್ಲಿಂ ಸಮುದಾಯಕ್ಕೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಕರೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಲಲ್ಲಾ ಅವರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ದಿನಗಣನೆ ಶುರುವಾಗಿದೆ. ಜ.22 ರಂದು ನಡೆಯಲಿರುವ ಬೃಹತ್ ಕಾರ್ಯಕ್ರಮ ದೇಶವೇ ಎದುರು ನೋಡ್ತಿರುವ ಬೆನ್ನಲ್ಲೇ ಮುಸ್ಲಿಂ ರು ಮನೆ ಬಿಟ್ಟು ಹೊರ ಬರ್ಬೇಡಿ ಎಂದು ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕೋಮುವಾದ ಎಂದು ಭಾವಿಸಬೇಡಿ. ಅದು ತಪ್ಪಾಗುತ್ತೆ. ಯಾವುದೇ ರೀತಿಯ ಘರ್ಷಣೆಯಾಗದಂತೆ ಜನರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಭಾರತದಾದ್ಯಂತ ಸ್ವಯಂಸೇವಕರು ರೈಲು ಮತ್ತು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಯುವಕರಿರುವ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಒಂದೆರಡು ಮುಸ್ಲಿಮರು ಸಿಕ್ಕಿಹಾಕಿಕೊಂಡರೆ ಸಮಸ್ಯೆಯಾಗಬಹುದು. ಮುಸ್ಲಿಂ ಸಹೋದರರ ಹಿತಾಸಕ್ತಿ ಮತ್ತು ದೇಶದ ಶಾಂತಿಗಾಗಿ ಮುಸ್ಲಿಮರು ರೈಲಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿ ಮತ್ತು ಈ ಅವಧಿಯಲ್ಲಿ ಮನೆಯಲ್ಲೇ ಇರುವುದು ಸೂಕ್ತ ಎಂದು ಕರೆ ನೀಡಿದ್ದಾರೆ.