DJ HALLI CASE: ಸಮಾಜ ಸಮಾಜ ನಡುವೆ ದ್ವೇಷ ಬಿತ್ತುವ ಕೆಲಸ ಕಾಂಗ್ರೆಸ್ ಮಾಡ್ತಿದೆ: ವಿಜಯೇಂದ್ರ ಕಿಡಿ

ಬೆಂಗಳೂರು: ಡಿಜೆ ಹಳ್ಳಿ ಕೆಜಿ ಹಳ್ಳಿ ಘಟನೆಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದ ದೇಶದ್ರೋಹಿಗಳ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಬೇರೆ ಬೇರೆ ದೇಶದ್ರೋಹಿಗಳಿಗೂ ರಕ್ಷಣೆ ಮಾಡ್ತೀರಾ? ಸಮಾಜ ಸಮಾಜ ನಡುವೆ ದ್ವೇಷ ಬಿತ್ತುವ ಕೆಲಸ ಮಾಡ್ತಿದಾರೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಡಿಜೆಹಳ್ಳಿ ಕೆಜಿ ಹಳ್ಳಿ ಪ್ರಕರಣದಲ್ಲಿ ಅಮಾಯಕರ ರಕ್ಷಣೆ ಕುರಿತ ಡಿಕೆ ಶಿವಕುಮಾರ್ ಹೇಳಿಕೆಗೆ ನಗರದಲ್ಲಿ ಕಿಡಿ ಕಾರಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿನಾಶಕಾಲೇ ವಿಪರೀತ ಬುದ್ಧಿ. ಶ್ರೀ ರಾಮಮಂದಿರ ಉದ್ಘಾಟನೆ ವೇಳೆ ನಾವೆಲ್ರೂ ಒಂದು ಎಂಬ ಭಾವನೆ ಮೂಡಿದೆ. ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿದೆ. ಅಲ್ಪಸಂಖ್ಯಾತರಿಂದಲೇ ತಾವು ಅಧಿಕಾರಕ್ಕೆ ಬಂದಿರುವ ಭಾವನೆ ಕಾಂಗ್ರೆಸ್ ನಲ್ಲಿದೆ. ಡಿಜೆ ಹಳ್ಳಿ ಕೆಜಿ ಹಳ್ಳಿ ಘಟನೆಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದ ದೇಶದ್ರೋಹಿಗಳ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಬೇರೆ ಬೇರೆ ದೇಶದ್ರೋಹಿಗಳಿಗೂ ರಕ್ಷಣೆ ಮಾಡ್ತೀರಾ? ಸಮಾಜ ಸಮಾಜ ನಡುವೆ ದ್ವೇಷ ಬಿತ್ತುವ ಕೆಲಸ ಮಾಡ್ತಿದಾರೆ. ಇದನ್ನು ರಾಜ್ಯದ ಜನ ಕ್ಷಮಿಸಲ್ಲ ಎಂದು ವಾಗ್ದಾಳಿ ನಡೆಸಿದರು‌

“ಮೂರು ಡಿಸಿಎಂ ಡಿಕೆ ಶಿವಕುಮಾರ್ ರನ್ನ ಬಲಿ ಹಾಕಲು ಮಾಡಿರುವ ಯೋಜನೆ”

ಕಾಂಗ್ರೆಸ್ ನಲ್ಲಿ ತ್ರಿಬಲ್ ಡಿಸಿಎಂ ಚರ್ಚೆ ವಿಚಾರ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ವಿಧಾನಸಭೆಯಲ್ಲಿ 135 ಸ್ಥಾನ ಗೆದ್ದಿದ್ದಾರೆ ಅಂದ್ರೆ ಲೋಕಸಭೆಯಲ್ಲಿ ಎಲ್ಲ ಸ್ಥಾನ ಗೆದ್ದುಬಿಡುವ ಭ್ರಮೆಯಲ್ಲಿದ್ದಾರೆ. ಪಂಚರಾಜ್ಯಗಳ ಫಲಿತಾಂಶ ಬಳಿಕ ರಾಜ್ಯ ಕಾಂಗ್ರೆಸ್ ನವ್ರು ದಿಕ್ಕಾಪಾಲಾಗಿದ್ದಾರೆ. ಏನು ಮಾಡಬೇಕೆಂದು ಅವರಿಗೆ ತೋಚುತ್ತಿಲ್ಲ. ಈ ಸಂದರ್ಭದಲ್ಲಿ ಮತ್ತೆ ಮೂವರು ಡಿಸಿಎಂ ಸೃಷ್ಟಿಗೆ ಮುಂದಾಗಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಬಗ್ಗು ಬಡಿಯಬೇಕು, ಡಿಕೆ ಶಿವಕುಮಾರ್ ಅವರ ಸೊಕ್ಕು ಮುರಿಯಬೇಕು ಅನ್ನುವ ಉದ್ದೇಶದಿಂದ ಕಾಂಗ್ರೆಸ್ ನಲ್ಲಿರುವ ಮಹಾನ್ ನಾಯಕರು ಶಿವಕುಮಾರ್ ರನ್ನ ಬಲಿ ಹಾಕಲು ಮಾಡಿರುವ ಯೋಜನೆ ಇದು. ಅವರಿಗೆ ಯಶಸ್ವಿ ಸಿಗಲಿ ಅಂತ ನಾನೂ ಆಶಿಸ್ತೇನೆ ಎಂದು ವ್ಯಂಗ್ಯ ಮಾಡಿದರು.

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಹಿಂದೆಲ್ಲ ನಾವು ಅಲ್ಪಸಂಖ್ಯಾತರಿಗೆ ಉತ್ತಮ ಯೋಜನೆಗಳನ್ನು ಕೊಟ್ಟಿದ್ದೇವೆ. ಮೋದಿಯವ್ರು ತ್ರಿಬಲ್ ತಲಾಖ್ ನಿಷೇಧಿಸಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿದೆ, ಹತ್ತು ಸಾವಿರ ಕೋಟಿ ಅನುದಾನ ಕೊಡ್ತಿದೆ.
ಡಿಜೆ ಹಳ್ಳಿ, ಕೆಜಿ ಹಳ್ಳಿಯ ದೇಶದ್ರೋಹಿಗಳನ್ನು ನಿರಪರಾಧಿಗಳು ಅಂತ ಕಾಂಗ್ರೆಸ್ ಬಿಂಬಿಸಲು‌ ಹೊರಟಿದೆ.
ಇದು ಖಂಡನೀಯ, ಆಕ್ಷಮ್ಯ ಅಪರಾಧ. ಇದರ ಮೂಲಕ ಬೇರೆಯವರಿಗೂ ಕಾಂಗ್ರೆಸ್ ಪ್ರೇರಣೆ ಕೊಡ್ತಿದೆ ಎಂದರು.

ಕೋಮು ಗಲಭೆ ಸೃಷ್ಟಿಗೆ ಪುನೀತ್ ಕೆರೆಹಳ್ಳಿಗೆ ಬಿಜೆಪಿ ಫತ್ವಾ ನೀಡಿದೆ ಎಂಬ ಬಿಕೆ ಹರಿಪ್ರಸಾದ್ ಟ್ವೀಟ್ ವಿಚಾರಕ್ಕೆ ಕೌಂಟರ್ ಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ‌,
ಬಿಕೆ‌ ಹರಿಪ್ರಸಾದ್ ಅವರನ್ನ ಮಾಧ್ಯಮಗಳು ಗಂಭೀರವಾಗಿ ತೆಗೆದುಕೊಳ್ತಿಲ್ಲ. ಹೀಗಾಗಿ ಮನ ಬಂದಂತೆ ಮಾತಾಡ್ತಿದಾರೆ ಅವರ ಹೇಳಿಕೆಗಳು ಅವರಿಗೇ ಅರ್ಥ ಆಗ್ತಿಲ್ಲ ಅನಿಸುತ್ತೆ. ಆದ್ರೆ ‌ಮಾಧ್ಯಮಗಳಲ್ಲಿ ಪ್ರಚಾರ ಪಡೆಯೋ ಕೆಲಸ ಮಾಡ್ತಿದಾರೆ ಎಂದು ಕುಟುಕಿದರು.

More News

You cannot copy content of this page