#UITheMovie: ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದ ‘ಯುಐ’ ಉಪ್ಪಿ!

ಬೆಂಗಳೂರು: ಇತ್ತೀಚೆಗೆ ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ವಿಭಿನ್ನ ಕಥೆಯುಳ್ಳ ಸಿನಿಮಾಗಳನ್ನು ಮಾಡುವ ಮುಖೇನ ಎಲ್ಲರ ಗಮನ ಸೆಳೆಯುತ್ತಿದೆ.
ಕೆಜಿಎಫ್, ಕಾಂತಾರ, ಕಾಟೇರಾ ಹೀಗೆ ಕೆಲ ಸಿನಿಮಾಗಳು ವೀಕ್ಷಕರನ್ನು ಹಿಡಿದಿಟ್ಟಿವೆ. ಈ ಸಾಲಿಗೆ ಇದೀಗ ನಟ ಉಪೇಂದ್ರ ಅವರ ‘ಯುಐ’ ಸಿನಿಮಾ ಸೇರುವ ನಿರೀಕ್ಷೆ ಹೆಚ್ಚಿದೆ.

‘ಯುಐ’ ಟೀಸರ್ ನೋಡುಗರ ಸೆಳೆಯುತ್ತಿದ್ದು, ಉಪ್ಪಿ ತಮ್ಮ ವಿಶೇಷ ಹಾಗು ವಿನೂತನ ನಟನೆಯೊಂದಿಗೆ ಅಭಿಮಾನಿಗಳಿಗೆ ರಸದೂತಣ ನೀಡಲಿದ್ದಾರೆ.
ಬರೋಬ್ಬರಿ ಎಂಟು ವರ್ಷಗಳ ನಂತರ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಸಿನಿಮಾದ ಟೀಸರ್ ನಲ್ಲಿ ಕಂಡುಬರುವ ಪಾತ್ರಗಳು ಹಾಲಿವುಡ್ ಶೈಲಿ ಮೀರಿಸುವಂತಿವೆ.

ಯುಐ ಸಿನಿಮಾದಲ್ಲಿ ಉಪ್ಪಿ ಕೊಂಬಿರೋ ಕುದುರೆ ಏರಿ ಬರ್ತಿದ್ದಾರೆ. ಯುಐ ಪ್ಯಾನ್ ಇಂಡಿಯಾ ಮೂವಿ ಆಗಿದ್ದು, ಕಿವಿಯೊಳಗೆ ಗುಂಯ್‌ಗುಡುವಂತೆ ಯು…. ಐ… ಯು… ಐ… ಎಂಬ ಹಿನ್ನೆಲೆ ಸಂಗೀತದೊಂದಿಗೆ ಯುಐ ಹೊಸ ಜಗತ್ತಿಗೆ ಕರೆದೊಯ್ಯಲಿದೆ.

ಈ ಸಿನಿಮಾ ಆರಂಭದಲ್ಲಿಯೇ ಒಬ್ಬ ತರುಣಿ ಹಾಗು ಯುವಕ ಕಾಣಿಸುತ್ತಾರೆ. ಈ ವೇಳೆ ‘ಎಐ ಜಗತ್ತು ಅಲ್ಲ, ಇದು ಯುಐ ಜಗತ್ತು’ ಎಂಬ ಹಿನ್ನೆಲೆ ಧ್ವನಿ ಕೇಳಿಸುತ್ತದೆ. ಮರದ ಟೊಂಗೆಯಲ್ಲಿ ಹೆಬ್ಬಾವೊಂದು ಸರಿಯುತ್ತದೆ. ಇದರ ಹಿನ್ನೆಲೆ ಶಬ್ದ ಯುಐ… ಯು… ಐ.. ಸದ್ದಿನೊಂದಿಗೆ ಹೊಸದೊಂದು ಕಾಲ್ಪನಿಕ ಲೋಕಕ್ಕೆ ವೀಕ್ಷಕರನ್ನು ಕರೆದೊಯ್ಯುತ್ತದೆ. ನಂತರ ಕಾಡುಮೇಡುಗಳನ್ನು ದಾಟಿ ಒಂದು ನಗರದೊಳಗಿನ ಲೋಕವನ್ನು ತೋರ್ಪಡಿಸುತ್ತದೆ ಈ ಸಿನಿಮಾ. ಅಲ್ಲಿಂದ ಒಬ್ಬ ರಾಜನಂತಹ ದೈತ್ಯ ವ್ಯಕ್ತಿ ಇಳಿಯುತ್ತಾ ಬರುತ್ತಾನೆ. ಇದೇ ವೇಳೆ ಯಾವುದೋ ಹಾಸ್ಯ ಜಗತ್ತೋ ಅಥವಾ ಫ್ಯಾಂಟಸಿ ವರ್ಲ್ಡೋ ಎಂಬ ಗೊಂದಲ ಮೂಡಿಸುತ್ತದೆ. ಮುಖಕ್ಕೆ ಜೋಕರ್‌ ಬಣ್ಣ ಹಚ್ಚಿರುವ ಹಲವರು ಕಾಣಿಸುತ್ತಾರೆ. ಸಾಧು ಕೋಕಿಲ ಲಕಲಕ ಎಂದು ನಗುವಿನೊಂದಿಗೆ ಸಾಗಿ ಯುದ್ಧದ ಜಗತ್ತಿನತ್ತ ತೆರಳುತ್ತದೆ.
ಸಾವಿರಾರು ಕೈದಿಗಳನ್ನು ಬಂಧಿಸಿಟ್ಟ ಜೈಲು ಕಾಣಿಸುತ್ತದೆ. ಕುದುರೆ ಮೇಲೆ ಒಬ್ಬ ಬಂದಾಗ ಜನರು ಹರ್ಷ ವ್ಯಕ್ತಪಡಿಸುತ್ತಾರೆ. ಈ ಸಂದರ್ಭದಲ್ಲಿ ಉಪೇಂದ್ರನ ಯುಐ ಮುಖ ತೋರಿಸಲಾಗುತ್ತದೆ.

ಈ ಸಿನಿಮಾದಲ್ಲಿ ಉಪೇಂದ್ರ ಮತ್ತು ರೀಷ್ಮಾ ನಾಣಯ್ಯ, ಸಾಧು ಕೋಕಿಲಾ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.
ಈ ಸಿನಿಮಾದಲ್ಲಿ ಗ್ರಾಫಿಕ್ಸ್ ನೊಂದಿಗೆ ಕಂಪ್ಯೂಟರ್ ಕ್ಯಾಮೆರಾ ಬಳಸಲಾಗಿದೆ. ಟೀಸರ್ ನಲ್ಲಿ ತಂತ್ರಜ್ಞಾನದ ಬಳಕೆ ವಿಭಿನ್ನ ವಾಗಿದೆ. ಈ ಟೀಸರ್ ನೋಡುಗರನ್ನು ಕುತೂಹಲಕ್ಕೆ ಎಡೆಮಾಡಿಕೊಡುತ್ತದೆ. ಅಲ್ಲದೆ ತಮ್ಮ ನಿರ್ದೇಶನದ ಸಿನಿಮಾಗಳಲ್ಲಿ ಪ್ರೇಕ್ಷಕರ ತಲೆಗೆ ಹುಳಬಿಟ್ಟು ಚಿಂತಿಸುವಂತೆ ಮಾಡುವ ನಟ ಉಪೇಂದ್ರ. ಅವರ ಬಿಗ್ ಬಜೆಟ್ ನ ಯುಐ ಮುಂದಿನ ದಿನಗಳಲ್ಲಿ ವೀಕ್ಷಿಕ್ಷರ ಮನಸ್ಸು ಗೆಲ್ಲಲಿ ಎಂಬ ಆಶಯ ಅಭಿಮಾನಿಗಳದ್ದು.

More News

You cannot copy content of this page