Workers are Needed: ಕೆಲಸಗಾರರು ಬೇಕಾಗಿದ್ದಾರೆ ಎಂದು ರಸ್ತೆಬದಿ ಬೋರ್ಡ್ ಹಿಡಿದು ನಿಂತ ಕೊಡಗಿನ ಕಾಫಿ ಬೆಳೆಗಾರ

ಕೊಡಗು: ಕಾಫಿ ಕೀಳಲು ಕಾರ್ಮಿಕರಿಗೆ ಭಾರೀ ಬೇಡಿಕೆ. ಅಧಿಕ ಸಂಬಳ ನೀಡಿದರು ಕಾರ್ಮಿಕರು ಸಿಗುತ್ತಿಲ್ಲ. ಇದರಿಂದ ಕಾಫಿ ಬೆಳೆಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಂತೆ ವ್ಯಕ್ತಿಯೊಬ್ಬರು ಕಾಫಿ ಕೀಳಲು ಕಾರ್ಮಿಕರಿಲ್ಲದೆ ಏನು ಮಾಡಿದ್ದಾರೆ ಗೊತ್ತಾ?ಇದು ಕೊಡಗಿನಲ್ಲಿ ಬೆಳಕಿಗೆ ಬಂದ ಘಟನೆ. ಕಾಫಿ ಬೆಳಗಾರರೊಬ್ಬರು ಕಾಫಿ ಬೀಜ ಕೀಳಲು ಕಾರ್ಮಿಕರು ಸಿಗದೆ ಬೇಸತ್ತು ಕೊನೆಗೆ ರಸ್ತೆ ಬದಿ ಬಂದು ಬೋರ್ಡ್​​ ಹಿಡಿದು ನಿಂತಿದ್ದಾರೆ. ಬೋರ್ಡ್​ನಲ್ಲಿ ‘ಕೆಲಸಗಾರರು ಬೇಕು’ ಎಂದು ಬರೆದುಕೊಂಡಿದ್ದಾರೆ.
ಅಷ್ಟು ಮಾತ್ರವಲ್ಲ, ಮಹಿಳೆಯರಿಗೆ ದಿನಕ್ಕೆ 415 ರೂಪಾಯಿ ನೀಡಲಾಗುತ್ತದೆ ಎಂದು ಬರೆದಿದ್ದಾರೆ. ಇನ್ನು ಪುರುಷರಿಗೆ 615 ದಿನ ಸಂಬಳ ನೀಡುವುದಾಗಿ ಬರೆದುಕೊಂಡಿದ್ದಾರೆ. ಇದಲ್ಲದೆ, ನಿರ್ದಿಷ್ಟ ಸಮಯಕ್ಕಿಂತ ಜಾಸ್ತಿ ಕೆಲಸ ಮಹಿಳೆಯರು ಮತ್ತು ಪುರುಷರಿಗೆ ಎಕ್ಸ್ಟಾ ಸಂಬಳ ನೀಡುವುದಾಗಿ ಹೇಳಿದ್ದಾರೆ.

More News

You cannot copy content of this page