Yash Fans Death: ಅಭಿಮಾನಿಗಳ ಮೃತ ದೇಹ ನೋಡಲು ವಿದೇಶದಿಂದ ಹುಬ್ಬಳ್ಳಿಗೆ ಬಂದ ಯಶ್

ಹುಬ್ಬಳ್ಳಿ: ಇಂದು ಪ್ಯಾನ್​ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಇವರ ಹುಟ್ಟಿದ ದಿನವನ್ನ ಹಬ್ಬವಾಗಿ ಆಚರಿಸಲು ಸಜ್ಜಾಗಿದ್ದ ಮೂವರು ಅಭಿಮಾನಿಗಳು ವಿದ್ಯುತ್ ವೈರ್ ತಗುಲಿ ಸಾವನ್ನಪ್ಪಿದ್ದಾರೆ. ಇಹಲೋಕ ತಗಯಜಿಸಿದ ಮೂವರು ಅಭಿಮಾನಿಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಟ ಯಶ್ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ದಿನ ಅಭಿಮಾನಿಯ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಗದಗ ಜಿಲ್ಲೆಯಲ್ಲಿ ನಟ ಯಶ್​ ಹುಟ್ಟು ಹಬ್ಬದ ಹಿನ್ನೆಲೆ ಕಟೌಟ್​​​​​ ಕಟ್ಟುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಮೂವರು ಅಭಿಮಾನಿಗಳು ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಶೂಟಿಂಗ್ ಕ್ಯಾನ್ಸಲ್ ಮಾಡಿ ನಟ ಯಶ್ ಹುಬ್ಬಳ್ಳಿಗೆ ಬಂದು ಇಳ್ದಿದ್ದಾರೆ.

ಮೃತಪಟ್ಟ ಅಭಿಮಾನಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ವಿದೇಶದಿಂದ ಯಶ್ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ನಟನ ಆಗಮನ ತಿಳಿಯುತ್ತಿದ್ದಂತೆ ಭಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದು, ನಟನನ್ನು ನೋಡಲು ಸಾಗೋರೋಪಾದಿಯಲ್ಲಿ ಜನ ಸೇರುತ್ತಿದ್ದಾರೆ.

More News

You cannot copy content of this page