ಬಹುಭಾಷಾ ನಟಿ ನಟನೆಯ ಅನ್ನಪೂರ್ಣಿ ಸಿನಿಮಾ ವಿವಾದ ಎಬ್ಬಿಸಿದೆ.ಚಿತ್ರದಲ್ಲಿ ರಾಮನ ಕುರಿತ ಸಂಭಾಷಣೆ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಜೊತೆಗೆ ನಮಾಸ್ ವಿಚಾರಕ್ಕೂ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟ್ರೋಲ್ ಆಗಿದ್ದು, ನಟಿ ನಯನ ತಾರಾ ಸೇರಿದಂತೆ ಚಿತ್ರ ತಂಡದ 7 ಮಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಡಿಸೆಂಬರ್ 6 ರಂದು ತೆರೆ ಕಂಡ ಅನ್ನಪೂರ್ಣಿಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೇವಲ 6 ಕೋಟಿ ಕಮಾಯಿ ಮಾಡಿ ಮಕಾಡೆ ಮಲಗಿತು. ಇದೀಗ ಚಿತ್ರ ಒಟಿಟಿಗೆ ಆಗಮಿಸಿದ್ದೇ ತಡ ಹಲವಾರ ಕೆಂಗಣ್ಣಿಗೆ ಗುರಿಯಾಗಿದೆ. ಚಿತ್ರದಲ್ಲಿ ಹಿಂದೂ ಪೂಜಾರಿ ಒಬ್ಬರ ಮಗಳಾಗಿದ್ದ ನಯನತಾರಾ ಬುರ್ಕಾ ಧರಿಸಿ ನಮಾಜ್ ಮಾಡ್ತಾರೆ. ಅಲ್ಲದೆ, ನಮಾಜ್ ಮಾಡಿದ್ದಕ್ಕೇ ಬಿರಿಯಾನಿ ಚನ್ನಾಗಿ ಬಂದಿದೆ ಎಂಬ ಸಂಭಾಷಣೆ ನಡೆದಿದೆ.

ಚಿತ್ರದಲ್ಲಿ ರಾಮ ಮಾಂಸಹಾರಿ ಎಂದು ಬಿಂಬಿಸಲಾಗಿದೆ. ಅಲ್ಲದೇ ಲವ್ ಜಿಹಾದ್ ಗೆ ಬೆಂಬಲಿಸಿದೆ ಎಂಬುದಾಗಿ ಬಿಂಬಿಸಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಕಿಡಿ ಕಾರಿದ್ದಾರೆ.
ಚಿತ್ರದ ವಿರುದ್ಧ ಕಿಡಿ ಕಾರಿದ ಮಾಜಿ ರಾಮಸೇನೆ ಮುಖ್ಯಸ್ಥ ರಮೇಶ್ ಸೋಲಂಕಿ, ಅನ್ನಪೂರ್ಣಿ ಸಿನಿಮಾ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ. ಇದೊಂದು ಹಿಂದೂ ವಿರೋಧಿ ಚಿತ್ರ ಎಂದು ದೂರಿದ್ದು, ಚಿತ್ರದ ನಿರ್ದೇಶಕ ನೀಲೇಶ್ ಕೃಷ್ಣ, ನಟಿ ನಯನ ತಾರಾ ಸೇರಿದಂತೆ 7 ಮಂದಿಯ ವಿರುದ್ಧ ಮುಂಬೈನ ಎಲ್ ಟಿ ಮಾರ್ಗ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.