VERY SAD HDK HAD NO INFORMATION: ಮರ ಕಡಿದ ಆರೋಪ: ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದೇವೆ: ಹಿಂದಿನ ಬಿಜೆಪಿ ಸರ್ಕಾರದ ಪಾಪದ ಕೆಲಸಗಳನ್ನು ತೊಳೆಯುತ್ತಿದ್ದೇವೆ: ಸಚಿವ ಖಂಡ್ರೆ

ಬೆಂಗಳೂರು : ವಿರಾಜಪೇಟೆಯಲ್ಲಿ ಮರ ಕಡಿದ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಜರಿಗಿಸಿ ಡಿಸಿಎಫ್ ಅಮಾನತ್ತು ಮಾಡಲಾಗಿದೆ, ಇದರಿಂದ ಹಿಂದಿನ ಸರ್ಕಾರದಲ್ಲಿ ಆದಂತಹ ಪಾಪದ ಕೆಲಸಗಳನ್ನು ನಾವು ತೊಳೆಯುತ್ತಿದ್ದೇವೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತರೀಕೆರೆಯಲ್ಲಿ ಮರ ಕಡಿದ ಆರೋಪ ಇದೆ, ಈ ಪ್ರಕರಣದಲ್ಲೂ ಮೂವರನ್ನು ಅಮಾನತು ಮಾಡಿದ್ದೇವೆ, ಮಾಜಿ ಸಿಎಂ ಕುಮಾರಸ್ವಾಮಿ ಮಾಧ್ಯಮ ಗೋಷ್ಟಿ ಮಾಡುವ ಮೊದಲೇ ಕ್ರಮ ಕೈಗೊಂಡಿದ್ದೇವೆ. ಪಾಪ ಅವರಿಗೆ ಮಾಹಿತಿ ಇಲ್ಲಾ ಅನ್ನಿಸುತ್ತೆ ಎಂದು ತರಾಟೆಗೆ ತೆಗೆದುಕೊಂಡರು.
ತಪ್ಪಿತಸ್ಥ ಅಧಿಕಾರಿಗಳನ್ನು ನಾವು ಅಮಾನತು ಮಾಡುತ್ತೇವೆ ಅವರು ಹೋಗಿ ಸ್ಟೇ ತರುತ್ತಾರೆ, ಆದ್ದರಿಂದ ಕುಮಾರಸ್ವಾಮಿ ಅವರು ತಮ್ಮ ಬಳಿ ದಾಖಲೆ ಇದ್ದರೆ ಕೊಡಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಸವಾಲು ಹಾಕಿದರು.

ತಾಕತ್, ಚಾಲೆಂಜ್ ಎಲ್ಲಾ ಮಾಡೋದಿಲ್ಲಾ, ನಾನು ಕಾನೂನುಬದ್ದವಾಗಿ ಕೆಲಸ ಮಾಡೋನು, ನಾನು ಉದ್ವೇಗಕ್ಕೆ ಒಳಗಾಗಿ ಕೆಲಸ ಮಾಡೋದಿಲ್ಲಾ, ಅವರು ಮಾಜಿ ಸಿಎಂ ಇದ್ದವರು, ಪೆನ್ ಡ್ರೈವ್ ತೋರಿಸಿ ಆರೋಪ ಮಾಡಿದ್ರೆ ಸರಿ ಅಲ್ಲಾ, ನಮಗೆ ಮಾಹಿತಿ ಇಲ್ಲದಿದ್ದರೆ ನಮಗೆ ಕೊಡಿ ಎಂದು ತರಾಟೆಗೆ ತೆಗೆದುಕೊಂಡರು.
ಯಶವಂತಪುರ ಶಾಸಕರ ಮನೆಯಲ್ಲಿ ಡೀಲ್ ಆಗಿದೆ ಎಂಬ ಆರೋಪದ ಕುರಿತು ಯಾವುದೇ ಸಾಕ್ಷಿ ಇಲ್ಲದ ಅರೋಪಕ್ಕೆ ನಾನು ಉತ್ತರ ಕೊಡೊಲ್ಲಾ, ಸಿಎಂ ಆಗಲಿ, ಸಚಿವರಾಗಲಿ ಹಸ್ತಕ್ಷೇಪ ಮಾಡೊಲ್ಲಾ, ವಿಕ್ರಮ್ ಸಿಂಹ ಸಹೋದರ ಯಾರು ಅಂತನೂ ಗೊತ್ತಿಲ್ಲ, ಅಕ್ರಮ ಮಾಡಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಜಾತಿ ತಂದ್ರೆ ಹೇಗೆ ಎಂದು ಪ್ರಶ್ನಿಸಿದರು.
ಬೀಟೆ ಮರ ಅಲ್ಲಿತ್ತು ಸಾಗಾಣಿಕೆ ಮಾಡಿದ್ದಾರೆ ಎಂಬ ಆರೋಪ ಇದೆ, ಎ೧, ಎ೨ ಆರೋಪಿಗಳನ್ನ ಬಂಧಿಸಿಲ್ಲಾ ಎಂಬ ಅರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಮಾಡಿಸಿದ್ದು ತನಿಖೆ ಅಧಿಕಾರಿ ತೀರ್ಮಾನ ಮಾಡುತ್ತಾರೆ ಎಂದರು. ಆರೋಪಿಗಳಿಗೆ ರಕ್ಷಣೆ ಮಾಡುವಂತಹ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಡಿಸಿಎಂ ಕೇಳಿಲ್ಲಾ- ಮೂವರು ಡಿಸಿಎಂ ವಿಚಾರ ಗೊತ್ತಿಲ್ಲ
ರಾಜ್ಯ ಕಾಂಗ್ರೆಸ್ ನಲ್ಲಿ ಬಿರುಗಾಳಿ ಎದ್ದಿರುವ ಮೂವರು ಡಿಸಿಎಂ ಹುದ್ದೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ನಾನು ಡಿಸಿಎಂ ಕೇಳಿಲ್ಲಾ, ಯಾವ ಸಮುದಾಯದ ಬಗ್ಗೆ ಮಾತಾಡೊಲ್ಲಾ, ರಾಜ್ಯದಲ್ಲಿ ಎಲ್ಲಾ ಜನರ ಪ್ರತಿನಿಧಿಯಾಗಿದ್ದೇನೆ, ನಾನು ಮಂತ್ರಿಯಿದ್ದೇನೆ, ಡಿಸಿಎಂ ಬೇಕು ಎಂದು ಕೇಳೊಲ್ಲಾ, ನನ್ನ ಅಭಿಪ್ರಾಯ ಎಂದು ಹೇಳಿದರು.
ಅಧಿಕಾರ ಮುಖ್ಯವಲ್ಲಾ, ವಯ್ಯಕ್ತಿಕವಾಗಿ ನಾನು ಕೇಳಿಲ್ಲಾ, ಜನಪರ ಆಢಳಿತ ಕೊಡ್ತಿದ್ದೇವೆ ಕೊಟ್ಟ ಮಾತಿನಂತೆ ನಡೆಯುತ್ತಿದ್ದೇವೆ, ಲೋಕಸಭಾ ಚುನಾವಣೆಯಲ್ಲಿ ನಾವು ಗೆಲ್ತಿವಿ, ಲೋಕಸಭೆ ಚುನಾವಣೆಗೆ ೧೦ ರಿಂದ ೧೨ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಪ್ರಬಲ ಅಭ್ಯರ್ಥಿಗಳ ಕೊರತೆ ಇದ್ಯಾ ಎಂಬ ವಿಚಾರ, ನೂರಾರು ಜನ ಕ್ಯೂನಲ್ಲಿ ಇದ್ದಾರೆ, ಎಲ್ಲಾರೂ ಪ್ರಬಲ ಅಭ್ಯರ್ಥಿಗಳೆ ಎಂದು ತಿಳಿಸಿದರು.

More News

You cannot copy content of this page