ಚಿತ್ರದುರ್ಗ : ಉತ್ತರ ಗೋವಾದ ಕಲ್ಲಂಗೂಟ್ ಪೊಲೀಸ್ ಠಾಣೆಯ ಪೊಲೀಸರ ನಿರ್ದೇಶನದ ಮೇರೆಗೆ ಬೆಂಗಳೂರಿನ ಮೆಂಡ್ ಫುಲ್ ಎಐ ಲ್ಯಾಬ್ ಎಂಬ ಕೃತಕ ಬುದ್ದಿಮತ್ತೆ (ARIFICIAL INTELLIGENCEY) ಸ್ಟಾರ್ಟ್ ಅಪ್ ಕಂಪನಿಯ ಸಿಇಓ ಸುಚನಾ ಸೇಠ್ ಳನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಗೋವಾ ಪೊಲೀಸರು ಒದಗಿಸಿದ ಸಮಗ್ರ ಮಾಹಿತಿ ಹಿನ್ನೆಲೆಯಲ್ಲಿ ಚಿತ್ರದುರ್ಗದ ಐಮಂಗಲ ಪೊಲೀಸರು ಸೋಮವಾರ ಸಂಜೆ ಆಕೆಯನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಗೋವಾ ಪೊಲೀಸರು ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದಾರೆ. ಹಾಗೆಯೇ ಕಾರನ ಬ್ಯಾಗ್ ನಲ್ಲಿದ್ದ ನಾಲ್ಕು ವರ್ಷದ ಬಾಲಕನ ಮೃತದೇಹವನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮಹಿಳೆಯ ವಿಚಾರಣೆ ನಡೆಯುತ್ತಿದೆ.

ಘಟನೆಯ ವಿವರ:
ಆರೋಪಿ ಸುಚನಾ ಸೇಠ್ ಮೂಲತಹ ಕೋಲ್ಕತ್ತ ಮೂಲದವರು. 2008ರಲ್ಲಿ ಬೆಂಗಳೂರಿಗೆ ಆಗಮಿಸಿದ್ದಳು. ವೆಂಕಟರಮಣ ಎಂಬ ತಮಿಳುನಾಡಿ ಮೂಲದ ವ್ಯಕ್ತಿಯೊಬ್ಬರ ಪರಿಚಯವಾಯಿತು. ನಂತರ ಇದು ಮದುವೆಯ ಹಂತಕ್ಕೂ ತಂದಿದ್ದು, ಆದ್ದರಿಂದ 2010 ರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಆದರೆ, 2019ರಲ್ಲಿ ಮಗ ಚಿನ್ಮಯ್ ಜನಿಸಿದ ನಂತರ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ವಿವಾಹ ವಿಚ್ಛೇದನ ಕೋರಿ ಇಬ್ಬರೂ ನ್ಯಾಯಾಲಯದ ಮೆಟ್ಟಿಲೇರಿದರು, ನ್ಯಾಯಾಲಯದ ಆದೇಶದ ಮೇರೆಗೆ ಪ್ರತಿ ಭಾನುವಾಗ ತಂದೆಯ ಜತೆ ಮಾತನಾಡಲು ಅನುಮತಿ ನೀಡಿತ್ತು.
ತಂದೆಯ ಜತೆ ಮಾತನಾಡಲು ನ್ಯಾಯಾಲಯ ಅವಕಾಶ ನೀಡಿರುವುದು ಸುಚನಾ ಸೇಠ್ ಗೆ ಇಷ್ಟವಿರಲಿಲ್ಲ ಎಂದು ಪ್ರಾಥಮಿಕ ತನಿಖೆ ನಡೆಸಿದ ಚಿತ್ರದುರ್ಗ ಪೊಲೀಸರು ತಿಳಿಸಿದ್ದಾರೆ. ಗೋವಾ ಹೋಟೆಲ್ ನಲ್ಲಿ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಸುಚನಾ ಸೇಠ್, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಗನ ಕೊಲೆಯ ಬಳಿಕ ತನ್ನ ಕೈಯನ್ನು ಕೊಯ್ದುಕೊಂಡಿದ್ದಳು. ನಂತರ ಆತ್ಮಹತ್ಯೆ ತೀರ್ಮಾನದಿಂದ ಹಿಂದೆ ಸರಿದು ಬೆಂಗಳೂರಿಗೆ ಕೊಲೆ ಮಾಡಿದ ಮಗನ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ಹಾಕಿ ಬಂದಿದ್ದಳು. ಆದರೆ, ಕಾರಿನ ಚಾಲಕ ನೀಡಿದ ಮಹತ್ವದ ಸೂಚನೆಯಂತೆ ಆಕೆಯನ್ನು ಐಮಂಗಲ ಪೊಲೀಸರು ಬಂಧಿಸಿದ್ದಾರೆ.
ಗೋವಾದ ಸೋಲ್ ಬ್ಯಾನಿಯನ್ ಗ್ರ್ಯಾಂಡ್ ಹೊಟೇಲ್ ನಲ್ಲಿ ಸಿಇಎ ಶನಿವಾರ ತಂಗಿದ್ದಳು. ಸೋಮವಾರ ಕೊಠಡಿಯನ್ನು ಖಾಲಿ ಮಾಡಿ ಒಬ್ಬಂಟಿಯಾಗಿ ಹೊರಬಂದಿದ್ದರು. ಬೆಂಗಳೂರಿಗೆ ತೆರಳಲು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದಿದ್ದಳು. ಈ ಬಗ್ಗೆ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಬಾಲಕನ ಬಗ್ಗೆ ವಿಚಾರಿಸಿದ್ದರು. ಸಂಬಂಧಿಕರ ಮನೆಗೆ ಬಿಟ್ಟು ಬಂದಿರುವುದಾಗಿ ಕಾರಣ ನೀಡಿದ್ದಳು.
ಆದರೆ, ಆಕೆ ತಂಗಿದ್ದ ಕೊಠಡಿಯನ್ನು ಶುಚಿಗೊಳಿಸುವಾಗ ರಕ್ತದ ಕಲೆಗಳನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರಿನ ಚಾಲಕನ ಫೋನ್ ಗೆ ಪೊಲೀಸರು ಸಂಪರ್ಕಿಸಿ ಕೊಂಕಣಿಯಲ್ಲಿ ಮಾತನಾಡಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ವಿವರಿಸಿದ್ದರು.
ಮಾಹಿತಿ ಅರಿತ ಚಾಲಕ ಹಿರಿಯೂರು ಕಡೆಗೆ ಸಾಗುತ್ತಿದ್ದಾರ ಐಮಂಗಲ ಪೊಲೀಸ್ ಠಾಣೆಯನ್ನು ಗಮಿನಿಸಿ, ನೇರವಾಗಿ ಠಾಣೆಗೆ ಕಾರು ತಂದಿದ್ದಾರೆ. ಕಾರಿನ ಡಿಕ್ಕಿ ತೆರೆದಾಗ ಸೋಟ್ ಕೇಸ್ ನಲ್ಲಿ ಬಾಲಕನ ಮೃತದೇಹ ಇರುವುದು ಪತ್ತೆಯಾಗಿದೆ. ಕೊಡಲೇ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.