ರಾಂಚಿ: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಮಾಜಿ ಬಿಸಿನೆಸ್ ಮಾರ್ಟ್ ನರ್ ಗಳ ವಿರುದ್ಧ ದೂರು ದಾಖಲಿಸಿದ್ದಾರೆ. ತಮಗೆ 15 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಅವರು ರಾಂಚಿ ಸಿವಿಲ್ ನ್ಯಾಯಾಲಯದಲ್ಲಿ ಮಹೇಂದ್ರ ಸಿಂಗ್ ಧೋನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ತಮ್ಮ ಬಿಸಿನೆಸ್ ನ ಮಾಜಿ ಪಾರ್ಟನರ್ ಗಳಾದ ಮಿಹಿರ್ ದಿವಾಕರ್ ಮತ್ತು ಅರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್ ಮೆಂಟ್ ಲಿಮಿಟೆಡ್ ನ ಸೌಮ್ಯ ವಿಶ್ವಾಸ್ ವಿರುದ್ಧ ಎಂ ಎಸ್ ಧೋನಿ ಅವರು ದೂರು ದಾಖಲಿಸಿದ್ದಾರೆ.

2017ರಲ್ಲಿ ಮಿಹಿರ್ ದಿವಾಕರ್ ಅವರು ಧೋನಿಯೊಂದಿಗೆ ವಿಶ್ವದಾದ್ಯಂತ ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವ ಒಪ್ಪಂದ ಮಾಡಿಕೊಂಡಿದ್ದರು. ವಿಶ್ವದ ಹಲವು ಕಡೆಗಳಲ್ಲಿ ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಿದ ನಂತರ ಕಂಪನಿಯು ಲಾಭದ ಪಾಲನ್ನು ನೀಡುವ ಒಪ್ಪಂದವನ್ನು ಅನುಸರಿಸಿಲ್ಲ, ಇದರಿಂದ ತಮಗೆ ಸುಮಾರು 15 ಕೋಟಿ ರೂಪಾಯಿಗಳ ನಷ್ಠವುಂಟಾಗಿದೆ ಎಂದು ಧೋನಿ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಒಪ್ಪಂದದಲ್ಲಿ ಅರ್ಕಾ ಸ್ಪೋಟ್ಸ್ ಪ್ರ್ಯಾಂಚೈಸ್ ಶುಲ್ಕ ಪಾವತಿಸಿಲು ಮತ್ತು ಲಾಭದ ಹಂಚಿಕೆಯನ್ನು ನಿಗದಿಪಡಿಸಿದೆ. ಆದರೆ, ಕಂಪನಿಯು ಹಾಗೆ ಮಾಡಲಿಲ್ಲ, ಈ ಸಂಬಂಧ ಧೋನಿ ಅವರು ಕಂಪನಿಗೆ ಹಲವು ಬಾರಿ ನೋಟಿಸ್ ನೀಡಿದ್ದಾರೆ. ಆದರೆ, ಈ ಬಗ್ಗೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ, ಹಾಗೆಯೇ ಲಾಭದ ಪಾಲು ನೀಡಿಲ್ಲ ಎಂದು ಧೋನಿ ಪರ ವಕೀಲರು ತಿಳಿಸಿದ್ದಾರೆ.