TABLEAU CONTROVERCY : ಬೇರೆ ರಾಜ್ಯಕ್ಕೆ ಅವಕಾಶ ಕೊಡಲು ಕರ್ನಾಟಕವನ್ನ ಬಿಟ್ಟಿದ್ದಾರಷ್ಟೇ: ಬಿ ವೈ ವಿಜಯೇಂದ್ರ

ಬೆಂಗಳೂರು : ಬೇರೆ ರಾಜ್ಯಕ್ಕೂ ಅವಕಾಶ ಸಿಗಬೇಕು ಅನ್ನೋ ದೃಷ್ಟಿಯಿಂದ ಟ್ಯಾಬ್ಲೋ ಪ್ರದರ್ಶನಕ್ಕೆ ಕರ್ನಾಟಕಕ್ಕೆ ಅವಕಾಶ ನೀಡಲಾಗಿಲ್ಲ. ಕರ್ನಾಟಕಕ್ಕೆ ಸಿಗಬಾರದು ಅನ್ನೋದಲ್ಲ‌ ಇದರ ಉದ್ದೇಶ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮಜಾಯಿಷಿ ನೀಡಿದ್ದಾರೆ.

ಟ್ಯಾಬ್ಲೋ ವಿಚಾರದ ಕುರಿತು ನಗರದಲ್ಲಿ ಮಾತನಾಡಿದ ಅವರು, ಕಳೆದ 14 ವರ್ಷದಿಂದ ಅವಕಾಶ ಸಿಕ್ತಿದೆ. ಕಳೆದ ಬಾರಿ ಕೂಡ ಸಿಕ್ಕಿರಲಿಲ್ಲ, ಚರ್ಚೆ ಮಾಡಿದ ಬಳಿಕ ಮತ್ತೆ ಸಿಕ್ಕಿತ್ತು. ಈ ಬಾರಿ ಬೇರೆ ರಾಜ್ಯಕ್ಕೂ ಅವಕಾಶ ಸಿಗಬೇಕು ಅನ್ನೋ ದೃಷ್ಟಿಯಿಂದ ಅವಕಾಶ ನೀಡಲಾಗಿಲ್ಲ. ಕರ್ನಾಟಕಕ್ಕೆ ಸಿಗಬಾರದು ಅನ್ನೋದಲ್ಲ‌. ಇದನ್ನ ಅರ್ಥ ಮಾಡಿಕೊಳ್ಳೋದು ಬಿಟ್ಟು, ಮೊಸಳೆ ಕಣ್ಣೀರು ಇಡುತ್ತಿದ್ದಾರೆ.ಕನ್ನಡಪರ ಹೋರಾಟಗಾರ ಕರವೇ ನಾರಾಯಣಗೌಡ ವಿಚಾರದಲ್ಲಿ ಹೇಗೆ ನಡೆದುಕೊಳ್ತಿದೆ. ರಾಜಕೀಯ ಬಿಟ್ಟು ವಾಸ್ತವ ವಿವಾರ ಚರ್ಚಿಸಲಿ ಎಂದರು.

ಸಂಸದರ ಮೂಲಕ ಟ್ಯಾಬ್ಲೋ ಹಾಕಿಸಲು ಒತ್ತಾಯ ಮಾಡ್ತೀರಾ ಅನ್ನೋ ವಿಚಾರದ ಬಗ್ಗೆ ಮಾತನಾಡಿದ ಅವರು, ಅದಕ್ಕೆ ಸಮಯ ಸಂದರ್ಭ ಇದೆ. ಎಲ್ಲಿ ಅವಕಾಶ ಸಿಕ್ಕಿಲ್ಲ, ಅವರಿಗೆ ಸ್ಟಾಲ್ ಹಾಕಲು ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದಿನ ಬಾರಿ ಕೊಡೋದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಮುಂದುವರೆದು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ಮುಖಂಡರಿಗೆ ರಾಜ್ಯದ ನೆಲ, ಸಂಪತ್ತಿನ ಬಗ್ಗೆ ಅಪಾರ ಗೌರವ ಇದ್ರೆ ಮೊದಲನೆಯದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆ ಬಗ್ಗೆ ಸಚಿವರು ತಮ್ಮ ಅಭಿಪ್ರಾಯ ತಿಳಿಸಲಿ. ಕಾವೇರಿ ನೀರು ಹರಿಸ್ತಿದ್ದಾರೆ ಅದರ ಬಗ್ಗೆ ನಿಲುವು ಸ್ಪಷ್ಟಪಡಿಸಲಿ ಎಂದು ಜಾರಿಕೊಂಡರು.

ಬಳಿಕ ಮಾತನಾಡಿದ ಅವರು, ಬಿಜೆಪಿ ಸಂಘಟನಾ ದೃಷ್ಟಿಯಿಂದ ಸಭೆ ಕರೆಯಲಾಗಿದೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಸಭೆ ಕರೆದಿದ್ದು, ಎಲ್ಲರೂ ಒಟ್ಟಾಗಿ ಹೋಗ್ತೀವಿ ಎಂದು ಹೇಳಿದರು.

More News

You cannot copy content of this page