BJP LEADERS HOW MUCH MONEY YOU MADE FROM FAKE MYSORE SANDLE SOAP..?: ನಕಲಿ ಮೈಸೂರು ಸೋಪು ಪ್ರಕರಣ: ಎಫ್ಐಆರ್ ದಾಖಲಾಗಿರುವ ಇಬ್ಬರೂ ಬಿಜೆಪಿ ಪದಾಧಿಕಾರಿಗಳು: ಹಿರಿಯ ನಾಯಕರ ಆತ್ಮೀಯರು: ಸಚಿವ ಪ್ರಿಯಾಂಕ್ ಖರ್ಗೆ ಆರೋಪ

ಬೆಂಗಳೂರು : ಬಿಜೆಪಿ ನಾಯಕರು ಶಾಮೀಲಾಗಿ ಕರ್ನಾಟಕದ ಹೆಮ್ಮೆಯ ಸಂಸ್ಥೆ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯ ಪ್ರಾಡಕ್ಟ್ ಗಳನ್ನು ನಕಲಿ ಮಾಡಿ ಮಾರಾಟ ಮಾಡುವ ಮೂಲಕ ಎಷ್ಟು ಹಣ ಗಳಿಸಿದ್ದೀರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕಲಿ ಸೋಪು ತಯಾರಿಕೆಯಲ್ಲಿ ಎಫ್ ಐ ಆರ್ ದಾಖಲಾಗಿರುವ ಇಬ್ಬರೂ ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್ ಜತೆಗಿರುವ ಪೋಟೋಗಳನ್ನು ಅವರು ಬಿಡುಗಡೆ ಮಾಡಿದರು.

ಇವರೆಲ್ಲರೂ ನಿಮ್ಮ ಪದಾಧಿಕಾರಿಗಳು, ಬಿಜೆಪಿಗೆ ಇಂತಹವರಿಂದ ಅನುಕೂಲವಾಗಿದೆ ಎಂದು ಆರೋಪಿಸಿದ ಅವರು, ಸ್ಯಾಂಟ್ರೋ ರವಿ, ಸೈಲೆಂಟ್ ಸುನೀಲ್, ಮಣಿಕಂಠ ರಾಥೋಡ್ ಬಗ್ಗೆ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಿಲ್ಲವೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಗೂ ನಿಮಗೂ ಇದರ ಪಾಲಿದೆ ಆದ್ದರಿಂದ, ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಕರ್ನಾಟಕದ ಮಾಲನ್ನು ಮಾರಿ‌ ಎಷ್ಟು ಹಣ ಗಳಿಸಿದ್ದೀರಿ ಎಂದು ಪ್ರಶ್ನಿಸಿದರು.
ಪ್ರಕರಣದ ಹಿನ್ನೆಲೆ
ಮೈಸೂರು ಸ್ಯಾಂಡಲ್ ಸೋಪ್ ನಕಲಿ ಮಾರಾಟ ಜಾಲದ ಬಗ್ಗೆ ದೂರು ಬಂದಿತ್ತು, ಹೈದ್ರಾಬಾದ್‌ನಲ್ಲಿ ಜಾಲ ಇರುವುದನ್ನು ಖಚಿತಪಡಿಸಿಕೊಂಡು ಅಧಿಕಾರಿಗಳು 25 ಲಕ್ಷದ ಆರ್ಡರ್‌ ನೀಡಿ, ಪ್ರಕರಣವನ್ನು ಬಯಲು ಮಾಡಲಾಗಿದೆ.

ಅಂಗಡಿ ಬದಲಿಗೆ ಕಾರ್ಖಾನೆಗೆ ಹೋಗಿ ಕಾರ್ಯಾಚರಣೆ ಮಾಡಿ ಸರ್ಚ್ ಮತ್ತು ಸೀಜ್ ಆಪರೇಷನ್ ಮೂಲಕ ದಾಳಿ ಮಾಡಿ ದೂರು ದಾಖಲಿಸಿ ಪ್ರಕರಣ ಪತ್ತೆ ಹಚ್ಚಲಾಗಿದೆ. ರಾಜೇಶ್ ಜೈನ್ ಮತ್ತು ಮಹಾವೀರ್ ಜೈನ್ ಇಬ್ಬರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಮೈಸೂರು ಸೋಪನ್ನು ಸೀಜ್ ಮಾಡಲಾಗಿದೆ.
ಇತದು ರಾಜ್ಯದ ಪ್ರತಿಷ್ಠಿತ ಬ್ರ್ಯಾಂಡ್, ಇದನ್ನೇ ನಕಲಿಯನ್ನಾಗಿ ಮಾಡಿ ಹಣ ಮಾಡುತ್ತಿರುವ ಬಿಜೆಪಿಯ ಸಕ್ರೀಯ ಇಬ್ಬರು ಪದಾದಿಕಾರಿಗಳು ಎಂದು ಅವರು ದೂರಿದರು.

ಇಬ್ಬರು ಬಿಜೆಪಿಯ ಸಕ್ರಿಯ ನಾಯಕರು, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಹೈದರಾಬಾದ್ ಬಿಜೆಪಿ ಶಾಸಕ ರಾಜಾಸಿಂಗ್, ಚಿತ್ತಾಪುರ್ ಬಿಜೆಪಿ ಅಭ್ಯರ್ಥಿ ಮಣಿಕಂಠ್ ರಾಥೋಡ್. ವಾಲ್ಮೀಕಿ ನಾಯಕ್ ಮಗ ವಿಠಲ್‌ನಾಯಕ್ ಜತೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದರು.

More News

You cannot copy content of this page