ಹುಬ್ಬಳ್ಳಿ: ಛೋಟಾ ಮುಂಬೈ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಯುವಕನೊಬ್ಬನನ್ನು ಮನೆಯಲ್ಲಿ ಕೂಡಿ ಹಾಕಿದ ಪುಡಿ ರೌಡಿಗಳು ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ವಿವಿನ ರಿಚರ್ಡ್ ಎಂಬ ಯುವಕನ ಮೇಲೆ ಪುಡಿರೌಡಿಗಳು ಪೈಶಾಚಿಕ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಪುಡಿರೌಡಿಯೊಬ್ಬ ತನ್ನ ಮನೆಯಲ್ಲಿ ಯುವಕನೊಬ್ಬನನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು ಹಲ್ಲೆ ಮಾಡಿದ್ದಾರೆ.

ಪುಡಿರೌಡಿ ವಿಜಯ್ ಬಿಜವಾಡ ಮತ್ತು ಆತನ ಸಂಗಡಿಗರು ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಕಳೆದ 15 ರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ರಿಚರ್ಡ್ ವಿದ್ಯಾನಗರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ರಾತ್ರಿ ಸುಮಾರ್ ಎರಡೂ ಗಂಟೆಗೆ ಪುಡಿ ರೌಡಿಗಳು ಊಟಕ್ಕೆ ತೆರಳಿದ್ದು. ಅದೇ ಸಮಯದಲ್ಲಿ ಹೋಟೆಲ್ ಹೊರಗಡೆ ವಿವಿನ ಜತೆಗೆ ಸಿಗರೇಟ್ ವಿಚಾರವಾಗಿ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ವಿಜಯ ಬಿಜವಾಡ್ ಮತ್ತು ಆತನ ಮೂರು ಜನ ಸಂಗಡಿಗರು ವಿವಿನ ರಿಚರ್ಡ್ ಮೇಲೆ ಹಲ್ಲೆ ನಡೆಸಿದ್ದಾರೆ.

ಅಷ್ಟಕ್ಕೂ ಸಾಲದೇ ಹಲ್ಲೆ ಮಾಡಿ ತನ್ನ ಕಾರಿನಲ್ಲಿಯೇ ವಿವಿನ್ ರಿಚರ್ಡ್‌ನನ್ನು ಹತ್ತಿಸಿಕೊಂಡು ಹೋಗಿ ಮನೆಯೊಂದರಲ್ಲಿ ಕೂಡಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಮನೆಯಲ್ಲೇ ಕಲ್ಲಿನಿಂದ ರಾಕ್ಷಸ ಕೃತ್ಯ ಎಸಗಿದ ವಿಜಯ್ ಬಿಜವಾಡ್ ಮತ್ತು ಗೆಳೆಯರು, ವಿವಿನ್ ರೀಚರ್ಡ್ ತಲೆಗೆ, ಮುಖಕ್ಕೆ, ಬೆನ್ನಿಗೆ, ಹೊಟ್ಟೆಗೆ ಗಂಭೀರ ಗಾಯ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಗೊಳಗಾದ ವಿವಿನ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಾಗಿ ಎರಡು ದಿನಗಳಾದರೂ ಪುಡಿರೌಡಿಗಳ ಹಡೆಮೂರಿ ಕಟ್ಟಲು ವಿದ್ಯಾನಗರ ಪೊಲೀಸರ ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ವಿಜಯ್ ಬಿಜವಾಡ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಮೀನಾಮೇಷ ಎಣಿಸುತ್ತಿರುವ ಪೊಲೀಸರ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.