ಬಲೂಚಿಸ್ತಾನ : ಇರಾನ್ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂದು ಬೆಳಗ್ಗೆ ಇರಾನ್ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ವರು ಮಕ್ಕಳು ಮತ್ತು ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.
ನಾಗರಿಕರು ಮೃತಪಟ್ಟಿರುವ ಬಗ್ಗೆ ಬಲೂಚಿಸ್ತಾನ ಪ್ರಾಂತ್ಯದ ಡೆಪ್ಯೂಟಿ ಗವರ್ನರ್ ಆಲಿ ರೆಜಾ ಮರ್ಹಮತಿ ಅವರು ಟಿವಿ ಸಂದರ್ಶನದಲ್ಲಿ ದೃಢಪಡಿಸಿದ್ದಾರೆ. ಮಂಗಳವಾರ ರಾತ್ರಿ ಇರಾನ್, ಪಾಕಿಸ್ತಾನದ ಮೇಲೆ ದಾಳಿ ನಡೆಸಿತ್ತು. ಇದೀಗ ಪಾಕಿಸ್ತಾನ ಇರಾನ್ ಮೇಲೆ ದಾಳಿ ನಡೆಸಿದೆ.
ಇದರಿಂದ ಇಸ್ಲಾಮಾಬಾದ್ ಮತ್ತು ಟೆಹ್ರಾನ್ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇದೀಗ ಎಲ್ಲೆಡೆ ಉಭಯ ದೇಶಗಳ ನಡುವೆ ಯುದ್ದ ಭೀತಿ ಆವರಿಸಿದೆ. ಪಾಕಿಸ್ತಾನದ ವಾಯುಪಡೆಯು ಇರಾನ್ ನೊಳಗಿನ ಬಂಡುಕೋರರ ಮೇಲೆ ಪ್ರತಿಕಾರದ ದಾಳಿ ನಡೆಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ.