ಹಾವೇರಿ : ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 12 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಾವೇರಿ ಜಿಲ್ಲಾ ಎಸ್ ಪಿ ಅಂಶುಕುಮಾರ ತಿಳಿಸಿದ್ದಾರೆ.
ಹಾವೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 8 ರಂದು ಲಾಡ್ಜ್ ನಲ್ಲಿ ಮಹಿಳೆ ಮತ್ತು ಪುರುಷನ ಮೇಲೆ ಹಲ್ಲೆ ಮಾಡಿದ್ದರು. ಜನವರಿ 10 ರಂದು ಹಾನಗಲ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು, ಜನವರಿ 11 ರಂದು ಗ್ಯಾಂಗ್ ರೇಪ್ ಪ್ರಕರಣದ ಸೆಕ್ಸನ್ ಸೇರಿಸಲಾಯಿತು ಎಂದು ವಿವರಿಸಿದರು. ಟ
ಅತ್ಯಾಚಾರದಲ್ಲಿ ಭಾಗಿಯಾದ 12 ಆರೋಪಿಗಳನ್ನು ಬಂಧಿಸಿದ್ದೇವೆ, ಹೈದ್ರಾಬಾದ್, ಗೋವಾ, ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ, ಮತ್ತೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, 60 ದಿನಗಳಲ್ಲಿ ಸಂಪೂರ್ಣ ತನಿಖೆ ಮುಗಿಸುತ್ತೇವೆ ಎಂದು ತಿಳಿಸಿದರು.
ಬ್ಯಾಡಗಿಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ
ಬ್ಯಾಡಗಿಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ಯ ಕೋಮಿನ ಯುವಕ, ಯುವತಿ ಮಾತನಾಡುತ್ತಾ ನಿಂತಿದ್ದರು, ಅನ್ಯಕೋಮಿನ ಯುವನಕನಲ್ಲಿ ಯಾಕೆ ಮಾತನಾಡುತ್ತೀಯಾ ಎಂದು ಕೇಳಿ ಗುಂಪೊಂದು ಆತನನ್ನು ಥಳಿಸಿದೆ ಎಂದು ಹೇಳಿದರು.
ಘಟನೆ ಸಂಬಂಧ ಬ್ಯಾಡಗಿ ಠಾಣೆಯಲ್ಲಿ 9 ಜನರ ಮೇಲೆ ಪ್ರಕರಣ ದಾಖಲಾಗಿದೆ, 7 ಜನರನ್ಮ ಬಂಧಿಸಲಾಗಿದೆ, ಇನ್ನಿಬ್ಬರನ್ನ ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದರು.