ನವದೆಹಲಿ: ಖ್ಯಾತ ಟೆನ್ನಿಸ್ ಆಟಗಾರ್ತಿಯಾಗಿದ್ದ ಸಾನಿಯಾ ಮಿರ್ಜಾ ಹಾಗೂ ಶೋಯಬ್ ಮಲಿಕ್ ಇಬ್ಬರೂ ವಿಚ್ಛೇದನಾ ಪಡೆದುಕೊಂಡಿದ್ದಾರೆ ಎಂದು ಸಾನಿಯಾ ಕುಟುಂಬ ಸ್ಪಷ್ಟಪಡಿಸಿದೆ. ಇದರಿಂದ ಕಳೆದ ಹಲವಾರು ತಿಂಗಳಿಂದ ಇದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಶೋಯಬ್ ಮಲಿಕ್ ಅವರು ಪಾಕ್ ಖ್ಯಾತ ನಟಿ ಸನಾ ಜಾವೇದ್ ರೊಂದಿಗೆ ಮದುವೆಯಾದ ಸುದ್ದಿ ಹರಡುತ್ತಿದ್ದಂತೆಯೇ ಸಾನಿಯಾ ಮಿರ್ಜಾ ಅವರ ಕುಟುಂಬ ಈ ಸ್ಪಷ್ಟನೆ ನೀಡಿದೆ. ಅದೇ ರೀತಿಯಲ್ಲಿ ಮತ್ತೊಂದು ಮದುವೆಯಾಗಿದ್ದ ಫೋಟೋಗಳನ್ನು ಶೋಯಬ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು.

2010ರ ಏಪ್ರಿಲ್ ನಲ್ಲಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ಹೈದರಾಬಾದ್ ನಲ್ಲಿ ಮದುವೆಯಾಗಿದ್ದರು. ಇವರಿಗೆ ಇಜಾನ್ ಎಂಬ ಐದು ವರ್ಷಗ ಮಗ ಇದ್ದಾನೆ. ಸಾನಿಯಾ ಅವರೊಂದಿಗೆ ಇಜಾನ್ ವಾಸವಾಗಿದ್ದಾರೆ.

ಸಾನಿಯಾ ಮಿರ್ಜಾ ಅವರು ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕರಿಂದ ದೂರವಿಟ್ಟಿದ್ದಾಳೆ. ಆದರೆ, ಶೋಯೆಬ್ ಮತ್ತು ಅವಳು ವಿಚ್ಚೇದನ ಪಡೆದು ಕೆಲವು ತಿಂಗಳುಗಳಾಗಿವೆ. ಇದೀಗ ಈ ಸಂಬಂಧ ಮಾತನಾಡುವ ಸಂದರ್ಭ ಬಂದಿದೆ. ಶೋಯೆಬ್ ಅವರ ಮುಂದಿನ ಪ್ರಯಾಣಕ್ಕೆ ಅವರು ಶುಭ ಹಾರೈಸಿದ್ದಾರೆ.
ಇಂತಹ ಸೂಕ್ಷ್ಮ ಅವಧಿಯಲ್ಲಿ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳು ಯಾವುದೇ ಉಹಾಪೋಹಗಳಿಗೆ ಕಿವಿಗೊಡದೆ, ಗೌಪ್ಯತೆಯನ್ನು ಗೌರವಿಸುವಂತೆ ವಿನಂತಿಸಲು ಬಯಸುತ್ತೇನೆ ಎಂದು ಸಾನಿಯಾ ಕುಟುಂಬ ವರ್ಗ ತಿಳಿಸಿದೆ.