ಬೆಂಗಳೂರು : ಅಯೋದ್ಯೆಯಲ್ಲಿ ಬಾಲರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುವ ಸಂರ್ಭದಲ್ಲಿಯೇ ನಟ ದ್ರುವ ಸರ್ಜಾ ತಮ್ಮ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.
ಒಂದೆಡೆ ಟಿವಿಯಲ್ಲಿ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯುತ್ತಿದ್ದರೆ, ಇನ್ನೊಂದೆಡೆ ನಾಮಕರಣದ ಶಾಸ್ತ್ರ ನೇರವೇರುತ್ತಿತ್ತು. ಧ್ರುವ ಸರ್ಜಾ ಅವರ ಫಾರ್ಮ್ ಹೌಸ್ ನಲ್ಲಿ ಅವರು ನಾಮಕರಣ ಶಾಸ್ತ್ರ ನೇರವೇರಿಸಿದ್ದು, ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಸಂದರ್ಭದಲ್ಲಿಯೇ ತಮ್ಮ ಮಕ್ಕಳಿಗೆ ವಿಶೇಷ ಮತ್ತು ಅರ್ಥಪೂರ್ಣ ಹೆಸರಿಟ್ಟಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಸಾಕಷ್ಟ
ಸಾಕಷ್ಟು ಸಮಯದಿಂದ ಅವರ ಅಭಿಮಾನಿಗಳು ಯಾವಾಗ ನಾಮಕರಣ ಎಂದು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು.

ಈ ವೇಳೆ ಧ್ರುವ ಸರ್ಜಾ ಒಂದು ಸಮಯ ನೋಡಿ ನಾಮಕರಣ ಮಾಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದರು.