MINISTER SHOBHA DID NOT CONGRATULATE BJP PRESIDENT..?: ಬಿಜೆಪಿ ಅಧ್ಯಕ್ಷರಾಗಿ ಮೂರು ತಿಂಗಳಾದರೂ ಅವರನ್ನು ಅಭಿನಂದಿಸದ ಶೋಭಾ..?: ಬಿಜೆಪಿಯಲ್ಲಿ ಚರ್ಚೆ

ಬೆಂಗಳೂರು : ಸಾಕಷ್ಟು ಸಮಯದ ನಂತರ ಬಿಜೆಪಿ ರಾಜ್ಯ ಘಟಕಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ನೇಮಕಗೊಳಿಸಲಾಗಿತ್ತು. ಇದೀಗ ಅವರನ್ನು ನೇಮಕ ಮಾಡಿ ಮೂರು ತಿಂಗಳಾದರೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನೂತನ ಅಧ್ಯಕ್ಷರನ್ನು ಅಭಿನಂದಿಸುವ ಗೋಜಿಗೆ ಹೋಗಲಿಲ್ಲ ಎಂಬ ಸುದ್ದಿ ಇದೀಗ ಪಕ್ಷದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಿಜಯೇಂದ್ರ ಬಗ್ಗೆ ತಕರಾರು ಇರುವ ಅನೇಕ ನಾಯಕರು ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದರು. ವರಿಷ್ಠರ ಮಧ್ಯಪ್ರವೇಶದಿಂದ ಅವರೆಲ್ಲ ಸುಮ್ಮನಾಗಿದ್ದರು. ಆದರೆ, ಶೋಭಾ ಅವರು ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ ಶುಭಾಶಯ ಕೋರುವ ಮಾತಿರಲಿ, ಸಾಮಾಜಿಕ ಜಾಲತಾಣದಲ್ಲಿಯೂ ಯಾವುದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ ಎನ್ನುವುದೇ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಶೋಭಾ ಅವರು ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಪಕ್ಷದ ಕಚೇರಿಗೂ ಭೇಟಿ ನೀಡಿಲ್ಲವಂತೆ, ಇತ್ತೀಚೆಗೆ ಮಂಗಳೂರಿಗೆ ಜತೆಯಲ್ಲಿಯೇ ವಿಮಾನದಲ್ಿಲ ತೆರಳಿದ್ದರೂ ಪರಸ್ಪರ ಮಾತುಕತೆ ಆಡಿಲ್ಲ ಎಂದು ತಿಳಿದುಬಂದಿದೆ.
ಕಚೇರಿಗೆ ಬಾರದೇ ಇರುವುದಿರಲಿ, ಇತ್ತೀಚೆಗೆ ನಡೆದ ಪಕ್ಷದ ಯಾವುದೇ ಸಭೆಗಳಿಗೂ ಅವರು ಹಾಜರಾಗಿಲ್ಲವಂತೆ, ಲೋಕಸಭಾ ಕ್ಷೇತ್ರಗಳ ಸಿದ್ದತೆ ಕುರಿತಾಗಿ ವಿದಯೇಂದ್ರ ನಡೆಸಿದ ಸಭೆಯಲ್ಲಿ ತಮ್ಮ ಕ್ಷೇತ್ರದ ಬಗ್ಗೆ ವಿವರ ನೀಡಲು ಅವರು ಹಾಜರಾಗಿರಲಿಲ್ಲವಂತೆ.

ಇನ್ನು ಬಗೆಹರಿದಂತೆ ಕಾಣುತ್ತಿಲ್ಲ. ಇವೆಲ್ಲವೂ ಪಕ್ಷದ ಸಂಘಟನೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎನ್ನುವುದು ಅನೇಕ ನಾಯಕರ ಅಭಿಪ್ರಾಯವಾಗಿದೆ. ಆದರೆ, ಶೋಭಾ ಅವರು ತಮ್ಮ ಕ್ಷೇತ್ರ ಬದಲಾವಣೆ ಮಾಡುವ ಮಾತುಗಳು ಕೇಳಿಬರುತ್ತಿದ್ದು, ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಿ ಚರ್ಚಿಸುವುದು ವಾಡಿಕೆ. ಇದನ್ನು ಅವರು ಪಾಲಿಸುತ್ತಾರೋ ಇಲ್ಲವೋ ಕಾದುನೋಡಬೇಕಾಗಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

More News

You cannot copy content of this page