ಬೆಂಗಳೂರು : ರ್ಯಾಪಿಡೋ ದ್ವಿಕ್ರವ ವಾಹನವನ್ನು ಬುಕ್ಕಿಂಗ್ ಮಾಡಿ ಕಾರಣಾಂತರಗಳಿಂದ ಅದನ್ನು ರದ್ದು ಮಾಡಿದ್ದಕ್ಕೆ ಕೋಪಗೊಂಡು ಮಹಿಳಾ ಟೆಕಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದ ಚಾಲಕನನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳ್ಳಂದೂರಿನ ಪ್ರಸಾದ್ ಬಂಧಿತ ಚಾಲಕನಾಗಿದ್ದು, ಬೆಳ್ಳಂದೂರಿನ ಗ್ರೀನ್ ಲೇನ್ ಲೋಔಟ್ ನಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಮಹಿಳಾ ಟೆಕಿಯ ಸ್ನೇಹಿತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಘಟನೆಯನ್ನು ವಿವರಿಸಿ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ರ್ಯಾಪಿಡೋ ಚಾಲಕನನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬು ಬೆಳ್ಳಂದೂರಿನ ಗ್ರೀನ್ ಲೇನ್ ಲೇಔಟ್ ನಲ್ಲಿ ವಾಸವಾಗಿದ್ದರು. ಪಿಜಿಯಿಂದ ವೈಟ್ ಫೀಲ್ಡ್ ನ ತುರುಬನಹಳ್ಳಿಗೆ ತೆರಳಲು ಅಟೋ ಬುಕ್ ಮಾಡಿದ್ದರು. ಬುಕ್ಕಿಂಗ್ ಸ್ವೀಕರಿಸಿದ ಅಟೋ ಸ್ಥಳಕ್ಕೆ ಬಂದಿತ್ತು. ಆಗ ತಡವಾಗಿ ಅಟೋ ಬಂದಿದೆ ಎಂದು ಆರೋಪಿಸಿ, ಮಹಿಳೆ ಬುಕ್ಕಿಂಗ್ ಅನ್ನು ರದ್ದುಪಡಿಸಿದ್ದರು. ಇದರಿಂದ ಸಿಟ್ಟಾದ ಚಾಲಕ ಆಕೆಯನ್ನು ನಿಂದಿಸಿ, ಹಲ್ಲೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.