THIS IS A HISTORIC MOMENT: ಶ್ರೀ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ: ಇದೊಂದು ಐತಿಹಾಸಿಕ ಕ್ಷಣ: ದೇಶದ ಅಬಿವೃದ್ಧಿಯ ಪಥ: ಪ್ರಧಾನಿ ಮೋದಿ

ನವದೆಹಲಿ : ಅಯೋಧ್ಯೆಯಲ್ಲಿ ಇಂದು ಅದ್ದೂರಿಯಾಗಿ ನಡೆಯಲಿರುವ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಒಂದು ಐತಿಹಾಸಿಕ ಕ್ಷಣ, ಇದು ಭಾರತೀಯ ಪರಂಪರೆಯನ್ನು ಮತ್ತು ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ ಅಲ್ಲದೆ, ದೇಶದ ್ಭಿವೃದ್ಧಿಯ ಪಥವನ್ನು ಹೊಸ ಆಯಾಮದತ್ತ ಕೊಂಡೊಯ್ಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಮಮಂದಿರ ಉದ್ಘಾಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ನಿನ್ನೆ ಪತ್ರವೊಂದನ್ನು ಬರೆದಿದ್ದರು. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ಪ್ರಧಾನಿ, ಈ ಶುಭ ಸಂದರ್ಭದಲ್ಲಿ ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ದೇಶದೆಲ್ಲೆಡೆ ಸಂಭ್ರಮಾಚಾರಣೆ ಮನೆ ಮಾಡಿದ್ದು, ಪುನರುತ್ಥಾನದಲ್ಲಿ ಹೊಸ ದಿಕ್ಸೂಚಿಯಾಗಿದೆ ಎಂದು ರಾಷ್ಟ್ರಪತಿಯವರು ಪತ್ರದಲ್ಲಿ ಉಲ್ಲೇಖಿಸಿ, ಕೇಂದ್ರ ಸರ್ಕಾರದ ಸಾಧನೆಯನ್ನು ಕೊಂಡಾಡಿದ್ದಾರೆ. ಕಳೆದ 11 ದಿನಗಳ ಕಠಿಣ ವ್ರತವನ್ನು ಉಲ್ಲೇಖಿಸಿರುವ ರಾಷ್ಟ್ರಪತಿಯವರು, ಇದು ಪವಿತ್ರ ಆಚರಣೆಯಾಗಿದೆ ಎಂದು ತಿಳಿಸಿದ್ದಾರೆ.

More News

You cannot copy content of this page