ಬೆಂಗಳೂರು : ಖಾಸಗಿ ಚಾನೆಲ್ ನಡೆಸುತ್ತಿರುವ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ -10 ರಲ್ಲಿ ಕಾರ್ತೀಕ್ ಗೆಲುವು ದಾಖಲಿಸಿದ್ದು, ದ್ರೋಣ್ ಪ್ರತಾಪ್ ರನ್ನರ್ ಆಪ್ ಆಗಿ ಜಯ ಸಾಧಿಸಿದ್ದಾರೆ. ಅತ್ಯಂತ ಯಶಸ್ಸು ಕಂಡುಗೆಲುವು ಕಂಡ ಕಾರ್ತೀಕ್ ಮಹೇಶ್ ಅವರು 50 ಲಕ್ಷ ರೂಪಾಯಿ ನಗದು ಮತ್ತು ಒಂದು ಮಾರುತಿ ಬ್ರಿಜಾ ಕಾರನ್ನು ತಮ್ಮದಾಗಿಸಿಕೊಂಡರು.

ಬಿಗ್ ಬಾಸ್ ಸೀಸನ್ -10ರಲ್ಲಿ ಸಂಗೀತಾ, ಕಾರ್ತೀಕ್, ವಿನಯ್, ಪ್ರತಾಪ್, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಅವರುಗಳು ಫಿನಾಲೆಗೆ ಪ್ರವೇಶ ಪಡೆದಿದ್ದರು. ಇದರಲ್ಲಿ ಕಾರ್ತೀಕ್ ಅಮೋಘ ಗೆಲುವು ಸಾಧಿಸಿದ್ದಾರೆ.
ನಟ ಕಿಚ್ಚ ಸುದೀಪ್ ಅವರು ನಡೆಸಿಕೊಟ್ಟ ಈ ಶೋನಲ್ಲಿ ಒಟ್ಟು 17 ಸ್ಪರ್ಧಿಗಳು ಫಭಾಗವಹಿಸಿದ್ದರು. ಕಿರುತೆರೆ, ಸಿನಿಮಾ ಸೇರಿದಂತೆ ನಾನಾ ಕ್ಷೇತ್ರದಿಂದ ಹಲವು ಸ್ಪರ್ಧಿಗಳು ಈ ಶೋನಲ್ಲಿ ಭಾಗವಹಿಸಿದ್ದರು.
ಈ ಹಿಂದೆ ಶೋನಿಂದ ಎಲಿಮಿನೇಟ್ ಆಗಿದ್ದ ತನಿಶಾ, ನಮ್ರತಾ ಸೇರಿದಂತೆ ಹಲವರು ಕಾರ್ತೀಕ್ ಅವರು ಫಿನಾಲೆಯಲ್ಲಿ ಗೆಲ್ಲಬಹುದು ಎಂದು ಹೇಳಿದ್ದರು. ಅದರಂತೆಯೇ ಕಾರ್ತೀಕ್ ಗೆದ್ದು ಬೀಗಿದ್ದಾರೆ.

ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಕಾರ್ತೀಕ್, ಸಂಗೀತಾ ಮತ್ತು ಪ್ರತಾಪ್ ಉಳಿದಿದ್ದರು. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮನೆಯೊಳಗೆ ಹೋಗಿ ಕಾಫಿ ಕುಡಿದು ಇನ್ನಿತರ ಮೂವರು ಸ್ಪರ್ಧಿಗಳ್ನು ಮುಖ್ಯವೇದಿಕೆಗೆ ಕರೆತಂದಿದ್ದರು.
ಮುಖ್ಯವೇದಿಕೆಯಲ್ಲಿ ಸಂಗೀತಾ ಶೃಂಗೇರಿ ಅವರು ಎರಡನೇ ರನ್ನರ್ ಅಪ್ ಎಂದು ಘೋಷಿಸಿದರು. ಆಗ ವೇದಿಕೆಯ ಮೇಲೆ ಉಳಿದಿದ್ದು, ಕಾರ್ತೀಕ್ ಮತ್ತು ಪ್ರತಾಪ್. ನಂತರ ಕಾರ್ತೀಕ್ ಮಹೇಶ್ ಅವರು ವಿನ್ನರ್ ಎಂದು ಘೋಷಿಸಿದರು.
