ಹಾವೇರಿ : ನಾನು ರಾಜಕೀಯ ಸನ್ಯಾಸಿ ಅಲ್ಲ, ಪಕ್ಷ ನಿರ್ಧರಿಸಿದರೆ ಕೇಂದ್ರ ರಾಜಕಾರಣಕ್ಕೆ ಹೋಗುತ್ತೇನೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಇಂಗಿತ ಮಾಜಿ ಸಚಿವಲ ಬಿ.ಸಿ ಪಾಟೀಲ್ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ಲೋಕಸಭಾ ಕ್ಷೇತ್ರಕ್ಕೆ BJPಯಲ್ಲಿ ದಿನೇ ದಿನೇ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಮಾಜಿ CM ಬಸವರಾಜ ಬೊಮ್ಮಾಯಿ, KS ಈಶ್ವರಪ್ಪನ ಮಗ KE ಕಾಂತೇಶ್ ಜೊತೆಗೆ ಇತ್ತೀಚಿಗೆ ಪಕ್ಷಕ್ಕೆ ಮರಳಿದ ಜಗದೀಶ್ ಶೆಟ್ಟರ್ ಹೆಸರು ಮುಂಚೂಣಿಯಲ್ಲಿವೆ.
ಇದರ ಬೆನ್ನಲ್ಲೇ ಮಾಜಿ ಸಚಿವ BC ಪಾಟೀಲ್ ಕೇಂದ್ರ ರಾಜಕಾರಣಕ್ಕೆ ಎಂಟ್ರಿ ಕೊಡಲು ಆಸಕ್ತಿ ಹೊಂದಿರುವುದು ಇದೀಗ ಹಲವು ಚರ್ಚೆಗೆ ಗ್ರಾಸವಾಗಿದೆ. MP ಅಭ್ಯರ್ಥಿ ಯಾರು ಎಂಬುದು ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ, ಹೈಕಮಾಂಡ್ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದು, ಸೂಕ್ತ ಅಭ್ಯರ್ಥಿ ಯಾರು ಅನ್ನೋದನ್ನು ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು.
ಅವರು ತಿರ್ಮಾನಿಸಿದ ವ್ಯಕ್ತಿ ಪರ ನಾವೆಲ್ಲ ಕೆಲಸ ಮಾಡುತ್ತೇವೆ, ಎಲ್ಲ ಒಟ್ಟಾಗಿ ಹಾವೇರಿ ಬಿಜೆಪಿ ಅಭ್ಯರ್ಥಿ ಗೆಲ್ಲುಸುತ್ತೇವೆ ಎಂದು ತಿಳಿಸಿದ ಬಿ ಸಿ ಪಾಟೀಲ್, ಪಕ್ಷ ಏನಾದರು ನೀನು ನಿಲ್ಲಪ್ಪ ಎಂದು ಹೇಳಿದರೆ ನಾನು ಸ್ಪರ್ಧೆ ಮಾಡಲು ಸಿದ್ದನಿದ್ದೇನೆ ಎಂದರು.
ಹೈಕಮಾಂಡ್ ನವರು ಈಗಾಲ್ಲೇ ಸರ್ವೆ ಮಾಡಿಸುತ್ತಿದ್ದಾರೆ, ಸರ್ವೇಯಲ್ಲಿ ಏನು ಬರುತ್ತೋ ಆ ರಿಪೋರ್ಟ್ ನೋಡಿ ನಿರ್ಧಾರವಾಗುತ್ತೆ ಎಂದು ತಿಳಿಸಿದ ಅವರು, ರಾಜ್ಯಾಧ್ಯಕ್ಷರು ನೀಡುವ ರಿಪೋರ್ಟ್ ಆಧಾರ ಮೇಲೆ ಟಿಕೆಟ್ ನೀಡಲಾಗುವುದು ಎಂದು ಹೇಳಿದ್ದಾರೆ ಎಂದರು.
ಜಗದೀಶ್ ಶೆಟ್ಟರ್ BJPಗೆ ಮರಳಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, BJP ಅವರು ಶೆಟ್ಟರ್ ಮರಳಿ ಮನೆಗೆ ಬಂದಿದ್ದಾರೆ, ರಾಹುಕಾಲ, ಗುಳಿಕಾಲ, ಅಂತಾ ಇರ್ತಾವಲ್ಲ ಕಾಲ ಕೆಟ್ಟಿದ್ದರಿಂದ ಅದೇನ್ನೇನೋ ಆಗಿತ್ತು. ಅವರಿಗೆ ಅನ್ಯಾಯವಾಗಿತ್ತು, ಇವತ್ತು ಆ ಅನ್ಯಾಯ ಸರಿ ಮಾಡುತ್ತೇವೆ ಎಂದು ಮರಳಿ ಪಕ್ಷಕ್ಕೆ ಕರೆ ತಂದಿದ್ದಾರೆ ಎಂದರು.