ಬೆಂಗಳೂರು : ವಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಪ್ರತಿಭಟನೆಗೆ ಅವರು ಆಗಮಿಸುವ ಮೊದಲೇ ಪ್ರತಿಭಟನೆ ಮುಗಿದು ಹೋದ ಅಪರೂಪದ ಘಟನೆ ಇಂದು ನಡೆದಿದೆ.
ಮಂಡ್ಯತದ ಕೆರಗೋಡುನಲ್ಲಿ ಹನುಮ ಧ್ವಜ ತೆಗೆಸಿದ ಪ್ರಕರಣ ಸಂಬಂಧ ಇಂದು ಬಿಜೆಪಿ ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ, ಅವರ ಆಗಮನದ ಮೊದಲೇ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು, ಪ್ರತಿಭಟನೆಗೆ ಅಂತ್ಯ ಹಾಡಿದ್ದರು.

ಇದರಿಂದ ಮೈಸೂರು ಬ್ಯಾಂಕ್ ವೃತ್ತಕ್ಕೆ ಬಂದು ವಾಪಾಸ್ಸಾದ ಘಟನೆ ಇಂದು ನಡೆದಿದೆ.
ರಸ್ತೆಯಲ್ಲಿ ನಿಂತು ಘೋಷಣೆ ಕೂಗಿದ ಎಸ್ ಕೆ ಬೆಳ್ಳುಬ್ಬಿ
ಪ್ರತಿಭಟನೆ ಮುಗಿದ ನಂತರ ಕೆಲ ಕಾರ್ಯಕರ್ತರೊಂದಿಗೆ ಸ್ಥಳಕ್ಕೆ ಬಂದ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ, ಇದ್ದಕ್ಕಿದ್ದಂತೆ ರಸ್ತೆ ಮಧ್ಯೆ ನಿಂತು ಸರ್ಕಾರದ ವಿರುದ್ಧ ಘೋಷಣೆ ಕೂಗತೊಡಗಿದರು.
ಈವೇಳೆ ಬೆಳ್ಳುಬ್ಬಿ, ಮತ್ತಿತರರನ್ನು ವಶಕ್ಕೆ ಪಡೆದು ಪೊಲೀಸರು ಅವರನ್ನು ಕರೆದೊಯ್ದರು.

ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಬಿಜೆಪಿ ಮುಖಂಡರು
ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಗೆ ಅವಕಾಶ ನೀಡದೇ ಫ್ರೀಡಂ ಪಾರ್ಕ್ ನಲ್ಲಿ ಅನುಮತಿ ಪಡೆದು ಪ್ರತಿಭಟನೆ ನಡೆಸುವಂತೆ ಪೊಲೀಸರು ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿಗೆ ಅವರಿಗೆ ನೋಟೀಸ್ ನೀಡಿದರು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಗೆ ಉದ್ದೇಶಿಸಿರುವ ಸ್ಥಳದಲ್ಲೇ ನೋಟೀಸ್ ನೀಡಿದರು. ಫ್ರೀಡಂ ಪಾರ್ಕ್ ನಲ್ಲಿ ಬೇರೆ ಪ್ರತಿಭಟನೆ ನಡೆಯುತ್ತಿದೆ, ಜಾಗ ಇಲ್ಲ ಎಂದು ಬಿಜೆಪಿ ನಾಯಕರು ವಾದ ಮಾಡಿದರು. ಪೊಲೀಸ್ ನೋಟಿಸ್ ಮಧ್ಯೆಯೂ ಮೈಸೂರು ಬ್ಯಾಂಕ್ ವೃತ್ತದಲ್ಲೇ ಪ್ರತಿಭಟನೆಗೆ ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿ ಕೆ ರಾಮಮೂರ್ತಿ, ಕೆರಗೋಡಿನಲ್ಲಿ ಹನುಮ ಧ್ವಜಕ್ಕೆ ಅಪಮಾನ ಆಗಿದೆ, ಅದಕ್ಕಾಗಿ ಇಂದು ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.
ಸ್ಳೀಯ ಶಾಸಕ ರವಿ ಗಾಣಿಗ ಪೊಲೀಸರನ್ನು ಬಿಟ್ಟು ಲಾಠಿ ಚಾರ್ಜ್ ಮಾಡಿಸಿದ್ದಾರೆ, ಈಘಟನೆಯನ್ನು ಖಂಡಿಸಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು. ನಮ್ಮ ಹೋರಾಟ ವನ್ನು ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ, ಮಂಡ್ಯ ಶಾಸಕ ರವಿ ಗಾಣಿಗ ರನ್ನು ಜೈಲಿಗೆ ಹಾಕಿ, ನಮ್ಮನ್ನಲ್ಲ, ನಾವೇ ರವಿ ಗಣಿಗ ವಿರುದ್ಧ ದೂರು ಕೊಡ್ರೀವಿ ಎಫ್ಐಆರ್ ಹಾಕಲಿ ಎಂದು ಆಗ್ರಹಿಸಿದರು.