ಬೆಂಗಳೂರು : ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪುಟ್ಟಣ್ಣ ನಾಮಪತ್ರ ಇಂದು ಸಲ್ಲಿಕೆ ಮಾಡಿದರು.
ಶಾಂತಿನಗರದ ಪ್ರಾದೇಶಿಕ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಸಚಿವರುಗಳು ಹಾಜರಿದ್ದರು.
ಫೆಬ್ರವರಿ 16 ರಂದು ನಡೆಯಲಿರುವ ಚುನಾವಣೆಗೆ ನಿನ್ನಯೇ ಒಮ್ಮೆ ಪುಟ್ಟಣ್ಣ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದರು. ಇಂದು ಸಿಎಂ, ಡಿಸಿಎಂ ಜೊತೆಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಿದರು.
ಜೆಡಿಎಸ್ ನವರೇ ಪ್ರಚೋದನೆ ನೀಡಿದ್ದು

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಜೆಡಿಎಸ್ ನವರು ಪ್ರಚೋದನೆಯಿಂದಲೇ ಗಲಾಟೆ ನಡೆದಿದ್ದು, ಜನರನ್ನ ಅವರೇ ಪ್ರಚೋದಿಸಿ ಗಲಾಟೆ ಎಬ್ಬಿಸಿರೋದು ಎಂದು ಹೆಚ್ ಡಿಕೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಪಂಚಾಯ್ತಿಯಲ್ಲಿ ಅನುಮತಿ ಏನು ಕೊಟ್ಟಿದ್ದಾರೆ? ರಾಷ್ಟ್ರ ಧ್ವಜ ಅಥವಾ ಕನ್ನಡ ಧ್ವಜ ಹಾರಿಸಲು ಹೇಳಿದ್ದಾರೆ, ಮುಚ್ಚಳಿಕೆಯನ್ನು ಬರೆದು ಕೊಟ್ಟಿದ್ದಾರೆ, ಯಾರು ರಾಜಕಾರಣ ಮಾಡಲು ಹೊರಟಿದ್ದು ಎಂದು ಪ್ರಶ್ನಿಸಿದರು.
ಬಿಜೆಪಿ ತನ್ನ ಅಸ್ಥಿತ್ವ ಕಳೆದುಕೊಂಡಿದೆ
ನಂತರ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಬಿಜೆಪಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ, ಇಲ್ಲಿಯವರೆಗೆ ಹೋರಾಟ ಮಾಡಿಕೊಂಡು ಬರುತ್ತಿದ್ದರು, ಇಂದು ಅವರ ಅಸ್ತಿತ್ವವನ್ನ ಕಳೆದುಕೊಂಡಿದ್ದಾರೆ ಎಂದರು.
ನಮ್ಮ ಅಭ್ಯರ್ಥಿ ಪರ ಇಂದು ನಮ್ಮ ಪತ್ರ ಸಲ್ಲಿಕೆ ಬಂದಿದ್ದೇವೆ, ಪುಟ್ಟಣ್ಣ ಅವರು ಶಿಕ್ಷಕರ ಪರವಾಗಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ ಆದ್ದರಿಂದ ಅವರ ಗೆಲುವು ನಿಶ್ಚಿತ ಎಂದರು.