Marriage Registration Amendment Rules: ವಿವಾಹ ನೋಂದಣಿ ಸರಳೀಕರಿಸುವ ಹಿಂದೂ ವಿವಾಹಗಳ ನೋಂದಣಿ ತಿದ್ದುಪಡಿ ನಿಯಮಗಳಿಗೆ ಸಂಪುಟ ಅಸ್ತು

ಬೆಂಗಳೂರು: ವಿವಾಹ ನೋಂದಣಿ ಸರಳೀಕರಿಸುವ ನಿಟ್ಟಿನಲ್ಲಿ ಹಿಂದೂ ವಿವಾಹಗಳ ನೋಂದಣಿ (ಕರ್ನಾಟಕ) (ತಿದ್ದುಪಡಿ) ನಿಯಮಗಳಿಗೆ ಸಂಪುಟ ಸಭೆ ಅಸ್ತು ನೀಡಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, 2023-24 ಬಜೆಟ್ ನಲ್ಲಿ ಘೋಷಿಸಿದಂತೆ ಹಿಂದೂ ವಿವಾವಗಳ ನೋಂದಣಿ ಸರಳೀಕರ, ಆಧುನೀಕರಣ ಗೊಳಿಸಲು ನಿಯಮಗಳಿಗೆ ತಿದ್ದಪಡಿ ತರಲು ಸಚಿವ ಸಂಪುಡ ಸಭೆಯಲ್ಲಿ ಸಮ್ಮತಿ ಸೂಚಿಸಿದ್ದಾರೆ. ಆನ್ ಲೈನ್ ಮೂಲಕ ನೋಂದಣಿ, ಬಾಪೂಜಿ ಕೇಂದ್ರ, ಗ್ರಾಮ ವನ್ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಸಂಬಂಧ ತಿದ್ದುಪಡಿ ತರಲಾಗುತ್ತದೆ ಎಂದು ತಿಳಿಸಿದರು.

ಸಂಪುಟದ ಇತರೆ ನಿರ್ಣಯಗಳೇನು?:

  • ಕರ್ನಾಟಕ ಸಿವಿಲ್‌ ಸೇವಾ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳು, 2024ಕ್ಕೆ ಅನುಮೋದನೆ ನೀಡುವ ಬಗ್ಗೆ -ರಾಜ್ಯ ಸಿವಿಲ್ ಸೇವೆಗಳ ನೇರ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಅನುಷ್ಠಾನಗೊಳಿಸಲು ಸಮ್ಮತಿ
  • ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ ರೂ. 142.47 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ.
  • ರಾಯಚೂರು ವಿಶ್ವವಿದ್ಯಾಲಯ ಆವರಣದಲ್ಲಿ “ಕಲ್ಯಾಣ ಕರ್ನಾಟಕ ಮಾನವ ಜಿನೋಮ್ ಅಧ್ಯಯನ ಸಂಸ್ಥೆ” ನಿರ್ಮಾಣವನ್ನು ರೂ. 47.32 ಕೋಟಿಗಳ ಅಂದಾಜು ಮೊತ್ತದಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
  • ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು,ದೊಡ್ಡ ಹುಣಸೂರು ಗ್ರಾಮದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಜಮೀನು ಮಂಜೂರು ಮಾಡಿರುವ 30.05.2019ರ ಸರ್ಕಾರಿ ಆದೇಶದ ಭಾಗದಲ್ಲಿ ನಮೂದಾಗಿರುವ ಸರ್ವೆ ನಂಬರ್ ಮತ್ತು ಜಮೀನಿನ ವಿಸ್ತೀರ್ಣ ಮಾರ್ಪಡಿಸಲು ಅಸ್ತು
  • 2023-24ನೇ ಸಾಲಿಗೆ 93 ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿನ 104 “ಕರ್ನಾಟಕ ಪಬ್ಲಿಕ್ ಶಾಲೆ’ಗಳಿಗೆ ಒಟ್ಟು ರೂ.60 ಕೋಟಿಗಳ ಅಂದಾಜು ವೆಚ್ಚದಲ್ಲಿ ಕಲಿಕಾ ವಾತಾವರಣ ಅಭಿವೃದ್ಧಿಗೆ ಅನುಮೋದನೆ. 22 ಪಬ್ಲಿಕ್ ಸಾಲೆಗಳಿಗೆ 24. ಲಕ್ಷ 9 ಕೋಟಿ ವೆಚ್ಚದಳ್ಇ ಕಲೊಕಾ ಘಗಟಕ ಸ್ಥಾಪಿಸಲು, 82 ಪವ್ಲಿಕ್ ಶಾಲೆಗಳಿಗೆ 24.12 ಕೋಟಿ ವೆಚ್ಚದಲ್ಲಿ ಕಲಿಕಾ ಘಟಕ ಸ್ಥಾಪಿಸಲು ಅನುಮೋದನೆ

-ರಾಜ್ಯದ 10 ಮಹಾನಗರಪಾಲಿಕೆಗಳಲ್ಲಿ ಹಾಗೂ ಆಯ್ದ 24 ನಗರಸಭೆಗಳಲ್ಲಿ ತಲಾ 1 ರಂತೆ ಒಟ್ಟು 34 ಸಂಖ್ಯೆಯ ಆಧುನಿಕ ವಿದ್ಯುತ್/ ಅನಿಲ ಚಿತಾಗಾರಗಳನ್ನು ನ್ಯಾಷನಲ್ ಹೌಸಿಂಗ್‌ ಬ್ಯಾಂಕ್ – ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ (UIDF) ಅಡಿಯಲ್ಲಿ ಒಟ್ಟು ರೂ. 136 ಕೋಟಿ ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ

  • ಬೈಯ್ಯಪ್ಪನಹಳ್ಳಿ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಅನ್ನು ಸಂಪರ್ಕಿಸಲು ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ರೂ.263 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ. ಐಒಸಿ ಜಂಕ್ಷನ್ ನಲ್ಲಿ ಮೇಲ್ಸೇತುವೆ ಮತ್ತು ಬೈಯ್ಯಪ್ಪನಹಳ್ಳಿಯಲ್ಲಿ ಎರಡು ಲೇಯರ್ ಆರ್ ಒಬಿ ಮೇಲ್ಸೇತುವೆ ನಿರ್ಮಾಣಕ್ಕೆ ಸಮ್ಮತಿ
  • ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಉಚ್ಚಗಾಂವ್ ಹಾಗೂ ಸಂತಿಬಸ್ತಿವಾಡ ಹೋಬಳಿಯಲ್ಲಿನ 20 ಕೆರೆಗಳನ್ನು ತುಂಬಿಸುವ ರೂ. 287.55 ಕೋಟಿಗಳ ಅಂದಾಜು ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ
  • ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 61 ಕೆರೆಗಳನ್ನು ತುಂಬಿಸುವ “ಬಾಗೇವಾಡಿ ಕೆರೆ ತುಂಬಿಸುವ ಯೋಜನೆ”ಯ ರೂ. 625 ಕೋಟಿಗಳ ಅಂದಾಜು ಮೊತ್ತದ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ
  • ರಾಯಚೂರು ತಾಲ್ಲೂಕಿನ ಚಿಕ್ಕಮಂಚಾಲಿ ಗ್ರಾಮದ ಹತ್ತಿರ ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ರೂ.158.10 ಕೋಟಿಗಳ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ. ಆಂಧ್ರ ಸರ್ಕಾರದ ಸಮ್ಮತಿಯ ಷರತ್ತಿನೊಂದಿಗೆ ನಿರ್ಮಿಸಲು ಅಸ್ತು.
  • ಕರ್ನಾಟಕ ವಿಧಾನಮಂಡಲದ ಸದನಗಳನ್ನು ಉದ್ದೇಶಿಸಿ, ಉಭಯ ರಾಜ್ಯಪಾಲರು ಮಾಡಲಿರುವ ಕರಡು ಭಾಷಣಕ್ಕೆ ಅನುಮೋದನೆ
  • ನಬಾರ್ಡ್ RIDF-29 ನೆರವಿನೊಂದಿಗೆ ರಾಜ್ಯದ 6 ಜಿಲ್ಲೆಗಳಲಿ 6 ಬಹುಉತ್ಪನ್ನ ಶೀಥಲ ಗ್ರಹಗಳನ್ನು ರೂ. 65.97 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ .‌ಹಾವೇರಿ, ಕೋಲಾರ, ಮಂಡ್ಯ, ಶಿವಮೊಗ್ಗ, ವಿಜಯಪುರ ಮತ್ತು ಹಾಸನ ಜಿಲ್ಲೆಗಳಲ್ಲಿ ನಿರ್ಮಾಣ.

-ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಕಲಬುರಗಿ ಮತ್ತು ಮೈಸೂರಿನಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳನ್ನು ಕ್ರಮವಾಗಿ ರೂ. 49.50 ಕೋಟಿಗಳು ಮತ್ತು ರೂ.49.80 ಕೋಟಿಗಳ ಅಂದಾಜು ವೆಚ್ಚಗಳೊಂದಿಗೆ ಹಾಗೂ ಮೊದಲನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಪ್ರಾದೇಶಿಕ ಕೇಂದ್ರ ಕಚೇರಿ ಮತ್ತು ಅದರಲ್ಲಿಯೇ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯಗಳು, ಸಂಶೋಧನಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು 49.75 ಕೋಟಿಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ

-2023-24ನೇ ಸಾಲಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ 1,37,469 ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರಿಗೆ ಒಬ್ಬರಿಗೆ ಎರಡು ಸೀರೆಗಳಂತೆ ಒಟ್ಟು 2,74,938 ಸೀರೆಗಳನ್ನು ರೂ. 13.75 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಿ ಒದಗಿಸಲು ಆಡಳಿತಾತ್ಮಕ ಅನುಮೋದನೆ

  • ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಹೊಸ ವೈದ್ಯಕೀಯ ಕಾಲೇಜು, ಬಾಲಕ ಮತ್ತು ಬಾಲಿಕೆಯರ ಹಾಸ್ಟೆಲ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ವಸತಿ ನಿಲೆಯಗಳಲ್ಲಿ ಕಟ್ಟಡ ಕಾಮಗಾರಿಗಳ ರೂ. 461.08 ಕೋಟಿಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ
  • ಚಿಕ್ಕಮಗಳೂರು ವೈದ್ಯಕೀಯ ವೈದ್ಯಕೀಯ ವಿಜ್ಞಾನಗಳ ವೈದ್ಯಕೀಯ ಕಾಲೇಜು, ಬಾಲಕ ಮತು ಬಾಲಕಿಯರ ಹಾಸ್ಟೆಲ್, ಭೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ವಸತಿ ನಿಲಯಗಳ ಎಲ್ಲಾ ಕಟ್ಟಡ ಕಾಮಗಾರಿಯ ರೂ. 455 ಕೋಟಿಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ
  • ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 300 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯನ್ನು ರೂ. 126.90 ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ
  • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡಿರುವ 110 ಹಳ್ಳಿಗಳಲ್ಲಿ ಬಿಟ್ಟು ಹೋಗಿರುವ ಪ್ರದೇಶಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ 2ನೇ ಹಂತದಲ್ಲಿ ರೂ. 208.45 ಕೋಟಿಗಳ ಅಂದಾಜು ಮೊತ್ತದ ಕುಡಿಯುವ ನೀರು ಯೋಜನೆಗೆ ಆಡಳಿತಾತ್ಮಕ ಅನುಮೋದನೆ
  • 2020-21 ರಿಂದ 2022-23ನೇ ಸಾಲಿಗೆ ರಾಜ್ಯದಲ್ಲಿ ಸರ್ಕಾರಿ ಮತು ಖಾಸಗಿ ಸಹಭಾಗಿತ್ವದಡಿಯಲ್ಲಿ 78 ಸಂಚಾರಿ ಆರೋಗ್ಯ ಘಟಕ (Mobile Medical Units) ಉಪಯೋಗಿಸಿಕೊಂಡಿದ್ದು, ಸೇವೆಯನ್ನು ಸೇವಾದಾರರ ಬಾಕಿ ಬಿಲ್ಲುಗಳ ರೂ. 21.10 ಕೋಟಿಗಳನ್ನು ಪಾವತಿಸಲು ಅನುಮೋದನೆ
  • ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಶವಾಗಾರ, ಅಡುಗೆ ಮನೆ, ಕಟ್ಟಡಗಳನ್ನು ನಿರ್ಮಿಸುವ ಹಾಗೂ STP ಉನ್ನತೀಕರಿಸುವ ಒಟ್ಟು ರೂ. 150 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ

-ಪೊಲೀಸ್ ಇಲಾಖೆಯ ಪ್ರಧಾನ ಕಛೇರಿ ಸೇರಿದಂತೆ ಇತರೆ ಘಟಕಗಳಲ್ಲಿನ ವಾಹನಗಳಿಗೆ Petro Card ಮುಖೇನ ಇಂಧನ ಮತ್ತು ತೈಲವನ್ನು 3 ವರ್ಷಗಳ ಅವಧಿಗೆ ರೂ. 170 ಕೋಟಿಗಳ ಅಂದಾಜು ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮತಿ.

  • ಸಿ.ಎಂ. ಲಿಂಗಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರು, ಇವರಿಗೆ ‘ಜಿ’ ಪ್ರವರ್ಗದಡಿ ಹೊಸೂರು ಸರ್ಜಾಪುರ ರಸ್ತೆ, ಸೆಕ್ಟರ್-3ನೇ ಬಡಾವಣೆಯಲ್ಲಿ ಹಂಚಿಕೆ ಮಾಡಿರುವ 15×24 ಮೀ. ಅಳತೆಯ ನಿವೇಶನ ಸಂಖ್ಯೆ: 11698 ಗುತ್ತಿಗೆ ಅವಧಿಯಲ್ಲಿಯೇ ಶುದ್ಧ ಕ್ರಯ ಶುದ್ದ ಕ್ರಯ ಪತ್ರವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ನೋಂದಾಯಿಸಿಕೊಡಲು ಅನುನೋದನೆ
  • ಬೆಂಗಳೂರಿನ, ಚಾಮರಾಜಪೇಟೆ ವಿಧಾನಸಭಾ – ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಮಳೆ ನೀರುಗಾಲುವೆಗಳ ಪುನರ್ ನಿರ್ಮಾಣ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಬಿಬಿಎಂಪಿ ವತಿಯಿಂದ ರೂ.30 ಕೋಟಿಗಳ ಹೆಚ್ಚುವರಿ ಅನುದಾನದಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ.
  • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ, ಕೆಲವು ಮೂಲಭೂತ ಸೌಕರ್ಯ ಕಾಮಗಾರಿಗಳ ರೂ. 1,200 ಕೋಟಿಗಳ ಕ್ರಿಯಾ ಯೋಜನೆಗೆ ಅನುಮತಿ ನೀಡಿ, ದಿನಾಂಕ 12.01.2024 ರಂದು ಸರ್ಕಾರಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ. ವೈಟ್ ಟಾಪಿಂಗ್ ಸಂಬಂಧಿತ ಕಾಮಗಾರಿ ಇದಾಗಿದೆ.
  • ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಲಬುರಗಿ ಮೆತ್ತು ಬೆಳಗಾವಿ ವೈದ್ಯಕೀಯೆ ವಿಜ್ಞಾನಗಳ ಸಂಸ್ಥೆ, ಬೆಳಗಾವಿ ಈ ಸರೆಸ್ಥೆಗಳ ಆವರಣದಲಿ ಸುಟ್ಟ ಗಾಯಗಳ ಘಟಕವನ್ನು ರೂ. 31.54 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ
  • ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲಿ ನಿರ್ಮಾಣ ಹಂತದಲಿರುವ ಹೊಸ ವೈದ್ಯಕೀಯ ಕಾಲೇಜು, ಬಾಲಕ ಮತ್ತು ಬಾಲೆಕಿಯರ ಹಾಸ್ಟೆಲ್, ಬೋಧಕ ಮತು ಬೋಧಕೇತರ ಸಿಬ್ಬಂದಿಗಳ ವಸತಿ ನಿಲಯಗಳೆ ಎಲಾ ಕಟ್ಟಡಿ ಕಾಮಗಾರಿಗಳನ್ನು ಪೂರ್ಣಿಗೊಳಿಸಲು ಪರಿಷ್ಕೃತ ಅಂದಾಜು ಮೊತ್ತ 499 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ
  • ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕೆ, 2024″ಕ್ಕೆ ಅನುಮೋದನೆ
  • ರಾಜ್ಯದ 6 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ರೂ.100 ಕೋಟಿಗಳ ವೆಚ್ಚದಲ್ಲಿ ಉನ್ನತೀಕರಿಸುವ ಬಗ್ಗೆ ಮಹತ್ವಾಕಾಂಕ್ಷಿ ತಾಲ್ಲೂಕುಗಳಲ್ಲಿ (ರಾಯಚೂರು, ಬೆಳ್ಳಾರಿ ವಿಜಯಪುರ) ರೂ. 52.81 ಕೋಟಿಗಳ ವೆಚ್ಚದಲ್ಲಿ ಮತ್ತು ಮಹತ್ವಾಕಾಂಕ್ಷಿ ತಾಲ್ಲೂಕುಗಳಲ್ಲದ (ಬೆಂಗಳೂರಿನ ಹೊಸೂರು ರಸ್ತೆ, ಕಲಬುರಗಿ ಮತು ಮೈಸೂರು) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ರೂ. 47.18 ಕೋಟಿಗಳ ವೆಚ್ಚಕ್ಕೆ ಒಪ್ಪಿಗೆ

More News

You cannot copy content of this page