ಬೀದರ್: ನಗರದಲ್ಲಿ ಬೀದಿ ನಾಯಿಗಳಿಗೆ ಹಿಂಸೆ ನೀಡಿ ಮಾರಣ ಹೋಮ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ನಾಯಿಗಳನ್ನು ಹಿಡಿದು ಎಂಟಿ ರ್ಯಾಬಿಸ್ ಇಂಜೆಕ್ಷನ್ ಕೊಡಲು ಮಾನವ ವಿಕಾಸ್ ಕೇಂದ್ರಕ್ಕೆ ನೀಡಿದ್ದ ಟೆಂಡರ್ ಅನ್ನು ರದ್ದುಪಡಿಸಲಾಗಿದೆ.
ಬೀದಿನಾಯಿಗಳಿಗೆ ಎರಡು ಕಡೆ ಹಗ್ಗ ಕಟ್ಟಿ ನೆಲಕ್ಕೆ ಬಡಿದು ಸಾಯಿಸಿದ ಆರೋಪದ ಹಿನ್ನೆಲೆಯಲ್ಲಿ ಬೀದರ್ ನಗರ ಸಭೆ ಸಂಸ್ಥೆಗೆ ನೀಡಿದ್ದ ಟೆಂಡರ್ ಅನ್ನು ರದ್ದುಪಡಿಸಿದೆ.

ಬೀದರ್ ನಗರದಲ್ಲಿ ಬೀದಿ ನಾಯಿಗಳ ಕಾಟ ಮಿತಿಮಿರಿದ ಹಿನ್ನೆಲೆಯಲ್ಲಿ ಅವುಗಳನ್ನ ಹಿಡಿದು ಎಂಟಿ ರ್ಯಾಬಿಸ್ ಇಂಜೆಕ್ಷನ್ ಕೊಡಲು ಮಾನವ ವಿಕಾಸ್ ಕೇಂದ್ರಕ್ಕೆ ಟೆಂಡರ್ ನೀಡಲಾಗಿತ್ತು. ಪ್ರತಿ ಬೀದಿ ನಾಯಿಯೊಂದಕ್ಕೆ 500 ರೂಪಾಯಿನಂತೆ ವ್ಯಾಕ್ಸಿನ್ ನೀಡಲು ಟೆಂಡರ್ ನೀಡಲಾಗಿತ್ತು.
ಪ್ರಕರಣ ಬೆಳಕಿಗೆ ಬಂದಿದ್ದೆ ತಡ ಮಾನವ ವಿಕಾಸ್ ಕೇಂದ್ರಕ್ಕೆ ನೋಟಿಸ್ ಕೊಟ್ಟು ಅದನ್ನ ಬ್ಲಾಕ್ ಲಿಸ್ಟ್ ಮಾಡಲು ನಗರಸಭೆ ಆಯುಕ್ತ ಶಿವರಾಜ್ ರಾಠೋಡ್ ಕ್ರಮ ಕೈಗೊಂಡಿದ್ದಾರೆ.
ಸುಮಾರು ಐವತ್ತಕ್ಕು ಹೆಚ್ಚಿನ ನಾಯಿಗಳನ್ನು ಒಂದೇ ದಿನದಲ್ಲಿ ಎರಡು ಕಡೆ ಹಗ್ಗ ಕಟ್ಟಿ ನೆಲಕ್ಕೆ ಬಡಿದು ಹಿಂಸೆ ನೀಡಿದ ಆರೋಪ ಈ ಸಂಸ್ಥೆ ಹೊಂದಿದೆ ಎಂದು ತಿಳಿದುಬಂದಿದೆ.