THIS IS OUR DEVELOPMENT..?: ರಾಷ್ಟ್ರ ಬಡತನದಲ್ಲಿ 11ನೇ ಸ್ಥಾನ, ಹಸಿವಿನಲ್ಲಿ 112 ಸ್ಥಾನ, ಭ್ರಷ್ಟಾಚಾರದಲ್ಲಿ 98 ನೇ ಸ್ಥಾನ: ಇದು ನಮ್ಮ ಅಭಿವೃದ್ಧಿ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ರಾಷ್ಟ್ರ ಬಡತನ ರೇಖೆಯಲ್ಲಿ 111ನೇ ಸ್ಥಾನದಲ್ಲಿದೆ, ಹಸಿವಿನಲ್ಲಿ 112 ನೇ ಸ್ಥಾನದಲ್ಲಿದೆ, ಭ್ರಷ್ಟಾಚಾರದಲ್ಲಿ 98 ನೇ ಸ್ಥಾನದಲ್ಲಿದೆ, ಇದು ಕಳೆದ ಹತ್ತು ವರ್ಷದಲ್ಲಾದ ಅಭಿವೃದ್ಧಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕೇಂದ್ರದಿಂದ ಉದ್ಯೋಗ ಸೃಷ್ಟಿ‌ ಆಗಿಲ್ಲ, ರೈತರ ಆದಾಯ ದುಪ್ಪಟ್ಟು ಮಾಡಿದ್ರಾ? ಯಾವುದೇ ಆಗಿಲ್ಲ, ನಮ್ಮ ನಿರೀಕ್ಷೆ ಶೂನ್ಯ, ಕನ್ನಡಿಗರಿಗೆ ಅನ್ಯಾಯ ಆಗ್ತಾನೇ ಇದೆ ಎಂದು ತಿಳಿಸಿದರು.
ಜಿಎಸ್ ಟಿ ಮರುಪಾವತಿಯಲ್ಲಿ ಅನ್ಯಾಯ, ಕಲಬುರಗಿ ಇಂಡಸ್ಟ್ರೀಸ್ ಮಾಡ್ತೇವೆ ಅಂದ್ರು ಆಗಿಲ್ಲ, ಮೋದಿ ಗ್ಯಾರೆಂಟಿಯಲ್ಲಿ 50% ರಷ್ಟು ಕನ್ನಡಿಗರ ಬೆವರಿದೆ, ಜಲಜೀವನ್ ಮಿಷನ್ ನಲ್ಲಿ 50% ಬೆವರಿದೆ, ಬಡವರಿಗೆ ಯಾವ ಯೋಜನೆ ತಂದಿದ್ದಾರೆ, ಫೈನಾನ್ಸ್ ಮಿನಿಸ್ಟರ್ ಕನ್ನಡದಿಂದ ಆಯ್ಕೆಯಾದವರು, ಕರ್ನಾಟಕಕ್ಕೆ ಅವರ ಕೊಡುಗೆಯೇನು ಎಂದು ಪ್ರಶ್ನಿಸಿದರು.

More News

You cannot copy content of this page