ಬೆಂಗಳೂರು : ಲೋಕಸಭಾ ಚುನಾವಣೆಗೂ ಮುನ್ನ ಯಾವುದೇ ಕಾರಣಕ್ಕೂ, ಸಿಎಂ ಸಿದ್ದರಾಮಯ್ಯ ಅವರು ಶ್ವೇತಪತ್ರ ಹೊರಡಿಸಲ್ಲ ಎಂದು ಚುನಾವಣಾ ಕಣದಿಂದ ನಿವೃತ್ತಿ ಹೊಂದಿರುವ ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರ ಇದ್ದಾಗ ಮತ್ತೆ ನರೇಂದ್ರ ಮೋದಿ ಬಂದ ಬಳಿಕ ರಾಜ್ಯಕ್ಕೆ ಏನ್ ಬಂದಿದೆ ಎಂಬುದನ್ನು ಶ್ವೇತ ಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಸಿಎಂ ಮತ್ತು ಡಿಸಿಎಂ ಅವರು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಕರ್ನಾಟಕದ ಮಾನವನ್ನು ಹರಾಜು ಹಾಕುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಸಿಎಂ, ಡಿಸಿಎಂ ಹೋಗಿ ದೆಹಲಿಯಲ್ಲಿ ಹೋಗಿ ಪ್ರತಿಭಟನೆ ಮಾಡ್ತಾರಾ..? ಎಂದು ಪ್ರಶ್ನಿಸಿದರು.

ಅವ್ರು ಪ್ರತಿಭಟನೆ ಮಾಡೋಕು ಮುನ್ನ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದ ಅವರು, ಬೆಳೆ ಪರಿಹಾರಕ್ಕೆ ಯಾವ ಯಾವ ಜಿಲ್ಲೆಗೆ ಎಷ್ಟೆಷ್ಟು ಹಣ ಕೊಟ್ಟಿದ್ದೀರಿ ಎಂಬುದನ್ನು ಮೊದಲು ಹೇಳಲಿ ಎಂದರು.
ಹಾವೇರಿ ಲೋಕಸಭಾ ಕ್ಷೇತ್ರದ ಬಗ್ಗೆ ಯಾವುದೇ ಗೊಂದಲ ಇಲ್ಲ
ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಹೇಳಿದ ಅವರು, ಅದರ ಬಗ್ಗೆಯೂ ಇಂದು ಯಾವುದೇ ಚರ್ಚೆ ಆಗಿಲ್ಲ ಎಂದರು. ಅಲ್ಲಿ ನಾಲ್ವರು, ಐದು ಜನ ಆಕಾಂಕ್ಷಿಗಳಿದ್ದು, ಅದರಲ್ಲಿ ಈಶ್ವರಪ್ಪ ಅವರ ಪುತ್ರನೂ ಆಕಾಂಕ್ಷಿಯಾಗಿದ್ದಾರೆ.
ನಾವು ಮಾತಾಡಿದ್ದು ದಾವಣಗೆರೆಗೆ ಕೇಂದ್ರದ ಮುಖಂಡ ಅಮಿತ್ ಶಾ ಪ್ರವಾಸದ ಬಗ್ಗೆ ಎಂದು ಹೇಳಿದ ಅವರು, ಫೆಬ್ರವರಿ 8ಕ್ಕೆ ದಾವಣಗೆರೆ ಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ ಇದೆ, ಫೆಬ್ರವರಿ 10ಕ್ಕೆ ಅಮಿತ್ ಶಾ ದಾವಣಗೆರೆ ಗೆ ಭೇಟಿ ಕೊಡ್ತಿದ್ದಾರೆ, ಅಮಿತ್ ಶಾ ಕಾರ್ಯಕ್ರಮದ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ ಅಷ್ಟೇ ಎಂದರು.