RAHUL GANDHI MEETS HEMANT SOREN WIFE: ಬಿಜೆಪಿ ಸಂಚಿನಿಂದ ನನ್ನ ಬಂಧನ: ರಾಜಭವನ ಪ್ರಮುಖ ಪಾತ್ರ: ಹೇಮಂತ್ ಸೋರೇನ್

ರಾಂಚಿ : ತಮ್ಮ ಬಂಧನಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿರುವ ಸಂಚು ಹಾಗೂ ಇದರಲ್ಲಿ ರಾಜಭವನದ ಪಾತ್ರವೂ ಪ್ರಮುಖವಾಗಿದೆ ಎಂದು ಮಾಜಿ ಸಿಎಂ ಹಾಗೂ ಇಡಿಯಿಂದ ಬಂಧನಕ್ಕೊಳಗಾಗಿರುವ ಹೇಮಂತ್ ಸೋರೇನ್ ತಿಳಿಸಿದ್ದಾರೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿರುವ ಚಂಪೈ ಸೋರೇನ್ ಅವರು ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಭೀತು ಪಡಿಸಿದರು. ಈ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದ ಹೇಮಂತ್ ಸೋರೇನ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ತಮ್ಮ ವಿರುದ್ಧ ಬಿಜೆಪಿ ಮಾಡಿರುವ ಆರೋಪಗಳನ್ನು ಸಾಭೀತು ಪಡಿಸಿದರೆ, ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಇದೇ ಸಂದರ್ಭದಲ್ಲಿ ಹೇಂಮತ್ ಸೋರೇನ್ ಸವಾಲು ಹಾಕಿದರು.
ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಜಿ ವಿಶೇಷ ನ್ಯಾಯಾಲಯವು ಸೋರೇನ್ ಅವರನ್ನು ಐದು ದಿನಗಳ ಇಡಿ ಕಸ್ಟಡಿಗೆ ಶುಕ್ರವಾರ ಒಪ್ಪಿಸಿತ್ತು.

ಹೇಮಂತ್ ಸೋರೇನ್ ಪತ್ನಿಯನ್ನು ಭೇಟಿಯಾದ ರಾಹುಲ್ ಗಾಂಧಿ
ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೇನ್ ಅವರ ಪತ್ನಿ ಕಲ್ಪನಾ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದರು.

ಜಾರ್ಖಂಡ್ ನಲ್ಲಿ ರಚನೆಯಾಗಿರುವ ಜೆಎಂಎಂ, ಕಾಂಗ್ರೆಸ್ ಮತ್ತು ಆರ್ ಜೆಡಿ ಮತ್ತು ಸಿಪಿಐ ಮೈತ್ರಿ ಸರ್ಕಾರ ಇಂದು ವಿಧಾನಸಭೆಯಲ್ಲಿ ಬಹುಮತ ಸಾಭೀತು ಪಡಿಸಿತು. ಇದಾದ ಕೆಲವೇ ನಿಮಿಷಗಳಲ್ಲಿ ಐತಿಹಾಸಿಕ ಶಾಹೀದ್ ಮೈದಾನದಲ್ಲಿ ಸಾರ್ವಜನಿಕ ರ್ಯಾಲಿ ಆರಂಭಕ್ಕೂ ಕೆಲ ಹೊತ್ತಿನ ಮುನ್ನ ರಾಹುಲ್ ಗಾಂಧಿ ಅವರು ಕಲ್ಪನಾ ಸೋರೇನ್ ಅವರನ್ನು ಭೇಟಿಯಾದರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

More News

You cannot copy content of this page