ಬೆಂಗಳೂರು : ನಮ್ಮ ದೇಶದ ಸಂವಿಧಾನ ಬೆಳ್ತಂಗಡಿ ಶಾಸಕರಿಗೆ ಗೊತ್ತಿಲ್ಲಾ ಅನ್ನಿಸುತ್ತೆ, ಅವರು ಶಾಸಕರಾಗೋಕೆ ಅರ್ಹರಿಲ್ಲಾ, ಇದು ಮೂರ್ಖತನದ ಪರಮಾವಧಿ ಎಂದು ಸಚಿವ ಎಂ ಬಿ ಪಾಟೀಲ್ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಹಣವನ್ನ ಹಿಂದುಗಳಿಗೆ ಕೊಡಬೇಕಂತ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ನೀಡಿರುವ ಹೇಳಿಕೆಗೆ ಕಟು ಶಬ್ದಗಳಿಂದ ಟೀಕಿಸಿದರು.
ಇಂತಹ ಮುರ್ಖತನದ ಪ್ರಶ್ನೆಗಳಿಗೆ ಉತ್ತರ ಕೋಡೊದೆ ಇರುವುದು ಒಳ್ಳೆಯದು ಎಂದು ತಿಳಿಸಿದರು.
ಡಿಕೆ ಸುರೇಶ್ ಅವರನ್ನ ಗುಂಡಿಕ್ಕಿ ಕೊಲ್ಲಬೇಕು ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪನವರು ಅನೇಕ ಸಲ ಏನೇನೊ ಮಾತಾನಾಡಿದ್ದಾರೆ, ಅದನ್ನೆಲ್ಲಾ ತೆಗದು ನೋಡಿದ್ರೆ ಬಹಳ ಅನಾಹುತಕ್ಕೆ ಆಗುತ್ತದೆ ಎಂದು ಕಿಡಿಕಾರಿದರು.,
ಡಿ ಕೆ ಸುರೇಶ್ ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಅನ್ನೋದನ್ನ ಗಮನಿಸಬೇಕು, ದಕ್ಷಿಣ ಭಾರತದ ರಾಜ್ಯಗಳು ತೆರಿಗೆ ಪಾವತಿ ಮಾಡುತ್ತಿವೆ, ಆದ್ರೆ ನಮಗೆ ಅನ್ಯಾಯ ಮಾಡಿ ಉತ್ತರ ಭಾರತಕ್ಕೆ ಒಯ್ಯುತ್ತಿದ್ದೀರಿ ಎಂದು ತಮ್ಮ ಸಿಟ್ಟನ್ನು ತೋರಿಸಲಿಕ್ಕೆ ಆ ರೀತಿ ಮಾತನಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಅವರು ದೇಶ ವಿಭಜನೆ ಮಾಡುವ ರೀತಿಯಲ್ಲಿ ಹೇಳಿಲ್ಲಾ ಎಂದು ಹೇಳಿದ ಸಚಿವರು, ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗ್ತಿದೆ ಅದಕ್ಕೆ ಹೇಳಿದ್ದಾರೆ. ಈ ರೀತಿ ಅನ್ಯಾಯ ಆದ್ರೆ ನಾಳೆ ಹೀಗೆ ಆಗುತ್ತೆ ಅಂತ ಹೇಳಿದ್ದಾರೆ ಎಂದರು.
ಇದನ್ನ ತೆಗೆದುಕೊಂಡು ಹೋಗಿ ದೇಶ ವಿಭಜನೆ ಅಂತಿರಾ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್, ಈಶ್ವರಪ್ಪ ಸೇರಿದಂತೆ ಬಿಜೆಪಿಯವರು ಯಾರು ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲಾ, ಇವರು ದೇಶ ರಾಷ್ಟೀಯತೆ ಬಗ್ಗೆ ಮಾತಾಡ್ತಿದ್ದಾರೆ ಎಂದರು.
ಸಂವಿಧಾನವನ್ನ ತಿರುಚಲಿಕ್ಕೆ ಅಧಿಕಾರಕ್ಕೆ ಬಂದಿದ್ದೇವೆ ಅಂತ ಅನಂತ್ ಕುಮಾರ್ ಹೆಗ್ಡೆ ಹೇಳಿದ್ರು, ಅವರ ಉದ್ದೇಶ ಏನು ಅಂತಾ ಇಡೀ ಜಗತ್ತಿಗೆ ಗೊತ್ತಿದೆ, ಅವರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ, ಅವರನ್ನ ಟೀಕೆ ಮಾಡುವ ಕೆಲಸ ಬಿಜೆಪಿ ಮಾಡ್ತಿದ್ದಾರೆ ಎಂದು ವಿವರಿಸಿದರು.
ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗಿದೆ ಎಂಬ ಆರೋಪಕ್ಕೆ ಶ್ವೇತಪತ್ರ ಹೊರಡಿಸುತ್ತೀರಾ ಎಂಬ ವಿಚಾರಕ್ಕೆ, ನಾವು ಶ್ವೇತ ಪತ್ರ ಹೊರಡಿಸ್ತೀವಿ, ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗಿಲ್ಲಾ, ಎಲ್ಲಾ ಗ್ಯಾರಂಟಿ ಜಾರಿ ಮಾಡಿದ್ದೇವೆ, ಅಭಿವೃದ್ಧಿಗೂ ಹಣ ಬರಬೇಕಲ್ಲಾ, 69 ಸಾವಿರ ಕೋಟಿ ಬರಬೇಕು, ಬಜೆಟ್ ಗಾತ್ರ ಜಾಸ್ತಿಯಾಗಿದೆ ಅನುದಾನ ಬರಬೇಕು ಎಂದು ಆಗ್ರಹಿಸಿದರು.
13 ಲಕ್ಷ ಕೋಟಿ ನಾವು ಟ್ಯಾಕ್ಸ್ ಕಟ್ಟುತ್ತೇವೆ, ಮೊನ್ನೆ ಸಿಎಂ ಅವರು ಜಂತರ್ ಮಂತರ್ ನಲ್ಲಿ ಮಾತನಾಡಿದ್ದೇ ಶ್ವೇತಪತ್ರ ಇದ್ದ ಹಾಗೆ, ಆದ್ರು ನಾವು ಶ್ವೇತಪತ್ರ ಹೊರಡಿಸುತ್ತೇವೆ ಎಂದರು.