Rajat Ullagaddimath Foundation: ರಾಷ್ಟ್ರ ಧ್ವಜ ತಯಾರಕರಿಗೆ ಗೌರವ: ರಜತ್ ಫೌಂಡೇಷನ್ ವತಿಯಿಂದ ರಜತ್ ಸಂಭ್ರಮ

ಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡದಲ್ಲಿ ಯುವ ಕಾಂಗ್ರೆಸ್ ನಾಯಕರ ಒಗ್ಗಟ್ಟು ತಮ್ಮ ಪಕ್ಷದ ಹಿರಿಯ ನಾಯಕರು ಹುಬ್ಬೆರಗಿಸುವ ಹಾಗೆ ಆಗಿದೆ ಅದಕ್ಕೆ ಸಾಕ್ಷಿ ಎನ್ನುವಂತೆ ರಜತ್ ಪೌಂಡೇಷನ್ ವತಿಯಿಂದ ಎರಡು ವರ್ಷಗಳಿಂದ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿರುವ ರಜತ ಸಂಭ್ರಮಕ್ಕೆ ಇದೀಗ ಮತ್ತೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್ ಯುವ ಮುಖಂಡ ರಜತ ಉಳ್ಳಾಗಡ್ಡಿಮಠ ಹುಟ್ಟು ಹಬ್ಬದ ದಿನದಂದು ರಜತ ಪೌಂಡೇಶನ್ ಮೂಲಕ ನಡೆಯುತ್ತಾ ಬಂದಿರುವ ಕಾರ್ಯಕ್ರಮ ಇದಾಗಿದ್ದು.ಪ್ರತಿವರ್ಷ ಬಿನ್ನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಫೆಬ್ರುವರಿ 14ರಂದು ಕೂಡ ರಜತ್ ಸಂಭ್ರಮ ಅದ್ದೂರಿಯಾಗಿ ನಡೆದಿತ್ತು.ಬೆಂಗೇರಿಯ ರಾಷ್ಟ್ರ ದ್ವಜ ತಯಾರಕರಿಗೆ ಗೌರವದೊಂದಿಗೆ ಸನ್ಮಾನಿಸಿ,ನಗೆ ಹಬ್ಬ ಕೂಡ ಆಚರಿಸಲಾಯಿತು ಆ ಸಮಯದಲ್ಲಿ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಭರ್ಜರಿ ಶಕ್ತಿ ಪ್ರದರ್ಶನ ಮಾಡಿದಂತೆ ಭಾಸವಾಗಿತ್ತು. ಇದೀಗ ಮತ್ತೆ ರಜತ್ ಸಂಭ್ರಮ ಕಾರ್ಯಕ್ರಮ ನಡೆಸಲು ಪೌಂಡೇಶನ್ ನಿರ್ಧರಿಸಿದ್ದು. ಹುಬ್ಬಳ್ಳಿಯ ಗಿರಣಿಚಾಳ ಮೈದಾನದಲ್ಲಿ ಚಿತ್ರ ನಟ ಡಾಲಿ ಧನಂಜಯ,ಜೊತೆಗೆ ಹಾಸ್ಯ ಕಲಾವಿದ ಪ್ರಾಣೇಶ್ ಅವರ ತಂಡ ಆಗಮಿಸಲಿದೆ ಎಂದು ತಿಳಿದು ಬಂದಿದೆ.

More News

You cannot copy content of this page