NITISH KUMAR WINS VOTE OF TRUST: ಮಹಾಘಟಬಂಧನ್ ಬಿಟ್ಟು ಎನ್ ಡಿಎ ಸೇರಿಕೊಂಡ ಬಿಹಾರ್ ಸಿಎಂ ನಿತೀಶ್ ಕುಮಾರ್ ವಿಶ್ವಾಸಮತ ಸಾಭೀತು: 129 ಶಾಸಕರ ಬೆಂಬಲ

ಪಟ್ನಾ: ಮಹಾಘಟಬಂಧನ್ ಮೈತ್ರಿಕೂಟ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಇದೀಗ ಎನ್ ಡಿ ಎ ಜತೆ ಸೇರಿ ಸರ್ಕಾರ ರಚಿಸಿದ್ದಾರೆ. ಅವರು ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಭೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 243 ಸದಸ್ಯರಲ್ಲಿ 129 ಶಾಸಕರು ನಿತೀಶ್ ಬೆಂಬಲ ಸೂಚಿಸಿದ್ದಾರೆ.
243 ಸದಸ್ಯ ಬಲದಲ್ಲಿ ಜೆಡಿಯು 45 ಶಾಸಕರನ್ನು ಹೊಂದಿದೆ. ಬಿಜೆಪಿ ಮತ್ತು ಹಿಂದುಸ್ತಾನಿ ಅವಾಮ್ ಮೋರ್ಚಾ ಕ್ರಮವಾಗಿ 79 ಮತ್ತು 4 ಸದಸ್ಯರನ್ನು ಹೊಂದಿದೆ. ಸ್ವತಂತ್ರ ಅಭ್ಯರ್ಥಿಯೊಬ್ಬರ ಬೆಂಬಲದಿಂದ ಈ ಒಕ್ಕೂಟ ಸದಸ್ಯ ಬಲ 128 ಆಗಿದೆ. ಮಹಾಘಟಬಂಧನ ಬಳಿ 115 ಶಾಸಕ ಬಲವಿದೆ. ಬಹುತಮ ಸಾಭೀತು ಪಡಿಸಲು 122 ಶಾಸಕರು ಅಗತ್ಯ

ಸ್ವೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಅಂಗೀಕಾರ
ಬಿಹಾರ ವಿಧಾನಸಭೆ ಸ್ವೀಕರ್ ಅವಧ್ ಬಿಹಾರಿ ಚೌಧರಿ ವಿರುದ್ಧ ಆಡಳಿತರೂಢ ಎನ್ ಡಿ ಎ ಸರ್ಕಾರ ಮಂಡಿಸಿದ ಅವಿಶ್ವಾಸ ನಿರ್ಣಯ ಅಂಗಿಕಾರವಾಗಿದೆ.
ಚೌಧರಿ ಅವರು ಆರ್ ಜೆಡಿ ಪಕ್ಷದವರಾಗಿದ್ದು, ಅವರ ಪಕ್ಷ ಇದೀಗ ಅಧಿಕಾರದಲ್ಲಿ ಿಲ್ಲ. ಆದರೂ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿದ್ದರು. ಹೀಗಾಗಿ ನೂತನ ಎನ್ ಡಿ ಎ ಸರ್ಕಾರ ಅವರ ವಿರುಧ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ, ಗೆಲುವು ಸಾಧಿಸಿದ್ದಾರೆ.

More News

You cannot copy content of this page