NOMINATION FILING TODAY: ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಂದ ಇಂದು ನಾಮಪತ್ರ ಸಲ್ಲಿಕೆ: ಐದನೇ ಅಭ್ಯರ್ಥಿ ಕಣಕ್ಕಿಳಿದರೆ ಚುನಾವಣೆ

ಬೆಂಗಳೂರು : ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನವಾಗಿದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ‌‌ ನಾಸಿರ್ ಹುಸೇನ್, ಜೆ.ಸಿ.ಚಂದ್ರಶೇಖರ್ ಹಾಗೂ ಅಜೆಯ್ ಮಾಕೇನ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅದೇ ರೀತಿಯಲ್ಲಿ ಬಿಜೆಪಿಯಿಂದ ನಾರಾಯಣಸ್ವಾಮಿ‌ ಬಾಂಡಗೆ ಅವರಿಂದ ನಾಮಪತ್ರ ಸಲ್ಲಿಸಲಾಗುವುದು.
ಕಾಂಗ್ರೆಸ್ ಮತ್ತು ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರೆ ಅವಿರೋಧ ಆಯ್ಕೆ ಖಚಿತವಾಗಲಿದೆ. ಆದರೆ, ಐದನೇ ಅಭ್ಯರ್ಥಿ ಕಣಕ್ಕಿಳಿದರೆ ರಾಜಕೀಯ ಲೆಕ್ಕಚಾರವೇ ಬುಡಮೇಲು ಆಗುವ ಸಾಧ್ಯತೆಗಳಿವೆ.
ಗೆಲುವಿಗೆ ಬೇಕಿರುವ ಮತ ಸಂಖ್ಯೆ ಇಲ್ಲ. ಆದರೂ ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕಿಳಿಸುವ ಸಂಬಂಧ ಜೆಡಿಎಸ್ ಮತ್ತು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ. ಕಾಂಗ್ರೆಸ್ ಮತಗಳನ್ನು ಚದುರಿಸುವ, ಕೈ ಪಡೆಯಲ್ಲಿ ಗೊಂದಲ‌ ಸೃಷ್ಟಿಸಲು ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ.

ಬಿಜೆಪಿ 66 ಜೆಡಿಎಸ್ ನ 19 ಸೇರಿದರೆ ಒಟ್ಟು 85 ಮತಗಳಾಗಲಿವೆ. ಬಿಜೆಪಿ ಅಭ್ಯರ್ಥಿಗೆ 45 ಮತಗಳು ನೀಡಿದರೆ, ಇನ್ನೂ ಉಳಿದ 40 ಮತಗಳು ಜೆಡಿಎಸ್‌ ಮತ್ತು ಬಿಜೆಪಿ ಬಳಿ ಉಳಿಯಲಿದೆ. ಬಿಜೆಪಿ ಮತ್ತು ಜೆಡಿಎಸ್ ನ 40 ಮತಗಳ ಜತೆ ಕಾಂಗ್ರೆಸ್ ಬೆಂಬಲಿತ ಶಾಸಕರಾದ‌‌ ದರ್ಶನ್ ಪಟ್ಟಣ್ಣಯ್ಯ, ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ್, ವೀರಭದ್ರಪ್ಪ ಮೂವರ ಮತಗಳನ್ನು ಮೈತ್ರಿ ಅಭ್ಯರ್ಥಿ ಸೆಳೆದರೆ ಒಟ್ಟು ಮತಗಳ‌ 43 ಸಂಖ್ಯೆ ಆಗಬಹುದು.
ಆದರೂ ಕೂಡ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಎರಡನೆ ಪ್ರಾಶಸ್ತ್ಯ ಮತಗಳು ಐದನೇ ಅಭ್ಯರ್ಥಿಗೆ ರವಾನಿಸಬಹುದು. ಈ ನಡುವೆ ಐದನೇ ಕಾಂಗ್ರೆಸ್ ಪಕ್ಷದಿಂದ ಇಬ್ಬರು ಶಾಸಕರು ಅಡ್ಡ ಮತದಾನ ಮಾಡಿದರೆ ಮಾತ್ರ ಐದನೇ ಅಭ್ಯರ್ಥಿ ಗೆಲುವು ಶತಸಿದ್ಧ ಎನ್ನಲಾಗಿದೆ.

ಅಂತಯೇ ಕಾಂಗ್ರೆಸ್ ಮೂರನೇ ಅಭ್ಯರ್ಥಿಗೆ ಗೆಲುವಿಗೆ ಈ ತಂತ್ರ ತೊಡಕಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್ 135 ಹಾಗೂ 3 ಒಟ್ಟು ಸೇರಿ 138 ಸದಸ್ಯರ ಬೆಂಬಲವಿದೆ. ಕಾಂಗ್ರೆಸ್ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದರಿಂದ ಮೂವರು ಅಭ್ಯರ್ಥಿಗಳ ಗೆಲುವು ಆರಾಮವಾಗಲಿದೆ.
ಬಿಜೆಪಿ ಅಭ್ಯರ್ಥಿಗೆ 45 ಮತಗಳು ಚಲಾಯಿಸಿದರೆ ಉಳಿದ 21 ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ವರ್ಗಾಯಿಸುವ ತಂತ್ರ ಮಾಡಲಾಗಿದ್ದು, ಬಿಜೆಪಿ ಹೆಚ್ಚುವರಿ ಮತ 21 ಹಾಗೂ ಜೆಡಿಎಸ್ ಮತಗಳು 19 ಒಟ್ಟು 40 ಮತಗಳಾಗಲಿವೆ. ಇ‌ನ್ನು ಐದು ಮತಗಳನ್ನು ಕಾಂಗ್ರೆಸ್ ಪಕ್ಷದಿಂದ 3 ಮತಗಳನ್ನು ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ್, ವೀರಭದ್ರಪ್ಪ,ಹಾಗೂ ದರ್ಶನ್ ಪುಟ್ಟಣ್ಣಯ್ಯ ಅವರಿಂದ ಪಡೆದರೆ ಕಾಂಗ್ರೆಸ್ ಮೂರನೇ ಅಭ್ಯರ್ಥಿ ಗೆಲುವಿಗೆ ಅಡ್ಡಿಯಾಗಲಿದೆ ಎಂದು ಹೇಳಲಾಗಿದೆ.

More News

You cannot copy content of this page