ಹಾವೇರಿ: ಸಾಮಾಜಿಕವಾಗಿ ಹಿಂದುಳಿದವರಿಗೆ ಅವಕಾಶಗಳು ಸಿಗಬೇಕು, ಹಿಂದುಳಿದವರಿಗೆ ಕಾಂಗ್ರೆಸ್ ಸರಕಾರ ಪ್ರೋತ್ಸಾಹ ಕೊಡುತ್ತದೆ, ಪ್ರಧಾನಿಮಂತ್ರಿಗಳು ಸಹ ಅದನ್ನ ಮಾಡಿದರೆ ಒಳ್ಳೆಯದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅಭಿಪ್ರಾಯಪಟ್ಟರು.
ಹಾವೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸಚಿವ ಸಂತೋಷ್ ಲಾಡ್ ಸರಿಯಾಗಿಯೇ ಹೇಳಿದ್ದಾರೆ. ಸಾಮಾಜಿಕವಾಗಿ ಹಿಂದುಳಿದವರಿಗೆ ಹಾಗೂ, ನಿಜವಾದ ಅಭಿವೃದ್ಧಿ ನಡೆದರೆ ದೇಶ ಬಲಶಾಲಿಯಾಗುತ್ತಿತ್ತು ಎಂದಿದ್ದಾರೆ ಎಂದರು.
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ಸದನದಲ್ಲಿ ಚರ್ಚಿಸಿದ್ದಾರೆ. ಪೊಲೀಸರು ತನಿಖೆ ಮಾಡಿ ಕ್ರಮ ಕೈಗೊಂಡಿದ್ದಾರೆ, ಇನ್ನೂ ಹೆಚ್ಚಿನ ತನಿಖೆ ಮಾಡುತ್ತೇವೆ, ಆರೋಪಿಗಳನ್ನ ಬಂಧಿಸಲಾಗಿದೆ, ತನಿಖೆ ಮಾಡಿ ಸತ್ಯಾಂಶ ಏನು ಬರುತ್ತದೆಯೋ ಕ್ರಮ ಕೈಗೊಳ್ತಿವಿ ಎಂದರು.
ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ, ಅವರು ಹಗಲುಗನಸು ಕಾಣುತ್ತಿರಲಿ, ನಾವು ಆಡಳಿತ ಮಾಡುತ್ತಿರುತ್ತೇವೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಡಿಸಿಎಂ ಹುದ್ದೆ ವಿಚಾರ ಹೈಕಮಾಂಡ್ ಗೆ ಗೊತ್ತಿದೆ, ಎಲ್ಲವನ್ನ ಹೈಕಮಾಂಡ್ ಗೆ ಬಿಡುತ್ತೇವೆ ಎಂದರು.
ಕಾಂಗ್ರೆಸ್ ನಲ್ಲಿ ಬೇಕಾದಷ್ಟು ಅಭ್ಯರ್ಥಿಗಳಿದ್ದಾರೆ, ಅಭ್ಯರ್ಥಿಗಳ ಕೊರತೆ ಇಲ್ಲ, ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳಿಲ್ಲ ಎಂದು ಯಾಕೆ ಹೇಳುತ್ತೀರಿ ಎಂದು ಮರುಪ್ರಶ್ನಿಸಿದರು.