ಹಾವೇರಿ : ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಪ್ರತಿಭಟನೆ ಮಾಡಿ ತಮ್ಮ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಲಾಗಿತ್ತು. ಆದರೆ, ಅದು ಈಡೇರದೇ ಇದ್ದಾಗ ಇಂದು ಮತ್ತೆ ಸಿಎಂ ಸಿದ್ದರಾಮಯ್ಯ ಅವರು ಹಾವೇರಿ ಭೇಟಿ ವೇಳೆ ಪ್ರತಿಧ್ವನಿಸಿದ್ದು, ಪ್ರತಿಭಟನೆಗೆ ಮುಂದಾದ ಬಾವೇರಿ ಮಹಿಳೆಯರು.
ಸಿಎಂ ಸಿದ್ದರಾಮಯ್ಯ ಅವರು ಇಂದು ಹಾವೇರಿ SP ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ ಪಿ ಕಚೇರಿಯ ಮುಂದೆ ನೂರಾರು ಮಹಿಳೆಯರು ಸೇರಿ, ಅನಧಿಕೃತ ಗರ್ಭಕೋಶ ಚಿಕಿತ್ಸೆಗೊಳಗಾಗಿದ್ದ ರಾಣೇಬೆನ್ನೂರಿನ ಮಹಿಳೆಯರು ನ್ಯಾಯಕ್ಕಾಗಿ ಆಗ್ರಹಿಸಿದರು.
ಪರಿಹಾರಕ್ಕಾಗಿ CM ಗೆ ಮನವಿ ನೀಡಲು ಬಂದ ಮಹಿಳೆಯರನ್ನು ತಡೆದ ಪೊಲೀಸರ ವಿರುದ್ದವೇ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ರೊಚ್ಚಿಗೆದ್ದ ಮಹಿಳೆಯರು SP ಕಚೇರಿ ಮುಂದೆ ಧರಣಿ ಕುಳಿತರು. ಮಹಿಳೆಯರನ್ನ ವಶಕ್ಕೆ ಪಡೆಯಲು ಖಾಕಿ ಪಡೆ ಮುಂದಾದಾಗ ನೂತನ ಹಾವೇರಿಯ SP ಕಚೇರಿ ಮುಂದೆ ಹೈಡ್ರಾಮಾ ನಡೆಯಿತು.

ವಿಷ ಕೊಡಿ ಇಲ್ಲ ಪರಿಹಾರ ಕೊಡಿ ಎಂದು ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಕುಸಿದು ಬಿದ್ದರು. ಮಹಿಳೆಯರನ್ನ ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ಕುಸಿದು ಬಿದ್ದ ಮಹಿಳೆ ಲಲಿತಾಬಾಯಿಯನ್ನು ಕೂಡಲೇ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಯಿತು.

ಡೆಪ್ಯುಟಿ ಸ್ಪೀಕರಿಂದ ಮಹಿಳೆಯರ ಮನವೊಲಿಸುವ ಪ್ರಯತ್ನ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಪ್ರತಿಭಟನಾ ನಿರತ ಮಹಿಳೆಯರ ಮನವೊಲಿಸಲು ಮುಂದಾದರು. ನಮಗೆ ಪರಿಹಾರ ಕೊಡಬೇಕು ಎಂದು ಮಹಿಳೆಯರು ಪಟ್ಟು ಹಿಡಿದರು.
ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಅವರ ಮನೆವರೆಗೂ ಪಾದಯಾತ್ರೆ ಮಾಡಿದ್ದೀರಿ, ಅಂದು ಸರಕಾರಕ್ಕೆ ಕಣ್ಣು ಕಾಣುತ್ತಿರಲಿಲ್ಲ, ಹಲವು ವರ್ಷಗಳಿಂದ ಹೋರಾಟ ಮಾಡುತ್ತೀದ್ದಿರಿ, ನ್ಯಾಯ ನೀಡಲಾಗುವುದು ಎಂದು ತಿಳಿಸಿದರು.
ಸಿಎಂ ಭೇಟಿ ಮಾಡಿಸುವ ಭರವಸೆ ನೀಡಿದ್ದರಿಂದ ಪೊಲೀಸ್ ವಾಹನದಲ್ಲಿ ಸಿಎಂ ಭೇಟಿಗೆ ಹೆಲಿಪ್ಯಾಡ್ ಗೆ ಮಹಿಳೆಯರು ತೆರಳಿದರು.