ಮುಂಬೈ : ಚಿಟ್ಟಿ ಆಯಿ ಹೈ, ಆಯಿ ಹೈ ಹಾಡಿನ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ ಖ್ಯಾತ ಗಝಲ್ ಗಾಯಕ ಪಂಕಜ್ ಉದಾಸ್ ಇಂದು ನಿಧನ ಹೊಂದಿದ್ದಾರೆ.
ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕ ಪಂಕಜ್ ಉಧಾಸ್ ಅವರು ಇಂದು ನಿಧನಹೊಂದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರ ನಿಧನದ ವಿಷಯವನ್ನು ಅವರ ಕುಟುಂಬ ವರ್ಗ ಸಾಮಾಜಿಕ ಜಾಲತಾಮದಲ್ಲಿ ಹಂಚಿಕೊಂಡಿದ್ದಾರೆ.
ಧೀರ್ಘಕಾಲದ ಅನಾರೋಗ್ಯದಿಂದ ಫೆಬ್ರುವರಿ 26, 2024 ರಂದು ಪಂಕಜ್ ಉಧಾಸ್ ಅವರು ನಿಧನರಾದರು. ಅವರ ನಿಧನದ ಬಗ್ಗೆ ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಗುಜರಾತ್ ನ ಜೆಟ್ ಪುರದಲ್ಲಿ ಮೇ 17, 1951 ರಲ್ಲಿ ಉಧಾಸ್ ಅವರು ಜನಿಸಿದ್ದರು. ಪ್ರಸಿದ್ದ ಗಾಯಕರಾಗಿದ್ದ ಅವರ ತಂದೆ ಮನುಭಾಯ್ ಉಧಾಸ್ ಅವರಿಂದ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಪಾಠ ಕಲಿತರು.
1980ರಲ್ಲಿ ಗಝಲ್ ಮೂಲಕ ಅವರು ಫೇಮಸ್ ಆಗಿದ್ದರು. ನಂತರ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಮಹೇಶ್ ಭಟ್ ಅವರ 1986ರ ನಾಮ್ ಚಿತ್ರದ ಮೂಲಕ ಚಿಟ್ಟಿ ಆಯಿ ಹೈ ಹಾಡು ಪಂಕಜ್ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. 2006ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಅವರು ಭಾಜನರಾಗಿದ್ದರು.