ರಾಂಚಿ : ರಾಂಚಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಭಾರತ ಅಮೋಘವಾಗಿ ಜಯಗಳಿಸಿದ್ದು, ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ಅರ್ಧ ಶತಕಗಳ ನೆರವಿನಿಂದ ಭಾರತ 5 ವಿಕೆಟ್ ಗಳಿಂದ ಗೆಲುವು ತನ್ನದಾಗಿಸಿತು.

ಎರಡನೇ ಇನ್ನಿಂಗ್ಸ್ ನಲ್ಲಿ 192 ರನ್ ಗಳ ಗುರಿಯನ್ನು ಬೆನ್ನತ್ತಿದ ಭಾರತ ತಂಡದ ರೋಹಿತ್ ಶರ್ಮಾ 55, ಶುಭಮನ್ ಗಿಲ್ ಅಜೇಯ 52, ಯಶಸ್ವಿ ಜೈಸ್ವಾಲ್ 37 ಹಾಗೂ ಧ್ರುವ್ ಜುರೇಲ್ ಅಜೇಯ 39 ರನ್ ಗಳ ಕಾಣಿಕೆಯಿಂದ ಭಾರತ ತಂಡ ಜಯಗಳಿಸಿತು.

ಇದರಿಂದ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಭಾರತ 3-1 ರಲ್ಲಿ ಗೆಲುವು ಸಾಧಿಸಿ, ಈ ಹಿಂದೆ ಇಂಗ್ಲೆಂಡ್ ನಲ್ಲಿ ನಡೆದ ಸರಣಿಯ ಮುಯ್ಯಿ ತೀರಿಸಿಕೊಂಡಿತು. ಆರ್ ಅಶ್ವಿನ್ ಮತ್ತು ಕುಲದೀಪ್ ಯಾದವ್ ಅವರ ಸ್ಪಿನ್ ಮಂತ್ರವನ್ನು ಅಂದಾಜಿಸಲು ವಿಫಲರಾದ ಇಂಗ್ಲೆಂಡ್ ಪಡೆ ಸೋತು ಸುಣ್ಣವಾಯಿತು.
ಭಾರತ ತಂಡ ಮೊದಲ ಇನ್ನಿಂಗ್ಸ್ 307 ರನ್ ಎರಡನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಠಕ್ಕೆ 192
ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 353 ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 145 ರನ್ ಗಳಿಸಿ ಸೋಲನ್ನಪ್ಪಿತು.