ವಿಜಯನಗರ : ಸಂಪಾಯಿತಲೇ ಪರಾಕ್ ಎಂದು ಕಾರ್ಣೀಕ ನುಡಿಯುವ ಮೂಲಕ ವಿಜಯನಗರ ಜಿಲ್ಲೆಯ ಮೈಲಾರಲಿಂಗೇಶ್ವರ ಕಾರ್ಣೀಕೋತ್ಸವ ಇಂದು ಕೊನೆಗೊಂಡಿತು.
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಿಲ್ಲನ್ನು ಏರಿದ ಗೊರವಯ್ಯ ರಾಮಣ್ಣ ಅವರು ಇಷ್ಟೇ ಮಾತನ್ನು ಹೇಳಿ ಕೆಳಗೆ ಜಿಗಿದಾಗ ನೆರೆದಿದ್ದ ಏಳು ಲಕ್ಷಕ್ಕೂ ಅಧಿಕ ಭಕ್ತಾಧಿಗಳ ಹರ್ಷೋದ್ಗಾರ ಮೊಳಗಿತು.
ತೀವ್ರ ಬರದಿಂದ ತತ್ತರಿಸಿರುವ ನಾಡಿಗೆ ಈ ಬಾರಿ ಮಳೆ, ಬೆಳೆ ಚೆನ್ನಾಗಿ ಆಗಲಿದೆ, ನಾಡು ಸುಭಿಕ್ಷವಾಗಲಿದೆ ಎಂದು ಗೊರವಯ್ಯ ಭವಿಷ್ಯವಾಣಿ ನುಡಿದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.


ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಸುಮಾರು 18 ಅಡಿ ಬಿಲ್ಲನ್ನೇರಿ ಗೊರವಯ್ಯ ರಾಮಪ್ಪ ಕಾರ್ಣೀಕ ನುಡಿದರು. ಇದು ಈ ವರ್ಷದ ಭವಿಷ್ಯವಾಣಿ ಎಂದೇ ಕರೆಯಲಾಗುತ್ತಿದೆ. ಮೈಲಾರಲಿಂಗೇಶ್ವರನ ಕಾರ್ಣೀಕ ಕೇಳಿ ನೆರೆದಿದ್ದ ಲಕ್ಷಾಂತರ ಭಕ್ತಾಧಿಗಳು ಪುನೀತರಾದರು.