ಬೆಂಗಳೂರು : 5 ನೇ ಅಭ್ಯರ್ಥಿಯನ್ನ ಗೆಲ್ಲಿಸುವ ಶಕ್ತಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಇಲ್ಲ, ಆದರೂ 5 ನೇ ಅಭ್ಯರ್ಥಿಯನ್ನ ಕಣಕ್ಕಿಳಿಸಿ, ಇಡಿ-ಐಟಿ ಮೂಲಕ ಶಾಸಕರ ಮೇಲೆ ಒತ್ತಡ ಹಾಕಿಸೋದು, ಆಪರೇಷನ್ ಮಾಡೋದು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಆರ್ಷದ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೂಡ ಅದಕ್ಕೆ ಪ್ರತಿಯಾಗಿ ನಮ್ಮ ರಣತಂತ್ರ ರೂಪಿಸಬೇಕಿದೆ, ಯಾವ ಶಾಸಕರು ಯಾರಿಗೆ ಓಟ್ ಹಾಕಬೇಕು ಎಂಬ ಟ್ರೈನಿಂಗ್ ನೀಡಬೇಕಾಗಿದೆ, 70 ಕ್ಕೂ ಹೆಚ್ಚು ಹೊಸ ಶಾಸಕರು ಇದ್ದಾರೆ, ಹಾಗಾಗಿ ಹೋಟೆಲ್ ಗೆ ಹೋಗ್ತಿದ್ದೇವೆ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 20 ಕ್ಕೂ ಹೆಚ್ಚು ಲೋಕಸಭಾ ಸ್ಥಾನವನ್ನ ಗೆಲ್ಲುತ್ತೇವೆ, ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಕ್ಕೆ ಸಾಕಷ್ಟು ಅಭ್ಯರ್ಥಿಗಳು ಇದ್ದಾರೆ, ಹೊಸಬರು ಕೂಡ ಟಿಕೆಟ್ ಕೇಳ್ತಿದಾರೆ, ಅವರಿಗೂ ಅವಕಾಶ ಕೊಡಬೇಕು, ಪಕ್ಷದ ತೀರ್ಮಾನಕ್ಕೆ ಬದ್ದರಾಗಿದ್ದೇವೆ, ಒಳ್ಳೆಯ ವಾತಾವರಣ ಇದೆ, ಅಭ್ಯರ್ಥಿ ಆಯ್ಕೆಯನ್ನ ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು