HOT VERY HOT : ಸೂರ್ಯನ ಪ್ರಖರತೆ ಇನ್ನೂ ಹೆಚ್ಚಲಿದೆ: ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಕೆಲವೊಂದು ಮಾರ್ಗೋಪಾಯಗಳು ಇಲ್ಲಿವೆ.

ಬೆಂಗಳೂರು : ಈ ವರ್ಷ ರಾಜ್ಯಾದ್ಯಂತ ಹಿಂದೆಂದೂ ಕಾಣದ ಸೂರ್ಯನ ಶಾಖದ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೂ ಈ ಪ್ರಖರತೆ ಜೂನ್ ಎರಡನೇ ವಾರದವರೆಗೂ ಮುಂದುವರೆಯುವುದರಿಂದ ಪ್ರತಿಯೊಬ್ಬರು ಕೆಲವೊಂದು ರೀತಿಯಲ್ಲಿ ಜಾಗರೂಕತೆಯಿಂದರಬೇಕು.
ಕೆಲವೊಂದು ತಯಾರಿ ಮಾಡಿಕೊಂಡೆ ಹೊರಗೆ ಹೋಗಬೇಕು, ಇಲ್ಲವಾದ್ದಲ್ಲಿ ಮನೆಯಲ್ಲಿಯೇ ಇರಬೇಕು. ಅನಾವಶ್ಯಕವಾಗಿ ಹೊರಗಡೆ ತಿರುಗಾಡಬಾರದು. ಎಕೆಂದರೆ ಸೂರ್ಯನ ಉಷ್ಣಾಂಶ ತುಂಬಾ ಪ್ರಖರತೆಯಿಂದ ಕೂಡಿರುತ್ತದೆ.
ಮಕ್ಕಳಲ್ಲಿ Dehydration ವೃದ್ಧರಲ್ಲಿ Sun stroke ಮಧ್ಯವಯಸ್ಕರಲ್ಲಿ ವಿಪರೀತ ತಲೆನೋವು ಹೆಚ್ಚಾಗುತ್ತದೆ.ಆದ್ದರಿಂದ ನಾನು ಕೆಳಗೆ ಸೂಚಿಸುವಂತೆ ಈ ಬೇಸಿಗೆಯಲ್ಲಿ ತಮ್ಮನ್ನು ತಾವು ಕಾಪಾಡಿಕೊಳ್ಳಬಹುದು.

1) ಗೃಹಿಣಿಯರು ನಿಮ್ಮ ಹೊರಗಿನ ಕೆಲಸಗಳನ್ನು ಸಂಜೆ ವೇಳೆಯಲ್ಲಿ ಮುಗಿಸಿಕೊಳ್ಳಿರಿ
2) ಬಿಸಿಲಿನಲ್ಲಿ ಹೊರ ಹೋಗಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಬಿಳಿ ಬಣ್ಣದ ಛತ್ರಿಯನ್ನು ಬಳಸಿ.
3) ಬಿಸಿಲಿನ ಪ್ರಖರತೆಯನ್ನು ಕಪ್ಪು ಮತ್ತು ನೀಲಿ ಬಣ್ಣ ಬೇಗ ಹೀರುವುದರಿಂದ ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ
4) ಸಾಧ್ಯವಾದಷ್ಟೂ ಕಾಟನ್ ಬಟ್ಟೆಗಳನ್ನು ಧರಿಸಿ
5) ವಯೋವೃದ್ಧರಿಗೆ ಮತ್ತು ಮಕ್ಕಳಿಗೆ ಮನೆಯಲ್ಲಿ ಹೆಚ್ಚು ಹೆಚ್ಚು ಜೀರಿಗೆ ನೀರು ಕುಡಿಯಲು ಕೊಡಿ
6) ಈ ಬಿಸಿಲಿನಲ್ಲಿ ವಿಟಮಿನ್ “ಸಿ” ಕೊರತೆ ಎದುರಾಗುವುದರಿಂದ ಪ್ರಕೃತಿಯ ಅಮೂಲ್ಯ ಕೊಡುಗೆ ನಿಂಬೆಹಣ್ಣಿನ ಪಾನಕ ಮಾಡಿಕೊಂಡು ಕುಡಿಯಿರಿ ಇಲ್ಲಿ‌ಸಕ್ಕರೆ ಬದಲು ರಾಸಾಯನಿಕ ರಹಿತ ಬೆಲ್ಲವನ್ನು ಬಳಸಿ
7) ಬೆಳಗ್ಗೆ ಎದ್ದ ತಕ್ಷಣ “ತುಳಸಿ” ಎಲೆಗಳನ್ನು Mixi ಯಲ್ಲಿ ರುಬ್ಬಿಕೊಂಡು ಎರಡು ಲೋಟದಷ್ಟು ನೀರನ್ನು ಬೆರೆಸಿ ಕುಡಿಯಿರಿ ಇದರಿಂದ ಕೆಲಸ ಮಾಡುವಾಗ ಸುಸ್ತಾಗುವುದಿಲ್ಲ
8 ) ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಹೆಚ್ಚು ಬಳಸಬೇಡಿ, ಇಲ್ಲವಾದರೆ ಗುದದ್ವಾರದಲ್ಲಿ ಉಷ್ಣತೆ ಹೆಚ್ಚಾಗಿ ಮಲವಿಸರ್ಜನೆಗೆ ತೊಂದರೆ ಜೊತೆಗೆ ಪೈಲ್ಸ್ ಬರುವ ಸಾಧ್ಯತೆ ಹೆಚ್ಚು!
8 ) ಈ ಸಮಯದಲ್ಲಿ ತಲೆ ಮತ್ತು ಮೆದುಳು ತಂಪಾಗಿರಬೇಕು ಆದ್ದರಿಂದ ಮಕ್ಕಳಿಗೆ ಎರಡು ದಿನಕ್ಕೊಮ್ಮೆ ತೆಂಗಿನ ಎಣ್ಣೆ ಬದಲು ರಾತ್ರಿ ಮಲಗುವಾಗ “ಹರಳೆಣ್ಣೆ” ಹಚ್ಚಿ ಬೆಳಗ್ಗೆ ಸ್ನಾನ ಮಾಡಿಸಿ. ವಯಸ್ಕರೂ ಇದನ್ನು ಅನುಸರಿಸಬೇಕು

9) ರಾತ್ರಿ ಮಲಗುವ ಮೊದಲು ತಣ್ಣೀರಿನ ಬಟ್ಟೆಯಿಂದ ನೆಲವನ್ನು ಒರೆಸಿಕೊಂಡು ತೆಳುವಾದ ಬಟ್ಟೆಯ ಮೇಲೆ ಮಲಗುವುದು ಸೂಕ್ತ, ಹಾಸಿಗೆ ಕೂಡ ಈ ಸಮಯದಲ್ಲಿ ಉಷ್ಣ ಹೆಚ್ಚು ಮಾಡುತ್ತದೆ
10) ಹೆಸರು ಕಾಳುಗಳನ್ನು ನೀರಿನಲ್ಲಿ ಅರ್ಧ ಗಂಟೆಯಷ್ಟು ನೆನಸಿಟ್ಟು ನಂತರ ಮಿಕ್ಸಿಯಲ್ಲಿ ಜ್ಯೂಸ್ (ಚೂರು ಬೆಲ್ಲ)ಮಾಡಿಕೊಂಡು ದಿನಕ್ಕೆರಡು ಬಾರಿ ಕುಡಿಯಿರಿ ಇದರಿಂದ ದೇಹ ತಂಪಾಗಿರುತ್ತದೆ
11 ) ಬಾಣಂತಿ ಹೆಣ್ಣು ಮಕ್ಕಳು ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು ಇಲ್ಲವಾದರೆ ತಾಯಿ ಮತ್ತು ಮಗುವಿಗೆ ಯಾವುದೇ ಸೋಂಕು ತಗುಲಬಹುದು
12) ಈ ಸಮಯದಲ್ಲಿ ಮೊಸರಿನ ಬದಲು ಕಡೆದ ಮಜ್ಜಿಗೆಯನ್ನು ಆಹಾರಕ್ಕೆ ಬಳಸಿ,ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುವುದರಿಂದ ಅಸಿಡಿಟಿ ಆಗುವುದಿಲ್ಲ
13) 5 ವರ್ಷದ ಒಳಗಿನ ಮಕ್ಕಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ಚಿಟಿಕೆಯಷ್ಟು ಅಯೋಡಿನ್ ಉಪ್ಪು ಬೆರೆಸಿದ ನೀರನ್ನು ಕುಡಿಸುತ್ತಿರಬೇಕು ಇದರಿಂದ ಮಕ್ಕಳನ್ನು Dehydration ನಿಂದ ಕಾಪಾಡಿಕೊಳ್ಳಬಹುದು
14) ಈ ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ಕ್ಷೇಮ, ದಿನಕ್ಕೆರಡು ಬಾರಿ ಅಂದರೆ ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಒಂದು ಬಕೆಟ್ ತಣ್ಣೀರಿಗೆ ಕನಿಷ್ಠ 10 ಪುದಿನ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ತಣ್ಣೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಬೆವರಿನ ದುರ್ಗಂಧ ದೂರವಾಗುವುದಲ್ಲದೇ ಬೆವರು ಗುಳ್ಳೆಗಳು ಚರ್ಮದ ಮೇಲೆ ಬರುವುದಿಲ್ಲ. ಇದನ್ನು ಪಾಲಿಸುವುದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದಾಗಿದೆ.

More News

You cannot copy content of this page