BBMP BUDGET 2024: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯವ್ಯಯದ ವಿಶ್ಲೇಷಣೆ ಅಭಿಪ್ರಾಯ

ನಮಸ್ಕಾರ

ಮಂಜುನಾಥ ಹಂಪಾಪುರ ಎಲ್, ಕಾರ್ಯಕ್ರಮದ ವ್ಯವಸ್ಥಾಪಕರು, ನಾಗರಿಕ ಸಹಭಾಗಿತ್ವ ಕರ್ನಾಟಕ, ಜನಾಗ್ರಹ ರವರು ಹೇಳುವಂತೆ ವಲಯಗಳಲ್ಲಿ ಆಡಳಿತವನ್ನು ಬಲಪಡಿಸಲು ಪ್ರತಿ ವಲಯಕ್ಕೆ ಒಬ್ಬರು ಐಎಎಸ್ ಶ್ರೇಣಿಯ ಅಧಿಕಾರಿಯನ್ನು ನೇಮಿಸಲಾಗುತ್ತಿರುವುದು ವಿಕೇಂದ್ರೀಕರಣ ಪ್ರಕ್ರಿಯೆಯಾಗಿದ್ದು ಇದು ಸ್ವಾಗತಾರ್ಹವಾಗಿದೆ, ಸ್ಥಳೀಯ ಕಾರ್ಯ ಯೋಜನೆಯನ್ನು ವಾರ್ಡ್ ಸಮಿತಿಗಳ ಮೂಲಕ ವಾರ್ಡ್ ಮಟ್ಟದಲ್ಲಿ ಅನುಷ್ಠಾನ ಮಾಡಬೇಕಾಗಿದ್ದು ಇದಕ್ಕಾಗಿ ವಾರ್ಡ್ ಕಾರ್ಯ ಯೋಜನೆಯನ್ನು ರೂಪಿಸಿ ಅದಕ್ಕೆ ಅಗತ್ಯ ಹಣವನ್ನು ಮೀಸಲಿರಿಸಬೇಕಾಗಿದೆ. ಈಗಾಗಲೇ 3 ವರ್ಷಗಳಿಂದ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೆ ನಗರದ ಜನರು ಸಕ್ರಿಯವಾಗಿ ಭಾಗವಹಿಸಬಹುದಾದ ಮತ್ತು ಸಾಂವಿಧಾನಿಕ ಹಕ್ಕು ಆದಂತಹ ವಾರ್ಡ್ ಸಮಿತಿ ಅಸ್ತಿತ್ವದಲ್ಲಿಲ್ಲದಂತಾಗಿದೆ ರಾಜ್ಯ ಸರ್ಕಾರ ಇದನೆಲ್ಲ ಗಮನದಲ್ಲಿಟ್ಟು ಸ್ಥಳೀಯ ಸರ್ಕಾರದ  ಚುನಾವಣೆಗೆ ಹೆಚ್ಚು ಒತ್ತು ನೀಡಬೇಕಾಗಿದೆ.

ಬೆಂಗಳೂರು ನಗರದ ಜನಸಂಖ್ಯೆಯ ಮಟ್ಟವು ಹೆಚ್ಚಿರುವುದನ್ನು ಅಲ್ಲಗಳೆಯುವಂತಿಲ್ಲ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಹೆಚ್ಚಿನ ಜನರು ಕಡಿಮೆ ಅಂತರದ ಸ್ಥಳಗಳಿಗೆ ಪಾದಚಾರಿ ಮಾರ್ಗಗಳನ್ನು ಬಳಸುವುದರಿಂದ ಮುಂದಿನ ದಿನಗಳಲ್ಲಿ ನಗರಕ್ಕೆ ಬಂದೊದಗ ಬಹುದಾದಂತಹ ಹವಾಮಾನ ವೈಪರೀತ್ಯಗಳಂತಹ ಸಮಸ್ಯೆಗಳನ್ನು ಈಗಿನಿಂದಲೇ ತಡೆಗಟ್ಟಬಹುದು ಈ ನಿಟ್ಟಿನಲ್ಲಿ ಪಾಲಿಕೆಯು 15ನೇ ಹಣಕಾಸು ಆಯೋಗದ “ಪರಿಶುದ್ಧ ಗಾಳಿ” ಯೋಜನೆ ಅಡಿಯಲ್ಲಿ ಲಭ್ಯವಿರುವ ಅನುದಾನದಲ್ಲಿ ರೂ.135 ಕೋಟಿಯನ್ನು. “ಅಂತಿಮ ಸಂಪರ್ಕ ಬಿಂದು” ಸಾಧಿಸಲು 45 ಕಿಮೀ ಉದ್ದದ ಪಾದಚಾರಿ ಸ್ನೇಹಿ ನಡಿಗೆ ಪಥಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು ಮತ್ತು ಹವಾಮಾನ ಕ್ರಿಯೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆಯನ್ನು ಮೊದಲ ಬಾರಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾರಂಭಿಸುತ್ತಿದ್ದು ಸ್ವಾಗತಾರ್ಹವಾಗಿದೆ.

ವರ್ಷವಾರು ಅನುದಾನಗಳು ಮತ್ತು ಸ್ವಂತ ಸ್ವೀಕೃತಿಗಳು

ವರ್ಷವಾರು ಅನುದಾನಗಳು ಮತ್ತು ಸ್ವಂತ ಸ್ವೀಕೃತಿಗಳು
ವಿವರಗಳು2020-212021-222022-232023-242024-25
ಸ್ವಂತ ಸ್ವೀಕೃತಿಗಳು10,8988,8719,98910,2098,292
ರಾಜ್ಯ ಅನುದಾನ3,7812,8606,4166,9043,590
ಕೇಂದ್ರ ಅನುದಾನ558560654461488

ಕಳೆದ ವರ್ಷಕ್ಕೆ ಹೋಲಿಸಿದರೆ, ಬಿಬಿಎಂಪಿ ಸ್ವಂತ ರಸೀದಿಗಳು 18% ಮತ್ತು ರಾಜ್ಯ ಅನುದಾನಗಳು 48% ರಷ್ಟು ಕುಸಿತ ಕಂಡಿವೆ, ಇದು ಬಿಬಿಎಂಪಿ ಆದಾಯವನ್ನು ಉತ್ಪಾದಿಸಲು ರಾಜ್ಯದ ಅನುದಾನವನ್ನು ಅವಲಂಬಿಸಿಲ್ಲ ಎಂಬ ಅಂಶವನ್ನು ಸೂಚಿಸುತ್ತದೆ, ಆದಾಗ್ಯೂ, ಸ್ವಂತ ರಸೀದಿಯಲ್ಲಿ ಕುಸಿತ ತನ್ನ ಸ್ವಂತ ಆದಾಯವನ್ನು ಕ್ರೋಢೀಕರಿಸಲು ಮತ್ತು ಕೇಂದ್ರದ ಅನುದಾನದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ಬಿಬಿಎಂಪಿಗೆ ಆತಂಕಕಾರಿ ಅಂಶವಾಗಿದೆ.

ಸ್ವೀಕೃತಿಗಳ ವಿಶ್ಲೇಷಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ವೀಕೃತಿಗಳ ಮೇಲಿನ ಕಾರ್ಯಕ್ಷಮತೆಯು ಅಂದರೆ ಆಯವ್ಯಯ ಅಂದಾಜು ಮತ್ತು ಪರಿಷ್ಕೃತ ಆಯವ್ಯಯದಲ್ಲಿ 2022-23 ಇದ್ದ 5%, 2023-24 ಕ್ಕೆ 19% ವ್ಯತ್ಯಾಸ ಕಂಡಿದ್ದರು ಈ ವ್ಯತ್ಯಾಸದಲ್ಲಿನ ಹೆಚ್ಚಳವು ಅಷ್ಟೊಂದು ಗಮನಾರ್ಹವಾದುದಲ್ಲವಾದರೂ ನಾವು ಇದನ್ನು ಇನ್ನೂ ಉತ್ತಮ ಬಜೆಟ್ ಅಭ್ಯಾಸ ಮತ್ತು ಅಂದಾಜಿನತ್ತ ಸಾಗುವುದಕ್ಕೆ ಸಹಕಾರಿಯಾಗಲಿದೆ ಎಂದು ಪರಿಗಣಿಸಬಹುದು.

ವಿವರಗಳುಆಯವ್ಯಯ ಅಂದಾಜು,(ರೂ ಕೋಟಿಗಳಲ್ಲಿ)ಪರಿಷ್ಕೃತ ಆಯವ್ಯಯ,(ರೂ ಕೋಟಿಗಳಲ್ಲಿ)ವಾಸ್ತವಿಕ (ರೂ ಕೋಟಿಗಳಲ್ಲಿ)ವ್ಯತ್ಯಾಸ (%)
ಆ ಅಂ v/s ಪ ಆ (%)ಆ ಅಂ v/s ವಾ(%)
2013-148,4453,2093,09362%63%
2014-155,9782,8944,20552%30%
2015-165,3944,5425,24616%3%
2016-179,3316,8196,57327%30%
2017-189,9967,5147,32125%27%
2018-1910,1297,3807,29627%28%
2019-2010,6887,0636,34334%41%
2020-2110,7166,7957,47937%30%
2021-229,2868,8058,8645%5%
2022-2310,4849,92791725%13%
2023-2411,8859,602NA19%NA
2024-2512,369NANANANA
  • 2013-14 ರಿಂದ, ಆಯವ್ಯಯ ಅಂದಾಜು (BE) ಮತ್ತು ಪರಿಷ್ಕೃತ ಆಯವ್ಯಯ ಅಂದಾಜುಗಳ (RE) ನಡುವಿನ ಬಜೆಟ್ ವ್ಯತ್ಯಾಸವು ಸರಾಸರಿ 28% ಮತ್ತು ಆಯವ್ಯಯ ಅಂದಾಜು ಮತ್ತು ವಾಸ್ತವಿಕಗಳ ನಡುವಿನ ಬಜೆಟ್ ವ್ಯತ್ಯಾಸವು ಸರಾಸರಿ 22%.
  • 2021-22 ಮತ್ತು 2022-23 ರಲ್ಲ, ಬಜೆಟ್ ವ್ಯತ್ಯಾಸವು (ಆ ಅಂ v/s ಪ ಆ) 5% ರಿಂದ 13% ವರೆಗೆ ಏರಿಳಿತವನ್ನು ಕಂಡಿದೆ, ಇದು ಸ್ಥಿರತೆಯನ್ನು ಕಾಪಾಡಿಕೊಳ್ಳುವ ಮತ್ತು ಬಜೆಟ್ ಅಭ್ಯಾಸ ಮತ್ತು ಉತ್ತಮ ಅಂದಾಜುಗಳನ್ನು ಸುಧಾರಿಸುವ ಅಗತ್ಯವನ್ನು ಪ್ರತಿಬಿಂಬಿಸುತ್ತದೆ.

ಪಾಲಿಕೆಯ ಒಟ್ಟು ವೆಚ್ಚದಲ್ಲಿ ಅಂದರೆ 12,369 ಕೋಟಿ ರೂ ಆಯವ್ಯಯದಲ್ಲಿ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗೆ 6,661 ಕೋಟಿ ರೂ ಗಳನ್ನೂ ಅಂದರೆ ಶೇಕಡ 54 ರಷ್ಟು ಮೀಸಲಿರಿಸಲಾಗಿದೆ. ಇದು ರಸ್ತೆಗಳು, ಉದ್ಯಾನವನಗಳು, ಸಾರ್ವಜನಿಕ ಶೌಚಾಲಯ, ಪಾದಚಾರಿ ಮಾರ್ಗ, ಹವಾಮಾನ ವೈಪರೀತ್ಯ ನಿರ್ವಹಣೆ ಇತ್ಯಾದಿಗಳನ್ನು ಒಳಗೊಂಡಿದೆ. ಇನ್ನೂ ರಾಜಸ್ವ ಪಾವತಿಗಳು 5,181ಕೋಟಿ ರೂ(41.8%),  ಬಂಡವಾಳ ಪಾವತಿಗಳು 6,661 ಕೋಟಿ ರೂ(53.8%) ಹಾಗು ಅಸಾಧಾರಣ ಪಾವತಿಗಳು 527 ಕೋಟಿ ರೂ(4.2%) ಗಳಾಗಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2024-25 ನೇ ಸಾಲಿನ 12,369 ಕೋಟಿ ರೂ ಮೊತ್ತದ ಆಯವ್ಯಯವನ್ನು ಮಂಡಿಸಿರುತ್ತದೆ. ಇದರಲ್ಲಿ ರಾಜ್ಯ ಸರ್ಕಾರದ ಅನುದಾನ 3,589 ಕೋಟಿ ರೂ, ಕೇಂದ್ರ ಸರ್ಕಾರದ ಅನುದಾನ 488 ಕೋಟಿ ರೂ, ತೆರಿಗೆ ಮತ್ತು ಕರಗಳ ಆದಾಯ 4,470 ಕೋಟಿ ರೂ, ತೆರಿಗೆಯೇತರ ಆದಾಯ 3,097 ಕೋಟಿ ರೂ ಮತ್ತು ಅಸಾಧಾರಣ ಆದಾಯ 724 ಕೋಟಿ ರೂ, ಸಂಗ್ರಹಿಸಲು ಅಂದಾಜಿಸಲಾಗಿದೆ.

More News

You cannot copy content of this page