BJP WILL ASK RESIGN EVERYDAY..?: ಬಸ್ ನಲ್ಲಿ ಬಂದಿದ್ದರಿಂದ ತನಿಖೆ ನಡೆಯುತ್ತಿದೆ: ಹೋಟೆಲ್ ಸಕ್ಸಸ್ ಗಾಗಿ ಬಾಂಬ್ ಇಟ್ಟಿರುವ ಶಂಕೆ: ಗೃಹ ಸಚಿವ

ಬೆಂಗಳೂರು : ಇಂದಿರಾನಗರದ ರಾಮೇಶ್ವರಂ ಕೆಫೆ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಸರ್ಕಾರ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದು, ಆಳವಾದ ತನಿಖೆ ನಡೆಯುತ್ತಿದೆ, ಸಾಕಷ್ಟು‌ ಕುರುಹುಗಳು ಸಿಕ್ಕಿವೆ, ಸಿಸಿ ಟಿವಿಯಲ್ಲಿ ಕೆಲವು ಸಾಕ್ಷ್ಯಗಳು ಸಿಕ್ಕಿವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬ್ ಬ್ಲಾಸ್ಟ್ ಆದ ಬಳಿಕ ಸುಮಾರು 28 ಬಸ್ ಗಳು ಓಡಾಡಿವೆ.‌ ಆತ ಬಸ್ ನಲ್ಲಿ ‌ಬಂದಿರುವ ಸಾಧ್ಯತೆ‌ ಇದೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದರು.
ಬಸ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇದೆ. ಯಾವ ಕಾರಣಕ್ಕೂ‌ ಆರೋಪಿಯನ್ನು ಬಿಡೋದಿಲ್ಲ, ಎಷ್ಟೇ ತಪ್ಪಿಸಿಕೊಳ್ಳಲು ಮಾಡುವ ಯಾವ ಪ್ರಯತ್ನ ಫಲ ನೀಡಲ್ಲ, ಈ ಘಟನೆ individual ಆಗಿದೆಯೋ, ಅಥವಾ ಸಂಘಟನೆಯೊಂದರ ಕೈವಾಡವಿದೆಯೋ ಎನ್ನುವುದರ ಕುರಿತು ತನಿಖೆ ನಡೆಯುತ್ತಿದೆ ಎಂದು ವಿವರಿಸಿದರು.
ಸ್ಥಳಕ್ಕೆ ‌ಹೋದಾಗ ಅಲ್ಲಿ‌ ಕೆಲವರು ಹೋಟೆಲ್ ನವರು ಸಕ್ಸಸ್ ಆಗಿದ್ದಕ್ಕೆ‌ ಹೊಟ್ಟೆಹುರಿಯಿಂದ ಮಾಡಿರಬಹುದು ಅಂತಾ ಹೇಳಿದ್ದರು. ಇವೆಲ್ಲಾ ಆಯಾಮದಲ್ಲಿ ತನಿಖೆ ನಡೆಯುತ್ತಿದೆ ಎಂದರು. ಯಾವ ಸಂಘಟನೆ ಮಾಡಿದೆ ಅಂತಾ ಈಗಲೇ ಹೇಳೊಕೆ ಆಗೋದಿಲ್ಲ, ಅದೆಲ್ಲದರ ಬಗ್ಗೆಯೂ‌ ತನಿಖೆ ಆಗುತ್ತಿದೆ ಎಂದರು.

ವಿಪಕ್ಷಗಳಿಂದ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜೀನಾಮೆ ಕೇಳ್ತಾನೆ‌ ಇರ್ತಾರೆ, 2022ರಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ‌ ಇವರು ರಾಜೀನಾಮೆ ಕೊಟ್ಟಿದ್ರಾ..? ಎಂದು ಬಿಜೆಪಿಯವಿರಗೆ ಮರು ಪ್ರಶ್ನಿಸಿದರು.
ರಾಜೀನಾಮೆ ಕೇಳೋದು‌ ಇವರಿಗೆ ಅಭ್ಯಾಸ ಆಗಿಬಿಟ್ಟಿದೆ, ಸಿಎಂ, ಗೃಹ ಸಚಿವರು‌ ರಾಜೀನಾಮೆ ಕೊಡಿ ಅಂತಾರೆ, ನಮಗೆ‌ ಜವಬ್ದಾರಿ ಇದೆ..? ನಿನ್ನೆ‌ ಕೂಡ ಅಫೀಲ್ ಮಾಡಿದ್ದೇ‌ವೆ, ಇಂತಹ ಸಂದರ್ಭದಲ್ಲಿ ‌ಸಹಕಾರ‌ ನೀಡಿ ಅಂಥಾ ಹೇಳಿದ್ದೇವೆ, ಇದು ರಾಜ್ಯದ & ಬೆಂಗಳೂರಿನ ಸೇಫ್ಟಿಯ ಪ್ರತಿಷ್ಠೆಯಾಗಿದೆ ಎಂದು ವಿವರಿಸಿದರು.
Bangalore should be safer.. ನಿಟ್ಟಿನಲ್ಲಿ‌ ಅನೇಕ ಕಾರ್ಯಕ್ರಮ ಮಾಡಿದ್ದೇವೆ, ಆ‌ ಭಾಗದಲ್ಲಿರುವ ಸಿಸಿಟಿವಿ‌ ದೃಶ್ಯಾವಳಿ‌ ಕಲೆಕ್ಟ್ ಮಾಡಲಾಗಿದೆ, ನಮ್ಮಲ್ಲಿ ಸಮರ್ಥರು ಇದ್ದಾರೆ, FSL ಅವರು ಎಲ್ಲರೂ ಮುಂದೆ ಇದಾರೆ, ದೊಡ್ಡ ತಂಡದಿಂದ ಸ್ಯಾಂಪಲ್ ಸಂಗ್ರಹಿಸಿದ್ದಾರೆ, ಟೈಮರ್ ಇಟ್ಟಿದ್ದು, ‌ಅದಕ್ಕೆ ಎಷ್ಟು‌ ಕೆಪಾಸಿಟಿ ಇತ್ತು. ಈ ರೀತಿ ಎಲ್ಲದರ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ ಎಂದರು.
ಪಾಕಿಸ್ತಾನ್ ಜಿಂದಾಬಾದ್ ಕೂಗಿದ ಆರೋಪಕ್ಕೂ ಇದಕ್ಕೂ ಸಾಮ್ಯತೆ ಇದೆಯಾ ಎಂಬ ಪ್ರಶ್ನೆಗೆ ಅದೆಲ್ಲಾ ಊಹೆ‌ ಮಾಡಿ‌ ಹೇಳೋದಿಲ್ಲ, ಈ‌ ಘಟನೆ ಮಾಡಿದವರನ್ನ ಹಿಡಿತೇವೆ ಅಷ್ಟು ಮಾತ್ರ‌ ಹೇಳಬಹುದು,
ಸಿಎಂ ಮೀಟಿಂಗ್
ಇವತ್ತು ಮಧ್ಯಾಹ್ನ ಒಂದು ಗಂಟೆಗೆ ಸಿಎಂ ಅಧಿಕಾರಿಗಳ ಸಭೆ ಕರೆದಿದ್ದಾರೆ. ಸಭೆ ಎಲ್ಲಾ ರೀತಿಯಲ್ಲೂ ಚರ್ಚೆ ನಡೆಸಲಾಗುವುದು, ಘಟನೆ ಸಂಬಂಧ ‌ಕೆಲವು ಸೂಚನೆಗಳನ್ನು ನೀಡಲಾಗುವುದು ಎಂದು ಹೇಳಿದರು.

More News

You cannot copy content of this page