ಬೆಂಗಳೂರು: ಸಿನಿಮಾ ಜಗತ್ತಿನ ಮೂವರು ದಿಗ್ಗಜರು ಒಂದೇ ಕಡೆ ಸೇರಿದ್ದರು. ಕೆಜಿಎಫ್ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಮತ್ತು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಜ್ಯೂನಿಯರ್ ಎನ್ ಟಿಆರ್ ಒಂದೇ ಕಡೆ ಸೇರಿದ್ದರು.


ಅದೂ ಕಳೆದ ಮಾರ್ಚ್ 1 ರಂದು ಪ್ರಶಾಂತ್ ನೀಲ್ ಅವರ ಮನೆಯಲ್ಲಿ. ಮೂವರು ಸೇರಿ ನೀಡಿರುವ ಫೋಟೋವೊಂದು ಇದೀಗ ಸಕತ್ ವೈರಲ್ ಆಗಿದೆ. ಜ್ಯೂನಿಯರ್ ಎನ್ ಟಿಆರ್ ಮತ್ತು ಪ್ರಶಾಂತ್ ನೀಲ್ ಜತೆಯಾಗಿ ಸಿನಿಮಾ ಮಾಡುತ್ತಿದ್ದಾರೆ.

ದೇವರ ಸಿನಿಮಾ ಒಂದು ದೊಡ್ಡ ಬಜೆಟ್ ಕಮರ್ಷಿಯಲ್ ಆಕ್ಷನ್ ಚಿತ್ರವಾಗಿದೆ. ಇದು ಈ ಸಾಲಿನ ಕೊನೆಯಲ್ಲಿ ಅಂದರೆ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ. ಇದಕ್ಕೆ ದೇವರ ಭಾಗ 1 ಎಂದು ಹೆಸರಿಡಲಾಗಿದೆ.