ಬೆಂಗಳೂರು : ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಓಟಾದ ಕಳಪೆ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರ ಹೆಸರಿನಲ್ಲಿದೆ. ಆದರೆ, ಇದೀಗ ಕಳಪೆ ದಾಖಲೆ ಪಟ್ಟಿಯಲ್ಲಿ ಸಕ್ರೀಯ ಆಟಗಾರರ ಪಟ್ಟಿಯಲ್ಲಿದ್ದ ಭಾರತ ತಂಡದ ವಿರಾಟ್ ಕೊಹ್ಲಿಯನ್ನು ಬಾಂಗ್ಲಾದೇಶದ ಬ್ಯಾಟರ್ ತಮೀಮ್ ಇಕ್ಬಾಲ್ ಹಿಂದಿಕ್ಕಿದ್ದಾರೆ.

ಇದೊಂದು ಅನಗತ್ಯ ದಾಖಲೆಯಾಗಿದ್ದು, ಇದು ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು ಎನ್ನುವುದು ವಿಶೇಷ. ಇದನ್ನು ಬಾಂಗ್ಲಾದೇಶದ ಆಟಗಾರ ಮುರಿದು ಈ ದಾಖಲೆಯನ್ನು ಅವರ ಹೆಸರಿಗೆ ಬರೆದಿದ್ದಾರೆ.
ಬಾಂಗ್ಲಾದೇಶ್ ಪ್ರಿಮಿಯರ್ ಲೀಗ್ ನಲ್ಲಿ ರಂಗ್ ಪುರ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗುವುದರೊಂದಿಗೆ ತಮೀಮ್ ಇಕ್ಬಾಲ್ ಅನಗತ್ಯ ದಾಖಲೆ ಬರೆದಿದ್ದಾರೆ.

ಈ ಡಕ್ ಔಟ್ ನೊಂದಿಗೆ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಸಕ್ರೀಯ ಆಟಗಾರರಾಗಿದ್ದಾರೆ. ವಿರಾಟ್ ಕೊಹ್ಲಿ 580 ಇನ್ನಿಂಗ್ಸ್ ನಲ್ಲಿ ಒಟ್ಟು 35 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಪ್ರಸ್ತುತ ಆಡುತ್ತಿರುವ ಆಟಗಾರರಲ್ಲಿ ಅತ್ಯಧಿಕ ಬಾರಿ ಸೊನ್ನೆ ಸುತ್ತಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದೀಗ 452 ಇನ್ನಿಂಗ್ಸ್ ನಲ್ಲಿ ಆಡಿರುವ ಬಾಂಗ್ಲಾದೇಶದ ಎಡಗೈ ಆಟಗಾರ ತಮೀಮ್ ಇಕ್ಬಾಲ್ ಒಟ್ಟು 36 ಬಾರಿ ಡಕ್ ಔಟ್ ಆಗಿದ್ದಾರೆ. ಇದರಿಂದ ಇವರೀಗ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.

ಪಟ್ಟಿಯನ್ನು ಮೂರನೇ ಸ್ಥಾನವನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಪಡೆದುಕೊಂಡಿದ್ದಾರೆ. 497 ಇನ್ನಿಂಗ್ಸ್ ಆಡಿರುವ ಅವರು 33 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ 328 ಇನ್ನಿಂಗ್ಸ್ ಆಡಿರುವ ಮುತ್ತಯ್ಯ ಮುರುಳೀಧರನ್ ಅವರು 59 ಬಾರಿ ಸೊನ್ನೆ ಸುತ್ತಿದ್ದಾರೆ. ಈ ಮೂಲಕ ಡಕ್ ಔಟ್ ಆದ ವಿಶ್ವದಾಖಲೆ ಅವರ ಹೆಸರಿನಲ್ಲಿದೆ.