ಬೆಂಗಳೂರು: ತಮ್ಮದೇ ಆದ ವಶಿಷ್ಟ ಮ್ಯಾನರಿಜಂನಿಂದ ಪಾತ್ರ ಯಾವುದೇ ಇರಲಿ ಅದಕ್ಕೆ ನ್ಯಾಯ ಒದಗಿಸುವ ನಟ ವಿಕ್ಕಿ ಕೌಶಲ್. ಅವರು ಯಾವತ್ತೂ ಒಂದೇ ರೀತಿಯ ಪಾತ್ರಗಳಿಗೆ ಕಟ್ಟುಬಿದ್ದವರಲ್ಲ, ಸಿಕ್ಕಿ ಪಾತ್ರಗಳಲ್ಲಿ ನಟಿಸಿ ಅದಕ್ಕೆ ನ್ಯಾಯ ಒದಗಿಸುವ ಪ್ರತಿಭಾವಂತ ನಟ.
ಆದರೆ ಅವರೀಗ ನಟಿ ರಶ್ಮಿಕ ಮಂದಣ್ಣ ಜತೆ ನಟಿಸಲು ಮುಂದಾಗಿದ್ದಾರೆ. ಹೊಸ ಸಿನಿಮಾದಲ್ಲಿ ಅವರು ರಶ್ಮಿಕಾ ಜತೆ ನಟಿಸಲು ಬರೋಬ್ಬರಿ 25 ಕೆಜಿ ತೂಕ ಹೆಚ್ಚಿಸಿಕೊಳ್ಳುತ್ತಿದ್ದರಂತೆ. ಹೊಸ ಚಿತ್ರದಲ್ಲಿ ವಿಕ್ಕಿ ಕೌಶಲ್ ಛತ್ರಪತಿ ಶಿವಾಜಿ ಪುತ್ರ ಛತ್ರಪತಿ ಸಾಂಬಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅವರು ತಮ್ಮ ತೂಕ ಹೆಚ್ಚಿಸಿಕೊಳ್ಳುವತ್ತ ಗಮನ ಕೇಂದ್ರಿಕರಿಸಿದ್ದಾರೆ.

ಇತ್ತೀಚೆಗೆ ರಿಲೀಸ್ ಆದ ಡಂಕಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ತದ ನಂತರ ಅವರು ತಮ್ಮ ತೂಕ ಹೆಚ್ಚಿಸಿಕೊಳ್ಳುವಲ್ಲಿ ಮುಂದಾಗಿದ್ದಾರೆ. ಅವರು ಹೆಚ್ಚಿನ ಸಮಯ ಜಿಮ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ ಹಾಗೆಯೇ ಫುಡ್ ಹ್ಯಾಬಿಟ್ ಬದಲಾಗಿದೆಯಂತೆ. ಈ ಚಿತ್ರದಲ್ಲಿ ಸಾಂಬಾಜಿ ಮಹಾರಾಜ್ ಅವರ ಪತ್ತಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ.