ಬೆಂಗಳೂರು : ಖಾಸಗಿ ಸಂಸ್ಥೆಗಳು FSL ರಿಪೋರ್ಟ್ ಅನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ, ಸರ್ಕಾರದ FSL ಅಥವಾ ಗೃಹ ಇಲಾಖೆಯ ಫಾರೆನ್ಸಿಕ್ ವರದಿ ಮೇಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಸಿಟಿವ್ ಆಗಿ ಕೂಗಿರೋದು ಧೃಡ ಅಂದ್ರೆ, ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಪದೇ ಪದೇ ವರದಿಯನ್ನ ಮುಚ್ಚಿಡುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಅವರು, ಅವರು ಆರೋಪ ಮಾಡಬೇಕು ಅಂತ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಮರು ದಿನವೇ ಪ್ರಿಯಾಂಕ್ ಖರ್ಗೆ ವರದಿ ಬಂದಿದೆ ಅನ್ನೋ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಚಿವರು ಯಾವ ಅಧಾರದ ಮೇಲೆ ಹೇಳಿದ್ದಾರೆ ಗೊತ್ತಿಲ್ಲ. ಇದು ನಮ್ಮಇಲಾಖೆಗೆ ಸಂಬಂಧಿಸಿದ್ದು. ನಮ್ಮ ವರದಿ ಬಂದ ಮೇಲೆ ಹೇಳುತ್ತೇನೆ ಎಂದರು.
ಖಾಸಗಿಯವರು ಯಾರು, ಅವರಿಗೆ NOC ಯಾರು ಕೊಟ್ಟಿದ್ದಾರೆ, ಅವರಿಗೆ ಈ ರೀತಿ ವರದಿ ಕೊಡಲು ಅನುಮತಿ ಇದೆಯಾ.? ಎಲ್ಲವನ್ನೂ ಚೆಕ್ ಮಾಡಲಾಗುವುದು ಎಂದರು.
ಕೆಫೆ ಬಾಂಬ್ ಬ್ಲಾಸ್ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಈ ಸಂಬಂಧ ಅಧಿಕಾರಿಗಳ ಸಭೆ ಮಾಡಿ, ಎಲ್ಲವನ್ನೂ ಹೇಳಿದ್ದೇನೆ. ಕೆಲ ವಿಚಾರ ಹಂಚಿಕೊಳ್ಳಲು ಆಗಲ್ಲ. NIA ಈಗಾಗಲೇ ಬಂದಿದ್ದಾರೆ, NSG ಕೂಡ ಬಂದಿದ್ದಾರೆ. ಇದರ ಹಿಂದೆ ಯಾರಿದ್ದಾರೆ, ವ್ಯಕ್ತಿ ಇದ್ದಾರಾ, ಸಂಘಟನೆ ಇದೆಯಾ.? ಎಲ್ಲವನ್ನೂ ಪರಿಶೀಲನೆ ಮಾಡಲಾಗುವುದು ಎಂದರು.
ಕ್ಯಾಬಿನೆಟ್ ನಲ್ಲಿಟ್ಟು ಚರ್ಚೆ ನಂತರ ಜಾತಿ ಗಣತಿ ವರದಿ ಬಗ್ಗೆ ನಿರ್ಧಾರ
ಜಾತಿಗಣತಿ ವರದಿ ವಿಚಾರವಾಗಿ ಸಿಎಂ ಅವರೇ ಹೇಳಿದ್ದಾರೆ. ಕ್ಯಾಬಿನೆಟ್ ನಲ್ಲಿ ಇಟ್ಟು ನಿರ್ಧಾರ ಎಂದಿದ್ದಾರೆ. ವಿರೋಧ ಮಾಡೋದು, ಪರ ಮಾಡೋದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದಿದ್ದೇ. ವರದಿ ತರಿಸಿಕೊಂಡ ಮೇಲೆ ಲಾಜಿಕ್ ಎಂಡ್ ಪಡೆಯುತ್ತದೆ, ಸಿಎಂ ಕ್ಯಾಬಿನೆಟ್ ನಿರ್ಧಾರಕ್ಕೆ ನಾವು ಬದ್ದ ಎಂದು ಸ್ಪಷ್ಟಪಡಿಸಿದರು.