ಹುಬ್ಬಳ್ಳಿ : ಕಾನೂನು ಬಾಹಿರ ಲೇಔಟ್ ಗಳನ್ನು ನಿರ್ಮಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಶಾಕೀರ ಸನದಿ ಖಡಾಖಂಡಿತವಾಗಿ ಎಚ್ಚರಿಕೆ ನೀಡಿದ್ದಾರೆ. ನಗರದ ನವನಗರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಸಕ್ರಮ ಲೇಔಟ್ ಗಳಿಂದ ಬಡವರಿಗೆ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಏಕೆಂದರೆ ರಾಜ್ಯ ಸರ್ಕಾರಕ್ಕೆ ಆದಾಯ ಖೋತಾ ಆಗೋದಲ್ಲದೃ ಕಾನೂನು ಲೋಪ ಆಗುತ್ತದೆ. ಈ ನಿಟ್ಟಿನಲ್ಲಿ ಅಕ್ರಮವಾಗಿ ಲೇಔಟ್ ನಿರ್ಮಿಸಲು ಬಿಡುವುದಿಲ್ಲ. ಹು-ಧಾ ಅವಳಿನಗರದ ಸೌಂದರ್ಯಿಕರಣಕ್ಕೆ ಮೊದಲ ಆದ್ಯತೆ ನೀಡುತ್ತವೆ. ಸೈಟ್ ಕೊಟ್ಟ ಉದ್ದೇಶವನ್ನು ಬದಲಾವಣೆ ಮಾಡಿದರೇ, ಅದಕ್ಕೆ ನೋಟೀಸ್ ಎಚ್ಚರಿಕೆ ನೀಡುತ್ತೇವೆ. ೧೦ ವರ್ಷ ಮುಂದುವರೆದರೇ ಸೈಟ್ ಹುಡಾ ವಶಕ್ಕೆ ಪಡೆಯುತ್ತೇವೆ ಎಂದರು.
ಗ್ರಾಹಕರಿಗೆ ಸರಕಾರವೇ ತಯಾರಿಸಿದ ಎನ್.ಎ ಸೈಟ್ ಗಳನ್ನು ನಿರ್ಮಿಸಿ ಕೊಡುವ ಪ್ರಯತ್ನ ಮಾಡುತ್ತೇವೆ. ಹು-ಧಾ ಜನರು ಅಕ್ರಮ-ಸಕ್ರಮ ಲೇಔಟ್ ನಿರ್ಮಿಸಿ ಖರೀದಿ ಮಾಡುವ ಕೆಲಸಕ್ಕೆ ಮುಂದಾಗಬೇಡಿ. ಜಾಗ ಅಗತ್ಯವಿದ್ದಲ್ಲಿ ಪ್ರಾಧಿಕಾರ ಸಂಪರ್ಕಿಸಿ ಉತ್ತಮ ಹಾಗೂ ನ್ಯಾಯಯುತ ಸೈಟ್ ಪಡೆದುಕೊಳ್ಳಿ ಎಂದರು.

ಈಗ ಪ್ರಾಧಿಕಾರದ ಎರಡು ಯೋಜನೆಗಳಿಗೆ ಚರ್ಚೆ ನಡೆಸಿದ್ದೇನೆ. ಅದರಲ್ಲಿ ಹೊಸ ಲೇಔಟ್ ಮಾಡುವುದು ಮತ್ತು ಜಮೀನು ಮಾಲೀಕರ ಜೊತೆಗೆ ಜೆವಿ ಮೂಲಕ ೫೦%೫೦ ಅಡಿಯಲ್ಲಿ ಲೇಔಟ್ ನಿರ್ಮಾಣ ಮಾಡಿ ಮಾರಾಟ ಮಾಡುವ ಚಿಂತನೆಯಿದೆ. ಕನಿಷ್ಠ ೫೦ ಎಕರೆ ಜಮೀನು ಪಡೆದು ಈ ಯೋಜನೆ ಮಾಡುವ ಚಿಂತನೆಯಿದೆ ಎಂದರು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹಾಗೂ ಸರ್ಕಾರದ ಕೆಲಸದಲ್ಲಿ ಭ್ರಷ್ಟಾಚಾರ ಮಾಡದಂತೆ ತಡೆಯಲು, ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಕೆಲವೇ ದಿನಗಳಲ್ಲಿ ನನ್ನ ಕಾರ್ಯ ವೈಖರಿ ತಿಳಿದು ಬರಲಿದೆ. ಅದರಂತೆಯೇ ನಾನು ಖಾಲಿ ಕೈಯಲ್ಲಿ ಅಧಿಕಾರ ವಹಿಸಿಕೊಂಡಿದ್ದೇನೆ.ನಾಳೆಯೂ ಹಾಗೆಯೇ ಹೋಗುತ್ತೇನೆ. ಆದರೇ ಅಧಿಕಾರದ ಅವಧಿಯಲ್ಲಿ ಯಾವುದೇ ಅಕ್ರಮಕ್ಕೆ ದಾರಿಮಾಡಿ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ನುಡಿದರು.
ಪತ್ರಕರ್ತರಿಗೆ ಲೇಔಟ್ ಹಂಚಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬರುವ ಮುಂಬರುವ ದಿನಗಳಯ ಪತ್ರಕರ್ತರಿಗೆ ಮನೆ ನಿರ್ಮಿಸಿಕೊಳ್ಳಲು ಲೇಔಟ್ ಮಾಡುವ ಕುರಿತು ಪ್ರಯತ್ನಿಸಲಾಗುವುದು. ಇಲ್ಲದೃ ಹೋದಲ್ಲಿ ಬರುವ ದಿನಗಳಲ್ಲಿ ಹೊಸದಾಗಿ ಲೇಔಟ್ ನಿರ್ಮಾಣ ಮಾಡುವವರಿಗೆ ಶೇ. ೫ ರಷ್ಟು ಮೀಸಲಾತಿ ನೀಡುವ ಪ್ರಯತ್ನ ಮಾಡಲಾಗುವುದು. ಹೊಸದಾಗಿ ಲೇಔಟ್ ಮಾಡುವಾಗ ಪತ್ರಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.

ಹುಢಾ ಕಮೀಷನರ್ ಸಂತೋಷ್ ಬಿರಾದಾರ ಮಾತನಾಡಿ, ಹುಡಾ ವ್ಯಾಪ್ತಿಯ ಸೈಟ್ ಕುರಿತಂತೆ ಈಗಾಯ ನಾಲ್ಕೈದು ರೈತರ ಜೊತೆಗೆ ಜಮೀನು ಪಡೆಯುವ ಕುರಿತು ಚರ್ಚಿಸಲಾಗಿದೆ. ಈಗ ೮೦೦ ಕಾರ್ನರ್ ಸೈಟ್ ಗಳನ್ನು ಆಕ್ಷನ್ ಮಾಡುವ ಸಿದ್ದತೆ ಮಾಡಿಕೊಳ್ಳಲಾಗುವುದು. ಹಂತ ಹಂತವಾಗಿ ಸೈಟ್ ಮಾರಾ ಮಾಡಲಾಗುವುದು ಎಂದರು.
ನಮ್ಮ ಹುಡಾ ಲೇಔಟ್ ಗಳು ಪಾಲಿಕೆ ಅಧೀನಕ್ಕೆ ಒಳಪಡಿಸಲಾಗಿದೆ.ಅಲ್ಲಿ ಸ್ವಚ್ಚತೆ ಹಾಗೂ ಮನೆ ನಿರ್ಮಾಣ ಮಾಡದೇ ಹೋದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಹುಡಾ ಲೇಔಟ್ ಈ ಸ್ವತ್ತು ಆಗದೇ ಇರುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದ ಅವರು, ಇಲ್ಲಿಯವರೆಗೂ ೧೦೦ ಎಕರೆ ಅಕ್ರಮ ಲೇಔಟ್ ತೆರವು ಮಾಡಿದ್ದೇವೆ. ಮತ್ತೆ ಕೆಲವರಿಗೆ ಅಭಿವೃದ್ಧಿ ಮಾಡದಂತೆ ಹಾಗೂ ಸ್ವಯಂ ತೆರವಿಗೆ ಸೂಚನೆ ನೀಡಿದ್ದೇವೆ. ಲೇಔಟ್ ತೆರವಿಗೆ ಸ್ಪಂದಿಸದೇ ಹೋದಲ್ಲಿ ಅಂತವರ ಮೇಲೆ ಮುಲಾಜಿಲ್ಲದೇ ಕ್ರಿಮಿನಲ್ ಕೇಸ್ ಹಾಕಲಾಗುವುದು. ಅಕ್ರಮ ಸಕ್ರಮ ಲೇಔಟ್ ಬಗ್ಗೆ ಮಾಹಿತಿ ಕೊಟ್ಟಲ್ಲಿ, ಅದನ್ನು ತೆರವು ಮಾಡುವ ಕೆಲಸ ಮಾಡುವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರ ಉಪಸ್ಥಿತರಿದ್ದರು.
ಬಾಕ್ಸ್
ನಾನು ಲೋಕಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿ:
ಕಾಂಗ್ರೆಸ್ ಪಕ್ಷವು ಹುಡಾ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಜವಾಬ್ದಾರಿ ನೀಡಿದೆ. ಈ ಕಾರ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಣೆ ಮಾಡುತ್ತೇನೆ. ಆದರೂ ಕೂಡಾ ನಾನು ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷೆಯಾಗಿದ್ದೇನೆ. ಅದರಂತೆ ನನ್ನ ಪ್ರಯತ್ನವನ್ನು ಮುಂದುವರೆಸುತ್ತೇನೆಂದು ಹೇಳುವ ಮೂಲಕ ಶಾಕೀರ ಸನದಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.