ಬೆಂಗಳೂರು : ದೇಶದ ದ್ರೋಹದ ಕೆಲಸಕ್ಕೆ ಯಾರೇ ಕೈ ಹಾಕಿದ್ರು ಅವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ, ಹಾಗೆಯೇ ಅವರಿಗೆ ಫ್ರೀ ಹ್ಯಾಂಡ್ ನೀಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದ್ರು ಕ್ರಮ ಆಗಲಿದೆ, ನಾವು ಈ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದು ಹೇಳಿದ್ದೇವೆ, ನಿನ್ನೆ ಮಧ್ಯಾಹ್ನವೇ ಮೂವರನ್ನು ವಶಕ್ಕೆ ಪಡೆದಿದ್ದಾರೆ, ವಾಯ್ಸ್ ಟೆಸ್ಟ್ ಕೂಡ ಮಾಡಲಾಗುತ್ತಿದೆ, ವಾಯ್ಸ್ ಮ್ಯಾಚ್ ಆದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದರು.
ಬಿಜೆಪಿ ಅವರು ಮಾತಾಡ್ತಾ ಇದ್ದಾರೆ ಮಾತಾಡಲಿ ಅವರು, ಬಿಜೆಪಿ ಮುಖಂಡರು ಪೊಲೀಸರಿಗೆ ತನಿಖೆ ಯಾವ ರೀತಿಯಲ್ಲಿ ಮಾಡಬೇಕು ಎನ್ನುವುದನ್ನು ಹೇಳಿಕೊಡಲಿ ಎಂದು ವ್ಯಂಗ್ಯವಾಡಿದರು.
ಪ್ರಕರಣದಲ್ಲಿ ಬೇರೆಯವರು ಅಭಿಪ್ರಾಯ ಹೇಳಿದ್ದಾರೆ, ಆದ್ರೆ ಪೊಲೀಸ್ ಅಭಿಪ್ರಾಯ ಬಹಳ ಮುಖ್ಯವಾಗಿರುತ್ತದೆ, ವಾಯ್ಸ್ ಸ್ಯಾಂಪಲ್ ಬಹಳ ಮುಖ್ಯ, ಪೊಲೀಸ್ ಫ್ರಿ ಹ್ಯಾಂಡ್ ಕೊಟ್ಟಿದ್ದೇವೆ, ಮಂಡ್ಯ ಘೋಷಣೆ ಕೂಡ ತನಿಖೆ ಆಗುತ್ತಿದೆ, ಬಿಜೆಪಿಯವರು ಮಂಡ್ಯ ಘಟನೆ ಬಗ್ಗೆ ಮಾತನಾಡಲಿ, ಬಿಜೆಪಿ ಬಾಯಿ ಮುಚ್ಚಿಸಲು ಹೋಗಿದ್ದರು ಎಂದರು.
ಸುರ್ಜೇವಾಲರೊಂದಿಗೆ ಸಭೆ
ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಸಿಎಂ ಹಾಗೂ ತಾವು ಸಭೆ ನಡೆಸಿದ್ದು, ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡಿದ್ದೇವೆ, 4000 ಕಾರ್ಯಕರ್ತರನ್ನು ನಾಮ ನಿರ್ದೇಶನ ಮಾಡಬೇಕು, ಇದರ ಜೊತೆಗೆ ಬೇರೆಯದು ಸೇರಿ ಒಟ್ಟು ಎಳೆಂಟು ಸಾವಿರ ಜನರಿಗೆ ನಾಮ ನಿರ್ದೇಶನ ಮಾಡಬೇಕು, ಇದರ ಬಗ್ಗೆ ನಾನು ಸಿಎಂ ಮಾತಾಡಿದ್ದೇವೆ ಎಂದರು.
7 ನೇ ತಾರೀಖು ದೆಹಲಿಯಲ್ಲಿ CEC ಸಭೆ ನಡೆಯುತ್ತದೆ, ಆ ಸಭೆಗೆ ನಾನು ಮತ್ತು ಸಿಎಂ ಹೋಗುತ್ತವೆ. ಅಭ್ಯರ್ಥಿ ಪಟ್ಟಿಯನ್ನು ಫೈನಲ್ ಮಾಡಲಾಗುವುದು ಎಂದರು.